ADVERTISEMENT

ಮದ್ದೂರು |ಹಣ,ಆಸ್ತಿಗಾಗಿ ಮಗನಿಂದಲೇ ತಂದೆಗೆ ಬ್ಲಾಕ್‌ಮೇಲ್: ಮಗ ಸೇರಿ ನಾಲ್ವರ ಬಂಧನ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2025, 3:08 IST
Last Updated 4 ಸೆಪ್ಟೆಂಬರ್ 2025, 3:08 IST
<div class="paragraphs"><p>ಬಂಧನ</p></div>

ಬಂಧನ

   

(ಪ್ರಾತಿನಿಧಿಕ ಚಿತ್ರ)

ಮದ್ದೂರು: ಹಣ ಹಾಗೂ ಆಸ್ತಿಗಾಗಿ ಮಗನೇ ತಂದೆಯನ್ನು ಬ್ಲಾಕ್ ಮೇಲ್ ಮಾಡಿ ಪೊಲೀಸರಿಗೆ ಅತಿಥಿಯಾಗಿರುವ ಘಟನೆ ಪಟ್ಟಣದಲ್ಲಿ ನಡೆದಿದೆ.

ADVERTISEMENT

ಮದ್ದೂರು ಸೇರಿದಂತೆ ರಾಜ್ಯದ ಹಲವೆಡೆ ರಾಣಿ ಐಶ್ವರ್ಯ ಡೆವಲಪರ್ಸ್ ಹೆಸರಲ್ಲಿ ರಿಯಲ್ ಎಸ್ಟೇಟ್ ಉದ್ಯಮ ನಡೆಸುತ್ತಿರುವ ಉದ್ಯಮಿ ಸತೀಶ್‌ ಅವರಿಗೆ ಮಗ ಪ್ರಣವ್ ಬ್ಲಾಕ್ ಮೇಲ್ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

‘ದುಶ್ಚಟಗಳಿಗೆ ಬಲಿಯಾಗಿ ವಿರೋಧಿಗಳ ಜೊತೆ ಸೇರಿ ಹಣ ಹಾಗೂ ಆಸ್ತಿಗಾಗಿ ನನ್ನ ಜೊತೆ ಕಿರಿಕ್ ಮಾಡಿಕೊಂಡಿರುವ ಪ್ರಣವ್ ಈಗಾಗಲೇ ಕೋಟ್ಯಂತರ ರೂಪಾಯಿ ಕಳೆದು ಮತ್ತೆ ಹಣಕ್ಕೆ ಬೇಡಿಕೆ ಇಟ್ಟಿದ್ದ. ಹಣ ಕೊಡದೇ ಇದ್ದದ್ದಕ್ಕೆ ಕೆಲವರ ಜೊತೆ ಸೇರಿ ವೈಯುಕ್ತಿಕ ತೇಜೋವಧೆ ಮಾಡುತ್ತಿದ್ದಾನೆ. ನನ್ನ ಭಾವಚಿತ್ರಕ್ಕೆ ಅಶ್ಲೀಲ ಚಿತ್ರ ಹಾಗು ವಾಯ್ಸ್ ಎಡಿಟ್ ಮಾಡಿ ವಾಟ್ಸ್ಆ್ಯಪ್‌ ಗ್ರೂಪ್ ಗೆ ಹಾಕಿ‌ದ್ದಾನೆ’ ಎಂದು ತಂದೆ ಸತೀಶ್ ಪಟ್ಟಣದ ಪೊಲೀಸ್ ಠಾಣೆಗೆ ಮಂಗಳವಾರ ದೂರು ಸಲ್ಲಿಸಿದ್ದಾರೆ.

ಮಗನಿಗೆ ಪ್ರಚೋದಿಸಿದವರು ಸೇರಿ ಮಗನ ವಿರುದ್ಧ ಸತೀಶ್, ಮದ್ದೂರು ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಮೇರೆಗೆ ಆರೋಪಿಗಳಾದ ಪ್ರಣವ್ ಸೇರಿದಂತೆ ಗುಂಡ ಮಹೇಶ, ಈಶ್ವರ್, ಪ್ರೀತಮ್ ಅವರನ್ನು ಮದ್ದೂರು ಪೊಲೀಸರು ಮಂಗಳವಾರ ರಾತ್ರಿ ಬಂಧಿಸಿದ್ದಾರೆ. ಆರೋಪಿಗಳಿಗೆ ಸ್ಥಳೀಯ ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.