ಹುಣಸೂರು: ನಾಗರಹೊಳೆ ಹುಲಿ ಸಂರಕ್ಷಿತಾರಣ್ಯದ ಹುಣಸೂರು ವಲಯದಲ್ಲಿ ಗಾಡಿಪಾಳ್ಯ ಬೀಟ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಇಲಾಖೆ ಸಿಬ್ಬಂದಿ ಮೇಲೆ ಬುಧವಾರ ಮಧ್ಯಾಹ್ನ ಕರಡಿ ದಾಳಿ ನಡೆಸಿದೆ.
ಹುಣಸೂರು ವಲಯಕ್ಕೆ ಸೇರಿದ ಗಾಡಿ ಪಾಳ್ಯದಲ್ಲಿ ಹೊರಗುತ್ತಿಗೆ ಯೋಜನೆಯಲ್ಲಿ ನಿಯೋಜನೆ ಆಗಿದ್ದ ಅರಣ್ಯ ರಕ್ಷಕರು ಬೀಟ್ ನಡೆಸುತ್ತಿದ್ದ ಸಮಯದಲ್ಲಿ ರಾಚಪ್ಪ (40) ಮತ್ತು ಮಾಲ್ತೇಶ್ (28) ಎಂಬುವರ ಮೇಲೆ ಕರಡಿ ದಾಳಿ ನಡೆಸಿ ಗಾಯಗೊಳಿಸಿದೆ. ಇಬ್ಬರನ್ನು ಹುಣಸೂರು ವಲಯ ಅರಣ್ಯಾಧಿಕಾರಿ ಸುಬ್ರಹ್ಮಣ್ಯ ಹುಣಸೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.
ಗಾಳಿಯಲ್ಲಿ ಗುಂಡು: ಸಿಬ್ಬಂದಿ ಕರಡಿ ದಾಳಿಯಿಂದ ಬದುಕುಳಿಯಲು ಇಲಾಖೆ ನೀಡಿದ್ದ ಬಂದೂಕಿನಿಂದ ಗಾಳಿಯಲ್ಲಿ ಗುಂಡು ಹಾರಿಸಿದ್ದು, ಗುಂಡಿನ ಶಬ್ದಕ್ಕೆ ಕರಡಿ ಅರಣ್ಯಕ್ಕೆ ಓಡಿ ಹೋಗಿದೆ ಎಂದು ತಿಳಿಸಿದರು.
ಭೇಟಿ: ಶಾಸಕ ಜಿ.ಡಿ.ಹರೀಶ್ ಗೌಡ ವಿಷಯ ತಿಳಿಯುತ್ತಿದ್ದಂತೆ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಕರಡಿ ದಾಳಿಯಿಂದ ಗಾಯಗೊಂಡ ಅರಣ್ಯ ಸಿಬ್ಬಂದಿ ಯೋಗಕ್ಷೇಮ ವಿಚಾರಿಸಿ ಸಾಂತ್ವನ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.