ADVERTISEMENT

ಮೈಸೂರಿನಲ್ಲಿ ಬಸವ ಜಯಂತಿ ಆಚರಣೆಗೆ 21 ಸಮಿತಿ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2026, 15:50 IST
Last Updated 25 ಫೆಬ್ರುವರಿ 2026, 15:50 IST
   

ಮೈಸೂರು: ಲಿಂಗಾಯತ ಸಂಘ–ಸಂಸ್ಥೆಗಳ ವತಿಯಿಂದ ನಗರದಲ್ಲಿ ಹಮ್ಮಿಕೊಳ್ಳಲಾಗಿರುವ ಬಸವ ಜಯಂತಿ ಆಚರಣೆ–2026 ಸಂಬಂಧ ನಡೆದ ಸಭೆಯಲ್ಲಿ, 21 ವಿವಿಧ ಸಮಿತಿಗಳನ್ನು ರಚಿಸಿ ಅಧ್ಯಕ್ಷರನ್ನೂ ಆಯ್ಕೆ ಮಾಡಲಾಗಿದೆ.

ಅಧ್ಯಕ್ಷರು ಇದೇ 28ರೊಳಗೆ ಸಮಿತಿಯನ್ನು ಪೂರ್ಣಗೊಳಿಸಿ ಸದಸ್ಯರ ಪಟ್ಟಿಯನ್ನು ಸಲ್ಲಿಸಲಿದ್ದಾರೆ. ಬಸವ ಜಯಂತಿಯನ್ನು ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವ ಉದ್ದೇಶದಿಂದ ಸಾಮಾಜಿಕ ಜಾಲತಾಣಗಳ ಮೂಲಕ ವಿಶೇಷ ಪ್ರಚಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಯೂಟ್ಯೂಬ್‌ನಲ್ಲಿ ಸಮಾಜದ ಹಾಗೂ ಹಿರಿಯರ ಸಂದೇಶಗಳನ್ನು ಜನರಿಗೆ ತಲುಪಿಸುವ ಯೋಜನೆಯನ್ನೂ ರೂಪಿಸಲಾಗಿದೆ ಎಂದು ಸಂಘಟಕರು ತಿಳಿಸಿದ್ದಾರೆ.

ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

ADVERTISEMENT
ಕ್ರ.ಸಂಸಮಿತಿಯ ಹೆಸರುಅಧ್ಯಕ್ಷರು / ಜವಾಬ್ದಾರಿ ವಹಿಸಿಕೊಂಡವರು
1ಕಾರ್ಯಕ್ರಮದ ಅಧ್ಯಕ್ಷರುಪುಟ್ಟರಾಜು
2ಸ್ವಾಗತ ಸಮಿತಿಕುಮಾರಸ್ವಾಮಿ
3ವೇದಿಕೆ ಸಮಿತಿಶರತ್ ಪುಟ್ಟಬುದ್ದಿ
4ಅತಿಥಿ ಸತ್ಕಾರಕೆ.ಎಚ್. ಕಿರಣ್
5ಮೆರವಣಿಗೆ ಸಮಿತಿಕೆ.ವಿ.ಮಲ್ಲೇಶ್
6ನಗರ ಪ್ರಚಾರಜೀವದಾರ ಗಿರೀಶ್
7ತಾಲ್ಲೂಕು ಪ್ರಚಾರಲೋಹಿತ್ ದೊರೆಸ್ವಾಮಿ
8ಕಲಾಮಂದಿರ ಹೊರಾಂಗಣಬಿ.ಆರ್. ಶಿವಕುಮಾರ್
9ಪುತ್ಥಳಿ ಅಲಂಕಾರಆಟೊ ಮಹೇಶ್
10ಪ್ರಸಾದ ವ್ಯವಸ್ಥೆದೂರ ಪರಶಿವಮೂರ್ತಿ
11ಮಹಿಳಾ ಸಮಿತಿಮಲ್ಲಿಕಾ ಮಹದೇವು
12ಮಕ್ಕಳ ಸಮಿತಿದಿವ್ಯ ಚೇತನ
13ಗ್ರಾಮಾಂತರ ಯುವ ಸಮಿತಿಸೋಮಶೇಖರ್ ಬೀರಿಹುಂಡಿ
14ನಗರ ಯುವ ಸಮಿತಿಮಲ್ಲೇಶ್ ಮಲ್ಲು
15ಸಾಂಸ್ಕೃತಿಕ ಸಮಿತಿಶಾರದಾ ಶಿವಲಿಂಗಸ್ವಾಮಿ
16ಆರೋಗ್ಯ ಸಮಿತಿಮಹೇಶ್
17ಸಾಮಾಜಿಕ ಮಾಧ್ಯಮಡಿ.ಚಂದ್ರಶೇಖರ್, ಫೋಟೊ ಮಹೇಂದ್ರ
18ಸ್ಮರಣ ಸಂಚಿಕೆಡಿ.ಎಸ್.ಸದಾಶಿವಮೂರ್ತಿ
19ಹಣಕಾಸು ನಿರ್ವಹಣೆಕೆ.ಎಸ್.ಮಹದೇವ ಪ್ರಸಾದ್
20ಸ್ವಚ್ಛತಾ ಸಮಿತಿಬಾನು ಮೋಹನ್
21ಮಾಧ್ಯಮ ವಕ್ತಾರರುಬಿ.ವಿ.ಮಂಜುನಾಥ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.