ಮಂಡ್ಯ: ನಗರದ ಗುತ್ತಲು ಬಡಾವಣೆಯ ಈರುಳ್ಳಿ ಅಂಗಡಿಯಲ್ಲಿ ಬುಧವಾರ ಮಾಲೀಕರ ಗಮನ ಬೇರೆಡೆ ಸೆಳೆದ ಕಳ್ಳರಿಬ್ಬರು ₹17 ಸಾವಿರ ನಗದು ದೋಚಿದ್ದಾರೆ.
ಮಧ್ಯಾಹ್ನ 2.45ರ ಸಮಯದಲ್ಲಿ ಗುತ್ತಲು ಬಡಾವಣೆಯ ಅರಕೇಶ್ವರ ಟ್ರೇಡರ್ಸ್‌ಗೆ ಈರುಳ್ಳಿ ಖರೀದಿಸುವ ನೆಪದಲ್ಲಿ ಬಂದ ಇಬ್ಬರು ಕಳ್ಳರು ಅಂಗಡಿಯ ಮುಂದೆ ಇಟ್ಟಿದ್ದ ಈರುಳ್ಳಿಯ ಬೆಲೆ ಎಷ್ಟು ಎಂದು ಕೇಳಿದ್ದಾರೆ.
ಅಂಗಡಿಯ ಒಳಗೆ ಕುಳಿತಿದ್ದ ಮಾಲೀಕರು ಮುಂದೆ ಬಂದು ಈರುಳ್ಳಿ ಬೆಲೆಯನ್ನು ತಿಳಿಸುತ್ತಿದ್ದಂತೆ, ಒಬ್ಬ ಕಳ್ಳ ಅಂಗಡಿಯ ಒಳಗೆ ಬರುತ್ತಾನೆ. ಅಷ್ಟರಲ್ಲಿ ಈರುಳ್ಳಿ ಖರೀದಿಸಲು ಮತ್ತಿಬ್ಬರು ಗ್ರಾಹಕರು ಅಂಗಡಿಗೆ ಬಂದ ಸಂದರ್ಭ ಬಳಸಿಕೊಂಡ ಒಳಗಿದ್ದ ಕಳ್ಳ, ನಗದು ಬಾಕ್ಸ್ ತೆಗೆದು ಅದರಲ್ಲಿದ್ದ ಹಣವನ್ನು ದೋಚಿ ಮತ್ತೊಬ್ಬನೊಂದಿಗೆ ಪರಾರಿಯಾಗಿದ್ದಾನೆ.
ಕಳ್ಳರಿಬ್ಬರ ಮುಖ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಸಂಬಂಧ ಅಂಗಡಿ ಮಾಲೀಕರು ಮಂಡ್ಯ ಪೂರ್ವ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.