ADVERTISEMENT

ವಿವಿಧ ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2012, 8:13 IST
Last Updated 21 ಡಿಸೆಂಬರ್ 2012, 8:13 IST

ಹುಣಸೂರು: ತಾಲ್ಲೂಕಿನ ಹನಗೋಡು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಮಂಜುಳ ಮತ್ತು ಉಪಾಧ್ಯಕ್ಷರಾಗಿ ರತ್ನ ಶ್ರೀಧರ್ ಅವರು ಗುರುವಾರ ನಡೆದ ಚುನಾವಣೆಯಲ್ಲಿ ಚುನಾಯಿತರಾದರು.

 ರಾಜ್ಯ ಗೃಹ ಮಂಡಳಿ ಅಧ್ಯಕ್ಷ ಜಿ.ಟಿ.ದೇವೇಗೌಡ ಅವರ ರಾಜಕೀಯ ತವರಾಗಿದ್ದ ಹನಗೋಡು ಕ್ಷೇತ್ರದಲ್ಲಿ ಗ್ರಾಮ ಪಂಚಾಯಿತಿ ಅಧಿಕಾರ ಹಿಡಿಯುವಲ್ಲಿ ಬಿಜೆಪಿ ಬೆಂಬಲಿತರು ವಿಫಲರಾಗಿದ್ದಾರೆ. ಗೌಡರ ಪತ್ನಿ ಲಲಿತಾ ಜಿ.ಟಿ.ದೇವೇಗೌಡ ಅವರು ಹನಗೋಡು ಜಿಲ್ಲಾ ಪಂಚಾಯಿತಿ ಪ್ರತಿನಿಧಿ.

ಗುರುವಾರ ನಡೆದ ಹನಗೋಡು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಮಂಜುಳ 13 ಮತ ಪಡೆದು ಆಯ್ಕೆಯಾದರು. ಇವರ ವಿರುದ್ಧ ಸ್ಪರ್ಧಿಸಿದ್ದ ಹನಗೋಡು ಎ ಬ್ಲಾಕ್ ಸದಸ್ಯೆ ರತ್ನ ಶ್ರೀಧರ್ 10 ಮತ ಪಡೆದರು ಉಪಾಧ್ಯಕ್ಷ ಸ್ಥಾನಕ್ಕೆ ಹರಳಹಳ್ಳಿ ಗ್ರಾಮದ ಸದಸ್ಯೆ ಪ್ರಭಾವತಿ ಆಯ್ಕೆಗೊಂಡರು. ಬಿಜೆಪಿ ಬೆಂಬಲಿತ ಅಭ್ಯರ್ಥಿ ಕಾಮಗೌಡನಹಳ್ಳಿ ಸದಸ್ಯೆ ನೇತ್ರಾವತಿ ಸೋತರು.

ನೇರಳಕುಪ್ಪೆ ಗ್ರಾ.ಪಂ.
ಹುಣಸೂರು:
ತಾಲ್ಲೂಕಿನ ನೇರಳಕುಪ್ಪೆ ಗ್ರಾಮ ಪಂಚಾಯಿತಿಯ ಎರಡನೇ ಅವಧಿಗೆ ಬುಧವಾರ ನಡೆದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಯಲ್ಲಿ ಪ್ರಥಮ ಬಾರಿಗೆ ಜೇನುಕುರುಬ ಸಮುದಾಯದ ಮುತ್ತಮ್ಮ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.

 ನೇರಳಕುಪ್ಪೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನ ಎಸ್.ಟಿ. ಮಹಿಳೆಗೆ ಮೀಸಲಾಗಿತ್ತು. ನೇರಳಕುಪ್ಪೆ ಎ ಹಾಡಿ ಸದಸ್ಯೆ ಮುತ್ತಮ್ಮ ಅಧ್ಯಕ್ಷರ ಸ್ಥಾನಕ್ಕೆನಾಮ ಪತ್ರ ಸಲ್ಲಿಸಿದ್ದರು. ಪ್ರತಿಸ್ಪರ್ಧಿಗಳಿಲ್ಲದ್ದರಿಂದ ಮುತ್ತಮ್ಮ ಅವಿರೋಧವಾಗಿ ಆಯ್ಕೆಗೊಂಡರು.

ಉಪಾಧ್ಯಕ್ಷರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿ.ಆರ್.ಕಾವಲ್ ಕ್ಷೇತ್ರದ ಸದಸ್ಯ ಕೃಷ್ಣೇಗೌಡ 11 ಮತ ಪಡೆದು ಆಯ್ಕೆಯಾದರು. ಸಿಂಡೇನಹಳ್ಳಿ ಸದಸ್ಯ ಚಂದ್ರಶೇಖರ್ ಪ್ರತಿಸ್ಪರ್ಧಿಯಾಗಿದ್ದರು. ಚುನಾವಣೆಗೆ ಚಂದನಗಿರಿ ಸದಸ್ಯ ಶಾಂತಿಭೂಪತಿ ಗೈರು ಹಾಜರಾಗಿದ್ದರು.

ಬೈಲಕುಪ್ಪೆ ಗ್ರಾ.ಪಂ.
ಪಿರಿಯಾಪಟ್ಟಣ:
ತಾಲ್ಲೂಕಿನ ಬೈಲಕುಪ್ಪೆ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ರವಿ ಅಲಿಯಾಸ್ ಮಾನು, ಉಪಾಧ್ಯಕ್ಷರಾಗಿ ದೊಡ್ಡಹರವೆ ಮಂಜುಳಾ ಅವರು ಗುರುವಾರ ಆಯ್ಕೆಯಾದರು.

 ಬೈಲಕುಪ್ಪೆ ಪಂಚಾಯಿತಿಯಲ್ಲಿ 23 ಸದಸ್ಯರಿದ್ದು, 22 ಮಂದಿ ಗುರುವಾರ ಮತ ಚಲಾುಸಿದರು. ಅಧ್ಯಕ್ಷ ಸ್ಥಾನವು ಸಾಮಾನ್ಯ ವರ್ಗಕ್ಕೆ ಮೀಸಲಿದ್ದುದರಿಂದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ರವಿ ಅಲಿಯಾಸ್ ಮಾನು ಮತ್ತು ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಕೆ.ಪಿ.ಉತ್ತಯ್ಯ ನಾಮಪತ್ರ ಸಲ್ಲಿಸಿದ್ದರು.

ರವಿ ಅಲಿಯಾಸ್ ಮಾನು ಅವರು 13 ಮತ ಪಡೆದರೆ ಕೆ.ಪಿ.ಉತ್ತಯ್ಯ ಅವರು 9 ಮತ ಪಡೆದರು. ಉಪಾಧ್ಯಕ್ಷ ಸ್ಥಾನವು ಪರಿಶಿಷ್ಟ ಜಾತಿಗೆ ಮೀಸಲಿಲಾಗಿದ್ದು, ದೊಡ್ಡಹರವೆ ಮಂಜುಳಾ ಅವಿರೋಧವಾಗಿ ಆಯ್ಕೆಯಾದರು.

 ತಾಲ್ಲೂಕು ಪಂಚಾಯಿತಿ ಸದಸ್ಯ ಮಹದೇವ್, ಮಾಜಿ ಸದಸ್ಯ ಶೇಖರ್, ಕಾಂಗ್ರೆಸ್ ಮುಖಂಡರಾದ ಬಿ.ಜೆ.ಬಸವರಾಜು, ಎಸ್.ರಾಮು, ಪಿ.ಮಹದೇವ್ ಶುಂಠಿ ನಾಗರಾಜು ಇದ್ದರು.

ಮುಳ್ಳೂರು ಗ್ರಾ.ಪಂ.
ಸರಗೂರು:
ಸಮೀಪದ ಮುಳ್ಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಶಿವಮ್ಮ ಉಪಾದ್ಯಕ್ಷೆಯಾಗಿ ನಾಗರತ್ನಮ್ಮ ವರು ಗುರುವಾರ ಆಯ್ಕೆಯಾದರು. ಮುಳ್ಳೂರು ಗ್ರಾಮ ಪಂಚಾಯಿತಿ ಯಲ್ಲಿ 14 ಸದಸ್ಯರಿದ್ದು, 13 ಸದಸ್ಯರು ಹಾಜರಿದ್ದರು. ಅಧ್ಯಕ್ಷ ಸ್ಥಾನವು ಪರಿಶಿಷ್ಟವರ್ಗ ಮತ್ತು ಉಪಾಧ್ಯಕ್ಷರ ಸ್ಥಾನವು ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು.

ಅಧ್ಯಕ್ಷರ ಸ್ಥಾನಕ್ಕೆ ಶಿವಮ್ಮ, ಶಶಿ, ಪುಟ್ಟಸ್ವಾಮಿ ಅಲಿಯಾಸ್ ವಾಣಿ,  ಉಪಾಧ್ಯಕ್ಷರ ಸ್ಥಾನಕ್ಕೆ ನಾಗರತ್ನಮ್ಮ, ಗೋವಿಂದನಾಯಕ ನಾಮಪತ್ರ ಸಲ್ಲಿಸಿದರು.ಇವರಲ್ಲಿ ಅಧ್ಯಕ್ಷಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಪುಟ್ಟಸ್ವಾಮಿ ಅಲಿಯಾಸ್ ವಾಣಿ ನಾಮಪತ್ರ ವಾಪಸು ಪಡೆದರು.
  ಶಿವಮ್ಮ 7 ಮತ ಪಡೆದು ಅಧ್ಯಕ್ಷರಾಗಿ, ನಾಗರತ್ನಮ್ಮ 7 ಮತ ಪಡೆದ ಉಪಾಧ್ಯಕ್ಷರಾಗಿ ಆಯ್ಕೆಯಾದರು.

  ಚುನಾವಣಾಧಿಕಾರಿ  ನಾಗೇಂದ್ರ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸೋಮಶೇಖರ್, ಸರಗೂರು ನಾಡಕಚೇರಿ ಆರ್‌ಐ ನಾಗರಾಜು, ಮಹದೇವ್ ಇದ್ದರು. ಸರಗೂರು ಕಾಂಗ್ರೆಸ್ ಮುಖಂಡ ಎಸ್.ಎಲ್.ರಾಜಣ್ಣ, ಮಣಿ ಕುಮಾರ್, ಬೀರ‌್ವಾಳ್ ಬಸವ ರಾಜು, ಹೂವಿನ ಕೊಳ ಸಿದ್ದರಾಜು, ಚಿಕ್ಕಣ್ಣ ಇದ್ದರು.

ಹಾರೋಹಳ್ಳಿ ಮೆಲ್ಲಹಳ್ಳಿ ಗ್ರಾ.ಪಂ
ಮೈಸೂರು:
ತಾಲ್ಲೂಕಿನ ವರುಣಾ ಹೋಬಳಿಯ ಹಾರೋಹಳ್ಳಿ ಮೆಲ್ಲಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಜಿ.ಎಂ.ಪುಷ್ಪ ಬೋರೇಗೌಡ, ಉಪಾಧ್ಯಕ್ಷರಾಗಿ ದೇವಮ್ಮ ತಿಮ್ಮಯ್ಯ ಗುರುವಾರ ಅವಿರೋಧವಾಗಿ ಆಯ್ಕೆಯಾದರು.

ಗ್ರಾ.ಪಂ.ನಲ್ಲಿ 20 ಸದಸ್ಯರಿದ್ದು, ಅಧ್ಯಕ್ಷ ಸ್ಥಾನ ಬಿಸಿಎಂ `ಎ' ವರ್ಗಕ್ಕೆ ಹಾಗೂ ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡ ಮಹಿಳೆಗೆ ಮೀಸಲಾಗಿತ್ತು. ಸಿಡಿಪಿಒ ನಾಗರಾಜ್ ಚುನಾವಣಾ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿ ದರು. ಪಿಡಿಒ ಸತ್ಯವತಿ, ಇನ್ಸ್‌ಪೆಕ್ಟರ್ ಬಸಪ್ಪ ಉಪಸ್ಥಿತರಿದ್ದರು.

ಸನೂತನವಾಗಿ ಆಯ್ಕೆಯಾದ ಅಧ್ಯಕ್ಷ, ಉಪಾಧ್ಯಕ್ಷರನ್ನು ರಾಕೇಶ್ ಸಿದ್ರಾಮಯ್ಯ, ಎಪಿಎಂಸಿ ಸದಸ್ಯ ಬಿ.ಬೀರೇಗೌಡ, ಮಾಜಿ ಸದಸ್ಯ ಆನಂದ, ತಾಲ್ಲೂಕು ಪಂಚಾಯಿತಿ ಸದಸ್ಯ ಮಹಾದೇವಪ್ಪ, ಮಂಜುಳಾ, ರಮೇಶ್, ಜಬ್ಬಾರ, ದೊಡ್ಡಸ್ವಾಮಿ, ಗವಿಸಿದ್ಧ, ತಿಮ್ಮಣ್ಣ, ಬೋರೇಗೌಡ ಅಭಿನಂದಿಸಿದರು.
 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.