ಶ್ರೀರಂಗಪಟ್ಟಣ: ವಿಶ್ವೇಶ್ವರಯ್ಯ ನಾಲೆ ಬಳಿ ಹೊಂಡದಲ್ಲಿ ಮುಳುಗಿ ಮೈಸೂರಿನ ಮೂವರು ಸಾವು
ಶ್ರೀರಂಗಪಟ್ಟಣ (ಮಂಡ್ಯ ಜಿಲ್ಲೆ): ಶ್ರೀರಂಗಪಟ್ಟಣ ತಾಲ್ಲೂಕಿನ ಕೆ.ಆರ್.ಎಸ್. ಅಣೆಕಟ್ಟೆ ಸಮೀಪ ವಿಶ್ವೇಶ್ವರಯ್ಯ ನಾಲೆಗೆ ಹೊಂದಿಕೊಂಡಿರುವ ಹೊಂಡದಲ್ಲಿ ಮುಳುಗಿ ಮೈಸೂರಿನ ಮೂವರು ಮೃತಪಟ್ಟಿರುವ ಘಟನೆ ಸೋಮವಾರ ನಡೆದಿದೆ.
ಮೈಸೂರಿನ ಗೌಸಿಯಾ ನಗರದ ನಿವಾಸಿ ಇಮ್ರಾನ್ ಅವರ ಪುತ್ರಿ ಸೋನು (17), ರಿಜ್ವಾನ್ ಅವರ ಪುತ್ರಿ ಸಿಮ್ರಾನ್ (16) ಹಾಗೂ ಸೈಯ್ಯದ್ ನಾಸಿರ್ ಗೌಸ್ ಅವರ ಪುತ್ರ ಸಿದ್ದಿಕ್ (9) ಮೃತಪಟ್ಟಿದ್ದಾರೆ.
ಸೋನು, ಸಿಮ್ರಾನ್ ಮತ್ತು ಸಿದ್ದಿಕ್ ರಕ್ತ ಸಂಬಂಧಿಗಳಾಗಿದ್ದು, ಪಾಂಡವಪುರ ತಾಲ್ಲೂಕಿನ ಚಿಕ್ಕಾಯರಹಳ್ಳಿ ಗ್ರಾಮದ ತಮ್ಮ ಬಂಧುಗಳ ಮನೆಗೆ ಬಂದಿದ್ದರು.
ನಾರ್ತ್ ಬ್ಯಾಂಕ್ ಗ್ರಾಮದ ಸಮೀಪ ವಿಶ್ವೇಶ್ವರಯ್ಯ ನಾಲೆಗೆ ಹೊಂದಿಕೊಂಡಂತೆ ಇರುವ ಕಟ್ಟೆ ಮಾದರಿಯ ಹೊಂಡದ ಬಳಿ ಬಂದಾಗ ಸಿದ್ದಿಕ್ ಕಾಲು ಜಾರಿ ಬಿದ್ದಿದ್ದಾನೆ. ಆತನನ್ನು ರಕ್ಷಿಸಲು ಮುಂದಾದ ಸೋನು ಮತ್ತು ಸಿಮ್ರಾನ್ ಕೂಡ ನೀರಿನಲ್ಲಿ ಮುಳುಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೆ.ಆರ್.ಎಸ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.