ADVERTISEMENT

ಕೆ–ಸೆಟ್‌: ಸಹಾಯಕ ಪ್ರಾಧ್ಯಾಪಕರಾಗಲು 5,627 ಮಂದಿ ಅರ್ಹತೆ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2019, 11:48 IST
Last Updated 28 ಮಾರ್ಚ್ 2019, 11:48 IST
–ಸಾಂದರ್ಭಿಕ ಚಿತ್ರ
–ಸಾಂದರ್ಭಿಕ ಚಿತ್ರ   

ಮೈಸೂರು: ಮೈಸೂರು ವಿಶ್ವವಿದ್ಯಾಲಯ 2018ರ ಡಿಸೆಂಬರ್‌ನಲ್ಲಿ ನಡೆಸಿದ್ದ ಕರ್ನಾಟಕ ರಾಜ್ಯ ಮಟ್ಟದ ಅರ್ಹತಾ ಪರೀಕ್ಷೆಯ (ಕೆ–ಸೆಟ್) ಫಲಿತಾಂಶ ಪ್ರಕಟಿಸಿದ್ದು, ಶೇ 6.96 ರಷ್ಟು ಅಭ್ಯರ್ಥಿಗಳು ಸಹಾಯಕ ಪ್ರಾಧ್ಯಾಪಕರಾಗಲು ಅರ್ಹತೆ ಪಡೆದುಕೊಂಡಿದ್ದಾರೆ.

3,154 ಪುರುಷರು ಮತ್ತು 2,473 ಮಹಿಳೆಯರು ಒಳಗೊಂಡಂತೆ ಒಟ್ಟು 5,627 ಅಭ್ಯರ್ಥಿಗಳು ತೇರ್ಗಡೆ ಹೊಂದಿದ್ದಾರೆ. kset.uni-mysore.ac.in ವೆಬ್‌ಸೈಟ್‌ನಲ್ಲಿ ಮಾರ್ಚ್‌ 30 ರಂದು ಫಲಿತಾಂಶ ಲಭ್ಯವಾಗಲಿದೆ ಎಂದು ಕೆ–ಸೆಟ್‌ ಮುಖ್ಯಸ್ಥರೂ ಆಗಿರುವ ಮೈಸೂರು ವಿ.ವಿ ಕುಲಪತಿ ಪ್ರೊ.ಜಿ.ಹೇಮಂತಕುಮಾರ್‌ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

2018ರ ಡಿಸೆಂಬರ್‌ನಲ್ಲಿ ರಾಜ್ಯದ 11 ಕೇಂದ್ರಗಳಲ್ಲಿ 39 ವಿಷಯಗಳಿಗೆ ಪರೀಕ್ಷೆ ನಡೆಸಲಾಗಿತ್ತು. 94,840 ಮಂದಿ ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದರು. 80,758 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು ಎಂದು ಮಾಹಿತಿ ನೀಡಿದರು.

ADVERTISEMENT

ಕೇಂದ್ರವಾರು ಫಲಿತಾಂಶದಲ್ಲಿ ಬೆಂಗಳೂರು ಪ್ರಥಮ ಸ್ಥಾನ ಪಡೆದುಕೊಂಡಿದೆ. 12,902 ಅಭ್ಯರ್ಥಿಗಳಲ್ಲಿ 1,249 ಮಂದಿ ತೇರ್ಗಡೆ ಹೊಂದಿದ್ದು, ಶೇ 9.68 ಸಾಧನೆ ಮೂಡಿಬಂದಿದೆ. ಮಂಗಳೂರು ಮತ್ತು ಮೈಸೂರು ಕ್ರಮವಾಗಿ ಎರಡು ಹಾಗೂ ಮೂರನೇ ಸ್ಥಾನ ಪಡೆದುಕೊಂಡಿವೆ ಎಂದು ತಿಳಿಸಿದರು.

ವಾಣಿಜ್ಯ ವಿಷಯದಲ್ಲಿ ಅತಿಹೆಚ್ಚು ಮಂದಿ (791) ಅರ್ಹತೆ ಪಡೆದುಕೊಂಡಿದ್ದಾರೆ. ಕನ್ನಡ ವಿಷಯದಲ್ಲಿ 627 ಹಾಗೂ ಜೀವವಿಜ್ಞಾನದಲ್ಲಿ 571 ಅಭ್ಯರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಅಂಗವಿಕಲರ ಕೋಟಾದಡಿ ಒಟ್ಟು 113 ಮಂದಿ ಅರ್ಹತೆ ಪಡೆದುಕೊಂಡಿದ್ದಾರೆ ಎಂದರು.

ಕೇಂದ್ರವಾರು ಫಲಿತಾಂಶ (ಅರ್ಹತೆ ಪಡೆದವರು)

ಕೇಂದ್ರ; ಪುರುಷರು; ಮಹಿಳೆಯರು; ಒಟ್ಟು; ಶೇ

ಬೆಂಗಳೂರು; 608; 641; 1,248; 9.68

ಬೆಳಗಾವಿ; 125; 74; 199; 5.07

ಬಳ್ಳಾರಿ; 215; 72; 287; 5.56

ವಿಜಯಪುರ; 170; 85; 255; 4.83

ದಾವಣಗೆರೆ; 177; 91; 268; 5.23

ಧಾರವಾಡ; 467; 288; 755; 7.75

ಕಲಬುರ್ಗಿ; 262; 119; 381; 4.40

ಮಂಗಳೂರು; 128; 271; 399; 8.91

ಮೈಸೂರು; 610; 579; 1,189; 7.26

ಶಿವಮೊಗ್ಗ; 208; 137; 345; 6.90

ತುಮಕೂರು; 184; 116; 300; 7.20

ಒಟ್ಟು; 3,154; 2,473; 5,627; 6.96

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.