ADVERTISEMENT

ಎಸ್ಸೆಸ್ಸೆಲ್ಸಿ ಫಲಿತಾಂಶ: ಜಿಲ್ಲೆಗೆ 17ನೇ ಸ್ಥಾನ

ಕಳೆದ ಬಾರಿಗಿಂತ ಶೇ 2.65 ಫಲಿತಾಂಶ ಹೆಚ್ಚಳ: ಉತ್ತಮ ಪ್ರದರ್ಶನ ನೀಡಿದ ಸರ್ಕಾರಿ ಶಾಲೆಗಳು

​ಪ್ರಜಾವಾಣಿ ವಾರ್ತೆ
Published 3 ಮೇ 2019, 5:02 IST
Last Updated 3 ಮೇ 2019, 5:02 IST
ರೋಹನ್‌ ವಿ. ಗಂಗಡಕಾರ್
ರೋಹನ್‌ ವಿ. ಗಂಗಡಕಾರ್   

ಮೈಸೂರು: ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ 2018–19ನೇ ಸಾಲಿನಲ್ಲಿ ಜಿಲ್ಲೆಗೆ ರಾಜ್ಯದಲ್ಲಿ 17ನೇ ಸ್ಥಾನ ಲಭಿಸಿದೆ. ಶೇ 80.65 ಫಲಿತಾಂಶ ಲಭಿಸಿದ್ದು, ಕಳೆದ ಸಾಲಿನ ಫಲಿತಾಂಶಕ್ಕೆ ಹೋಲಿಸಿದಲ್ಲಿ ಫಲಿತಾಂಶದಲ್ಲಿ ತೀವ್ರ ಕುಸಿತ ಕಂಡಿದೆ.

ಈ ಸಾಲಿನಲ್ಲಿ ಜಿಲ್ಲೆಯಲ್ಲಿ ಒಟ್ಟು 35,485 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಅವರ ಪೈಕಿ 13,613 ಬಾಲಕರು (ಶೇ 76.85), 15,007 ಬಾಲಕಿಯರು (ಶೇ 84.45) ಉತ್ತೀರ್ಣರಾಗಿದ್ದಾರೆ. ಈ ಬಾರಿಯೂ ಬಾಲಕಿಯರೇ ಫಲಿತಾಂಶದಲ್ಲಿ ಮುಂದಿದ್ದಾರೆ.

ಗ್ರಾಮಾಂತರ ಪ್ರದೇಶ ಮುನ್ನಡೆ: ಈ ಬಾರಿಯ ಫಲಿತಾಂಶದಲ್ಲಿ ಗ್ರಾಮಾಂತರ ಪ್ರದೇಶಗಳೇ ಫಲಿತಾಂಶದಲ್ಲಿ ಮುಂದೆ ಇರುವುದು ವಿಶೇಷ. ಪಿರಿಯಾಪಟ್ಟಣ ಶೇ 90.59 ಫಲಿತಾಂಶ ಪಡೆದು ಮೊದಲ ಸ್ಥಾನದಲ್ಲಿದೆ. ಮೈಸೂರು ಗ್ರಾಮಾಂತರ (ಶೇ 89.77), ನಂಜನಗೂಡು (ಶೇ 88.22), ಹುಣಸೂರು (ಶೇ 86.61), ಕೆ.ಆರ್‌.ನಗರ (ಶೇ 86), ಎಚ್‌.ಡಿ.ಕೋಟೆ (ಶೇ 82.56), ಮೈಸೂರು ದಕ್ಷಿಣ (ಶೇ 76.50), ತಿ.ನರಸೀಪುರ (ಶೇ 67.86) ಮೈಸೂರು ಉತ್ತರ (ಶೇ 67.58) ನಂತರದ ಸ್ಥಾನಗಳಲ್ಲಿವೆ. ಈ ಪೈಕಿ ಮೈಸೂರು ಉತ್ತರ ಕೊನೆಯ ಸ್ಥಾನದಲ್ಲಿದೆ. ಮೊದಲ ಮೂರು ಸ್ಥಾನಗಳು ಗ್ರಾಮಾಂತರ ಪ್ರದೇಶಗಳಿಗೇ ಸಿಕ್ಕಿರುವುದು ವಿಶೇಷವಾಗಿದೆ.

ADVERTISEMENT

ರಾಜ್ಯ ಶೇಕಡಾವಾರು 73.70ಕ್ಕೆ ಹೋಲಿಸಿದಲ್ಲಿ ಶೇ 80.65 ಪಡೆಯುವ ಮೂಲಕ ಜಿಲ್ಲೆಯು ಶೇ 6.95ರಷ್ಟು ಮೇಲುಗೈ ಸಾಧಿಸಿದೆ. ಜಿಲ್ಲೆಯಲ್ಲಿ ಒಂದು ಅನುದಾನ ರಹಿತ ಶಾಲೆ ಮಾತ್ರ ಶೂನ್ಯ ಫಲಿತಾಂಶ ಗಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.