ADVERTISEMENT

ನಾರಾಯಣಪುರ: ಬರಡು ನೆಲದ ಹೊಲದಲ್ಲಿ ತೀರ್ಥೋದ್ಭವ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2021, 3:02 IST
Last Updated 30 ಮಾರ್ಚ್ 2021, 3:02 IST
ಮೇಲುಕೋಟೆ ಸಮೀಪದ ನಾರಾಯಣ ಪುರದಲ್ಲಿ ಭಕ್ತರು ತೀರ್ಥೋದ್ಭವದ ಕುಂಡಿಕೆಗೆ ಪೂಜೆ ಸಲ್ಲಿಸಿದರು
ಮೇಲುಕೋಟೆ ಸಮೀಪದ ನಾರಾಯಣ ಪುರದಲ್ಲಿ ಭಕ್ತರು ತೀರ್ಥೋದ್ಭವದ ಕುಂಡಿಕೆಗೆ ಪೂಜೆ ಸಲ್ಲಿಸಿದರು   

ಮೇಲುಕೋಟೆ: ಸಮೀಪದ ನಾರಾಯಣಪುರದ ಬರಡು ನೆಲದ ಹೊಲದಲ್ಲಿ ಒಂದೆರಡು ಅಡಿ ಆಳ ತೆಗೆದ ಕುಂಡಿಕೆಯಲ್ಲಿ ಸೋಮವಾರ ತೀರ್ಥೋದ್ಭವವಾಗಿದೆ.

ಚೆಲುವನಾರಾಯಣಸ್ವಾಮಿಯ ಜಯಂತಿಯ ಅಂಗವಾಗಿ ಮಧ್ಯಾಹ್ನ 11ರ ಸುಮಾರಿಗೆ ಮೇಲುಕೋಟೆ ಕಲ್ಯಾಣಿಯಲ್ಲಿ ತೀರ್ಥಸ್ನಾನ ಆರಂಭವಾದ ತಕ್ಷಣ ನಾರಾಯಣಪುರದಲ್ಲಿ ಪೂಜೆ ಮಾಡಿ ಒಂದೆರಡು ಅಡಿ ಆಳದ ಗುಂಡಿ ತೋಡಲಾಯಿತು.

ಇದೇ ವೇಳೆ ಚೆಲುವನಾರಾಯಣನ ಭಾವಚಿತ್ರಕ್ಕೆ ಮಂಗಳಾರತಿ ಬೆಳಗಿ ಕುಂಡಿಕೆಗೆ ಪೂಜೆ ನಡೆಸಿ ಪ್ರಾರ್ಥಿಸಲಾಯಿತು. ಗ್ರಾಮಸ್ಥರು ಪೂಜೆ ನೆರವೇರಿಸಿ ತೀರ್ಥ ಸ್ವೀಕರಿಸಿದರು. ತೀರ್ಥಕ್ಕೆ ಬಂದ ಭಕ್ತರಿಗೆ ಪೂಜೆ ಬಳಿಕ ಪ್ರಸಾದ ವಿತರಿಸಲಾಯಿತು.

ADVERTISEMENT

ನಾರಾಯಣಪುರದ ಅನಿಲ್ ಕುಮಾರ್ ಸೇರಿದಂತೆ ಭಕ್ತರು ಭಾಗವಹಿಸಿದ್ದರು. ಪಾಂಡವಪುರ ಎಸ್.ಐ ಪ್ರಭಾಕರ್ ತೀರ್ಥೋದ್ಭವ ವೀಕ್ಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.