ಮದ್ದೂರು ಪಟ್ಟಣದ ಗುರುಭವನದಲ್ಲಿ ಸರ್ವ ಶಿಕ್ಷಣ ಕರ್ನಾಟಕ ಹಾಗೂ ಅಲಿಂಕೋ ವತಿಯಿಂದ ಶುಕ್ರವಾರ ನಡೆದ ಉಚಿತ ವೈದ್ಯಕೀಯ ಮೌಲ್ಯಂಕಾನ ಶಿಬಿರದಲ್ಲಿ ವಿವಿಧ ನ್ಯೂನ್ಯತೆಯ 72 ಮಕ್ಕಳಿಗೆ ಸಾಧನ ಸಲಕರಣೆಗಳನ್ನು ಶಾಸಕ ಕೆ.ಎಂ. ಉದಯ್ ವಿತರಿಸಿದರು.
ಮದ್ದೂರು: ವಿಶೇಷ ಚೇತನ ಮಕ್ಕಳಲ್ಲೂ ಅಸಾಧಾರಣ ಪ್ರತಿಭೆ ಇರುತ್ತದೆ. ಅದನ್ನು ಗುರುತಿಸಿ ತರಬೇತಿ ನೀಡಿ ಸೂಕ್ತ ವೇದಿಕೆ ಕಲ್ಪಿಸಿಕೊಟ್ಟರೆ ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುತ್ತಾರೆ ಎಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು.
ಪಟ್ಟಣದ ಗುರುಭವನದಲ್ಲಿ ಸರ್ವ ಶಿಕ್ಷಣ ಕರ್ನಾಟಕ ಹಾಗೂ ಅಲಿಂಕೋ ವತಿಯಿಂದ ಇತ್ತೀಚೆಗೆ ನಡೆದ ಉಚಿತ ವೈದ್ಯಕೀಯ ಮೌಲ್ಯಂಕನ ಶಿಬಿರ ಹಾಗೂ ವಿವಿಧ ನ್ಯೂನ್ಯತೆಯ ಒಟ್ಟು 72 ಮಕ್ಕಳಿಗೆ ಸಾಧನ ಸಲಕರಣೆಗಳನ್ನು ವಿತರಿಸಿ ಅವರು ಮಾತನಾಡಿದರು.
ಹಲವಾರು ವಿಶೇಷ ಚೇತನ ಮಕ್ಕಳು ತಮ್ಮ ಅಂಗವೈಕಲ್ಯ ಬದಿಗಿಟ್ಟು ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಅದ್ವಿತೀಯ ಸಾಧನೆ ಮಾಡಿದ್ದಾರೆ. ಅವರನ್ನು ಆದರ್ಶವಾಗಿಟ್ಟುಕೊಂಡು ನೀವು ಕೂಡ ಸಾಧನೆ ಮಾಡಲು ಮುಂದಾಗಬೇಕು ಎಂದು ಕಿವಿ ಮಾತು ಹೇಳಿದರು.
ರಾಜ್ಯ ಸರ್ಕಾರವು ವಿಕಲ ಚೇತನರಿಗೆ ಹಲವು ಸೌಲಭ್ಯಗಳನ್ನು ನೀಡುತ್ತಿದೆ. ಇದನ್ನು ಸದ್ಬಳಕೆ ಮಾಡಿಕೊಂಡು, ಸಮಾಜದ ಮುಖ್ಯವಾಹಿನಿಗೆ ಬರಬೇಕು. ಕದಲೂರು ಉದಯ್ ಚಾರಿಬಟಲ್ ಟ್ರಸ್ಟ್ ವತಿಯಿಂದಲೂ ಹಲವು ವರ್ಷಗಳಿಂದ ವಿಕಲ ಚೇತನರಿಗೆ ವೈಯಕ್ತಿವಾಗಿ ನೆರವು ಕೊಡುತ್ತಿದ್ದೇನೆ ಎಂದರು.
1 ರಿಂದ 10ನೇ ತರಗತಿವರೆಗಿನ, ವಿವಿಧ ನ್ಯೂನ್ಯತೆಯ 72 ಮಕ್ಕಳಿಗೆ ಟಿಎಲ್ಎಂ ಕಿಟ್, ಸಿಪಿ ಚೇರ್, ಹಿಯರಿಂಗ್, ವ್ಹೀಲ್‌ಚೇರ್ ಸೇರಿ ಇನ್ನಿತರ ಉಪಕರಣಗಳನ್ನು ವಿತರಿಸಲಾಯಿತು.
ಪುರಸಭಾ ಅಧ್ಯಕ್ಷೆ ಕೋಕಿಲಾ ಅರುಣ್, ಉಪಾಧ್ಯಕ್ಷ ಪ್ರಸನ್ನಕುಮಾರ್, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ರವೀಶ್, ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಚ್.ಎಸ್.ರವೀಶ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ದೇವರಾಜು, ಬಿಇಒ ಧನಂಜಯ, ಬಿಐಇಆರ್‌ಟಿ ಸುರೇಶ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕಿ ರಾಜೇಶ್ವರಿ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.