ADVERTISEMENT

ತಾಯಿಯನ್ನು ಚಿಕಿತ್ಸೆಗೆ ಕರೆತಂದ ಮಗಳು; ನಿರ್ಜನ ಪ್ರದೇಶದಲ್ಲಿ ಬಿಟ್ಟು ಪರಾರಿ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2021, 13:47 IST
Last Updated 11 ನವೆಂಬರ್ 2021, 13:47 IST
ಕೆ.ಆರ್.ನಗರದ ಮಾತೃಶ್ರೀ ಅನಾಥಾಶ್ರಮದಲ್ಲಿ ಆಶ್ರಯ ಪಡೆದಿರುವ ಶತಾಯುಷಿ
ಕೆ.ಆರ್.ನಗರದ ಮಾತೃಶ್ರೀ ಅನಾಥಾಶ್ರಮದಲ್ಲಿ ಆಶ್ರಯ ಪಡೆದಿರುವ ಶತಾಯುಷಿ   

ಎಚ್.ಡಿ.ಕೋಟೆ: ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುವುದಾಗಿ ಮನೆಯಿಂದ ತನ್ನ ಶತಾಯುಷಿ ತಾಯಿಯನ್ನು ಕರೆ ತಂದ ಮಗಳೊಬ್ಬಳು; ಇಲ್ಲಿಗೆ ಸಮೀಪದ ಅಂತರಸಂತೆ ಬಳಿಯ ನಿರ್ಜನ ಪ್ರದೇಶದ ರಸ್ತೆ ಬದಿಯೇ ಬಿಟ್ಟು ಹೋದ ಅಮಾನವೀಯ ಘಟನೆ ಬುಧವಾರ ನಡೆದಿದೆ.

ವೃದ್ಧೆಗೆ ಮನೆಯ ವಿಳಾಸ ನೆನಪಿಲ್ಲ. ನನ್ನೂರು ಮೈಸೂರು. ಅಳಿಯ–ಮಗಳು ಚಿಕಿತ್ಸೆಗಾಗಿ ಕರೆದುಕೊಂಡು ಬಂದಿದ್ದರು. ನನ್ನನ್ನು ಕರೆದೊಯ್ಯಲು ಬರುತ್ತಾರೆ ಎಂದೇ ಹೇಳುತ್ತಿದ್ದಾರೆ.

ಬುಧವಾರ ಮಧ್ಯಾಹ್ನದಿಂದಲೂ ಅಳಿಯ–ಮಗನ ಬರುವಿಕೆಯಲ್ಲೇ ಕಾದಿದ್ದ ವೃದ್ಧೆಗೆ ಸ್ಥಳೀಯರು ನೆರವಾಗಿದ್ದಾರೆ. ಅಂತರಸಂತೆಯ ಪೊಲೀಸ್‌ ಠಾಣೆಗೆ ಕರೆದೊಯ್ದಿದ್ದಾರೆ.

ADVERTISEMENT

ಊಟ ಮಾಡಲಾಗದ ಸ್ಥಿತಿ ತಲುಪಿದ್ದ ವೃದ್ಧೆ, ಆಟೊ ಮೂಲಕ ಮನೆಗೆ ಕಳುಹಿಸಿಕೊಡಿ ಎಂದು ನೆರೆದಿದ್ದವರನ್ನು ಕೋರಿದ ದೃಶ್ಯ ಮನಕಲುಕಿತು. ಪೊಲೀಸರು ಎಚ್‌.ಡಿ.ಕೋಟೆಯ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದರು.

‘ವಿಷಯ ತಿಳಿದೊಡನೆ ಶತಾಯುಷಿಯನ್ನು ಕೆ.ಆರ್.ನಗರದ ಮಾತೃಶ್ರೀ ವೃದ್ದಾಶ್ರಮಕ್ಕೆ ದಾಖಲಿಸಲಾಗಿದೆ’ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಆಶಾ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.