ಹಲ್ಲೆ
(ಪ್ರಾತಿನಿಧಿಕ ಚಿತ್ರ)
ಮೈಸೂರು: ಇಲ್ಲಿನ ರಾಮಾನುಜ ರಸ್ತೆಯ 12ನೇ ಕ್ರಾಸ್‌ನಲ್ಲಿ ರಿಕ್ಷಾವನ್ನು ಅಡ್ಡಹಾಕಿದ ಯುವಕರ ತಂಡವೊಂದು ಅದರಲ್ಲಿದ್ದ ಪ್ರಯಾಣಿಕರಿಗೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ.
‘ಗುರುವಾರ ರಾತ್ರಿ 9.18ರ ಸಮಯದಲ್ಲಿ ರಿಕ್ಷಾವೊಂದರಲ್ಲಿ ಕುಟುಂಬವೊಂದು ತೆರಳುತ್ತಿತ್ತು. ಅದನ್ನು ಕಾರಿನಲ್ಲಿ ಹಿಂಬಾಲಿಸಿಕೊಂಡು ಬಂದ ಯುವಕರ ಗುಂಪು ರಿಕ್ಷಾ ಅಡ್ಡಗಟ್ಟಿ, ಮಹಿಳೆಯನ್ನು ಹೊರಗೆ ಎಳೆದು ಹಾಕಲು ಯತ್ನಿಸಿ, ಮಚ್ಚಿನಿಂದ ಹಲ್ಲೆ ನಡೆಸಲು ಯತ್ನಿಸಿದ್ದಾರೆ. ಹೆಚ್ಚಿನ ಮಾಹಿತಿ ದೊರಕಿಲ್ಲ’ ಎಂದು ಪೊಲೀಸರು ತಿಳಿಸಿದರು.
ಘಟನೆಯ ಕುರಿತ ಸಿಸಿಟಿವಿ ಕ್ಯಾಮರಾದ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅದರಲ್ಲಿ ಕಾರಿನಲ್ಲಿ ಬಂದ ನಾಲ್ವರು ಮಹಿಳೆಯನ್ನು ರಿಕ್ಷಾದಿಂದ ಎಳೆಯುವ ಹಾಗೂ ರಸ್ತೆಯಲ್ಲಿರುವ ಜನರು ಹತ್ತಿರ ಬಾರದಂತೆ ಕೈಯಲ್ಲಿ ಮಚ್ಚು ಹಿಡಿದು ಯುವಕನೊಬ್ಬ ವಾಹನವನ್ನು ತಡೆದಿರುವ ದೃಶ್ಯ ಸೆರೆಯಾಗಿದೆ. ಕೆ.ಆರ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.