
ಹುಣಸೂರು (ಮೈಸೂರು ಜಿಲ್ಲೆ): ತಾಲ್ಲೂಕಿನ ಗೌಡನಕಟ್ಟೆ ಗ್ರಾಮದಲ್ಲಿ ಸೆರೆ ಸಿಕ್ಕಿದ್ದ 4 ಹುಲಿ ಮರಿಗಳು ಮೃತಪಟ್ಟಿವೆ. ಸಾವಿಗೆ ಪ್ಯಾನ್ ಲ್ಯೊಕೊಪೇನಿಯ ವೈರಸ್ ಕಾರಣ ಎನ್ನಲಾಗಿದೆ.
ನಾಗರಹೊಳೆ ಅರಣ್ಯ ವೀರನಹೊಸಹಳ್ಳಿ ವಲಯಕ್ಕೆ ಹೊಂದಿಕೊಂಡಿರುವ ಗುರುಪುರ ಪಂಚಾಯಿತಿ ವ್ಯಾಪ್ತಿಯಲ್ಲಿ ಹುಲಿಗಳ ಸೆರೆಗೆ ನಡೆದಿದ್ದ ಕಾರ್ಯಾಚರಣೆಯಲ್ಲಿ 10 ವರ್ಷದ ಹೆಣ್ಣು ಹುಲಿ ಸೆರೆಯಾಗಿದ್ಕು, 3 ತಿಂಗಳ ಪ್ರಾಯದ 4 ಮರಿಗಳು ಸಿಕ್ಕಿಬಿದ್ದಿದ್ದವು.
‘ಹುಲಿ, ಮರಿಗಳನ್ನು ವನ್ಯಪ್ರಾಣಿ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿತ್ತು. ಒಂದು ಮರಿ ಆರೋಗ್ಯ ಹದಗೆಟ್ಟು ಡಿ.7ರಂದು ಮೃತಪಟ್ಟಿತ್ತು. ನಂತರದ ಎರಡು ದಿನಗಳಲ್ಲಿ ಉಳಿದವು ಮೃತಪಟ್ಟವು’ ಎಂದು ಡಿಸಿಎಫ್ ಮಹಮ್ಮದ್ ಫೈಸಲ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
ಸೋಂಕು ಕಾರಣ?:‘ಕ್ಯಾಟ್’ ಕುಟುಂಬದಲ್ಲಿ ಕಾಣಿಸುವ ಪ್ಯಾನ್ ಲ್ಯೊಕೊಪೇನಿಯ ಸೋಂಕು ತಾಯಿ ಹುಲಿಯಲ್ಲಿ ಇದ್ದು, ಮರಿಗಳಿಗೂ ತಗುಲಿರಬಹುದು’ ಎಂದು ಪ್ರತಿಕ್ರಿಯಿಸಿದರು.
‘ತಾಯಿ ಹುಲಿ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿದೆ. ತಾಯಿ ಹುಲಿ ಆರೋಗ್ಯ ಕುರಿತು ಪಶುವೈದ್ಯ ಡಾ.ಆದರ್ಶ್ ನಿರಂತರ ಸಂಪರ್ಕದಲ್ಲಿದ್ದಾರೆ’ ಎಂದರು.
‘ಎರಡು ತಿಂಗಳ ಹಿಂದೆ ಕೂರ್ಗಳ್ಳಿ ವನ್ಯ ಪ್ರಾಣಿ ಪುನರ್ವಸತಿ ಕೇಂದ್ರದಲ್ಲಿ ಸೋಂಕಿನಿಂದ ಹುಲಿ ಮರಿ ಸತ್ತಿತ್ತು. ಆದರೆ ಸೋಂಕು ಯಾವುದು ಎಂಬುದು ತಿಳಿದು ಬಂದಿಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.