ADVERTISEMENT

ಧನುಷ್ಕೋಟಿ ಜಲಪಾತ: ಕಡೆಗಣನೆ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2013, 10:19 IST
Last Updated 26 ಸೆಪ್ಟೆಂಬರ್ 2013, 10:19 IST

ಸಾಲಿಗ್ರಾಮ :  ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯ ದಿಂದ ಕೆ.ಆರ್‌.ನಗರ ತಾಲ್ಲೂಕಿನ ಚುಂಚನಕಟ್ಟೆ  ಗ್ರಾಮದ ಕೋದಂಡ ರಾಮ ದೇವಾಲಯದ ಬಳಿ ಹರಿಯುವ ಕಾವೇರಿ ನದಿಯ ಪುರಾಣ ಪ್ರಸಿದ್ದ ‘ಸೀತಾಮಡು ಮತ್ತು ಧನುಷ್ಕೋಟಿ’ ಜಲಪಾತಗಳು ‘ಜಲಪಾತೋತ್ಸವ’ ಇಲ್ಲದೆ ಪ್ರಕೃತಿಯ ಮಡಿಲಿನಲ್ಲೇ ಕಮರಿ ಹೋಗುವ  ಸ್ಥಿತಿ ಎದುರಾಗಿದೆ.

ಚುಂಚನಕಟ್ಟೆ ಗ್ರಾಮದ ಕಾವೇರಿ ನದಿಯ ದಂಡೆಯಲ್ಲಿ ಶ್ರೀರಾಮ, ಸೀತಾಮಾತೆಗೆ ಸ್ನಾನ ಮಾಡಲು ನೀರು ಬೇಕಾದ ಬಾಣ ಬಿಟ್ಟು ಭೂಮಿಯಿಂದ ನೀರನ್ನು ಬರುವಂತೆ ಮಾಡಿದ ಎಂಬುದು ಇಲ್ಲಿನ ಸ್ಥಳ ಪುರಾಣ. ಈ ಸ್ಥಳದಲ್ಲಿ ಕಾವೇರಿ ನದಿ ಸುಮಾರು 17ಮೀಟರ್‌ಗೂ ಎತ್ತರದಿಂದ ನೀರು ಧುಮ್ಮಿಕ್ಕುವ ದೃಶ್ಯ ನಿರ್ಮಾಣವಾಗಿದೆ. ಇದರ ಕುರುಹುವಾಗಿ ಇರುವ ಧನುಷ್ಕೋಟಿ ಮತ್ತು ಸೀತಾಮಡು ಜಲಪಾತವನ್ನು ಲಕ್ಷಾಂತರ ಮಂದಿ ಇಂದಿಗೂ ಭಕ್ತಿಯಿಂದ ಪೂಜೆ ಸಲ್ಲಿಸುತ್ತಿದ್ದಾರೆ. ನದಿ ದಂಡೆ ಮೇಲೆ ಮೈಸೂರು ಅರಸರ ಕಾಲದಲ್ಲಿ ನಿರ್ಮಾಣಗೊಂಡ ಕೋದಂಡರಾಮ ದೇವಾ­ಲಯಕೆ್ಕ ರಾಜ್ಯದ ಲಕ್ಷಾಂತರ ಭಕ್ತರು ಬಂದು ದೇವರ ದರ್ಶನ ಪಡೆಯುತಿ್ತದಾ್ದರೆ.

ಇಂತಹ ಚುಂಚನಕಟ್ಟೆ ಗ್ರಾಮ ಪ್ರವಾಸಿ ಕೇಂದ್ರವಾಗಲು ಎಲ್ಲ ಅರ್ಹತೆಗಳಿದ್ದರೂ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿ­ಗಳ ನಿರ್ಲಕ್ಷಕ್ಕೆ ಗುರಿಯಾಗಿದೆ.

ಹೂಮಾಲೆ ಹಾಕಿ ಪ್ರತಿಭಟನೆ : ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಆದಷ್ಟು ಬೇಗ ಚುಂಚನಕಟ್ಟೆ ಗ್ರಾಮವನ್ನು ಪ್ರವಾಸಿ ಕೇಂದ್ರವಾಗಿ ಮಾಡಬೇಕು ಮತ್ತು ಕಾವೇರಿ ನದಿಯ ‘ಧನುಷ್ಕೋಟಿ ಮತ್ತು ಸೀತಾಮಡು’ ಜಲಪಾತೋತ್ಸವವನ್ನು ಮಾಡಬೇಕು. ಇಲ್ಲದಿದ್ದರೆ  ಪ್ರವಾಸೋ­ದ್ಯಮ ಇಲಾಖೆ ಅಧಿಕಾರಿಗಳಿಗೆ ಸಿಕ್ಕ ಕಡೆ ಹೂ ಮಾಲೆ ಹಾಕುವ ಮೂಲಕ ಪ್ರತಿಭಟನೆ ಮಾಡಲಾಗುತ್ತದೆ. ಇದಕ್ಕೂ ಅಧಿಕಾರಿಗಳು ಜಗ್ಗದಿದ್ದರೆ ಪ್ರವಾಸೋ­ದ್ಯಮ ಇಲಾಖೆ ಮುಂದೆ ಧರಣಿ ಸತ್ಯಾಗ್ರಹ ಮಾಡಲಾಗುತ್ತದೆ ಎಂದು ಯುವ ಮುಖಂಡ ಸಾ.ರಾ. ನಂದೀಶ್‌ ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.