ADVERTISEMENT

ಎಚ್.ಡಿ.ಕೋಟೆ: ಜಮೀನಿನಲ್ಲಿ ಬೀಡು ಬಿಟ್ಟ ಆನೆ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2023, 7:02 IST
Last Updated 15 ಸೆಪ್ಟೆಂಬರ್ 2023, 7:02 IST
   

ಎಚ್.ಡಿ.ಕೋಟೆ: ತಾಲ್ಲೂಕಿನ ಮಾದಾಪುರ ಸಮೀಪದ ರೈತರ ಜಮೀನಿನಲ್ಲಿ ಎರಡು ಆನೆಗಳು ಕಾಡಿನಿಂದ ಹೊರಬಂದು ಬೀಡು ಬಿಟ್ಟಿವೆ.

ಆನೆಗಳನ್ನು ಕಾಡಿಗೆ ಓಡಿಸುವ ಪ್ರಯತ್ನದ ಭಾಗವಾಗಿ ಮೈಸೂರು ಮನದವಾಡಿ ಮುಖ್ಯ ರಾಜ್ಯ ಹೆದ್ದಾರಿಯನ್ನ ಹಲವು ಗಂಟೆಗಳ ಕಾಲ ಬಂದ್ ಮಾಡಿ ಅರಣ್ಯ ಇಲಾಖೆಯ ಅಧಿಕಾರಿಗಳು ಪ್ರಯತ್ನಪಟ್ಟರು. ಆದರೂ ಸಹ ಆನೆಗಳು ರಸ್ತೆ ದಾಟದೆ ಜಮೀನಿನಲ್ಲಿಯೇ ಬಿಡು ಬಿಟ್ಟವು. ತಡ ರಾತ್ರಿಯವರೆಗೂ ಆನೆಗಳನ್ನು ಕಾಡಿಗೆ ಓಡಿಸಲು ಅರಣ್ಯ ಇಲಾಖೆಯ ಅಧಿಕಾರಿಗಳು ಹರಸಾಹಸ ಪಟ್ಟರು.

‘ಆನೆಗಳು ಕಾಡಿನಿಂದ ಹೊರ ಬಂದಿರುವ ಬಗ್ಗೆ ಗುರುವಾರ ಬೆಳಿಗ್ಗೆ ಮಾಹಿತಿ ಲಭಿಸಿತು. ಆನೆಗಳನ್ನ ಕಾಡಿಗೆ‌ ಅಟ್ಟಲು ಇಲಾಖೆ ಎಲ್ಲಾ ರೀತಿ ಕ್ರಮ ಕೈಗೊಂಡಿದೆ. ಆನೆಗಳನ್ನು ಕಾಡಿಗೆ ಸೇರಿಸಲು ಯಶಸ್ವಿಯಾಗುತ್ತೇವೆ’ ಎಂದು ಸಾಮಾಜಿಕ ಅರಣ್ಯ ವಲಯ ಅಧಿಕಾರಿ ಪೂಜಾ ತಿಳಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.