ADVERTISEMENT

ದೇಗುಲದ ಸುತ್ತ ಸ್ವಚ್ಛತೆ ಭಕ್ತರ ಕರ್ತವ್ಯ: ರಾಜಶೇಖರ್

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2025, 4:17 IST
Last Updated 27 ಅಕ್ಟೋಬರ್ 2025, 4:17 IST
ಬೆಟ್ಟದಪುರ ಸಿಡಿಲು (ಶಿಡ್ಲು) ಮಲ್ಲಿಕಾರ್ಜುನ ಸ್ವಾಮಿ ಬೆಟ್ಟದ ಮೆಟ್ಟಿಲು ಹಾಗೂ ದೇವಾಲಯದ ಸುತ್ತ ಯುವ ಬ್ರಿಗೇಡ್ ಮತ್ತು ಎನ್.ಐ.ಇ ಕಾಲೇಜಿನ ವಿದ್ಯಾರ್ಥಿಗಳು, ಕ್ಷೇತ್ರದ ಸ್ವಚ್ಛತೆ ಕಾರ್ಯವನ್ನು ಭಾನುವಾರ ಮಾಡಿದರು.
ಬೆಟ್ಟದಪುರ ಸಿಡಿಲು (ಶಿಡ್ಲು) ಮಲ್ಲಿಕಾರ್ಜುನ ಸ್ವಾಮಿ ಬೆಟ್ಟದ ಮೆಟ್ಟಿಲು ಹಾಗೂ ದೇವಾಲಯದ ಸುತ್ತ ಯುವ ಬ್ರಿಗೇಡ್ ಮತ್ತು ಎನ್.ಐ.ಇ ಕಾಲೇಜಿನ ವಿದ್ಯಾರ್ಥಿಗಳು, ಕ್ಷೇತ್ರದ ಸ್ವಚ್ಛತೆ ಕಾರ್ಯವನ್ನು ಭಾನುವಾರ ಮಾಡಿದರು.   

ಬೆಟ್ಟದಪುರ: ಇಲ್ಲಿನ ಸಿಡಿಲು (ಶಿಡ್ಲು) ಮಲ್ಲಿಕಾರ್ಜುನ ಸ್ವಾಮಿ ಬೆಟ್ಟದ ಮೆಟ್ಟಿಲು, ಆವರಣವನ್ನು ಬೆಟ್ಟದಪುರ ಗ್ರಾಮ ಪಂಚಾಯಿತಿ , ಯುವ ಬ್ರಿಗೇಡ್, ಎನ್.ಐ.ಇ. ಕಾಲೇಜಿನ ವಿದ್ಯಾರ್ಥಿಗಳು, ಶಿವು ಸೈನಿಕ ಅಕಾಡೆಮಿ ಸಹಯೋಗದಲ್ಲಿ ಭಾನುವಾರ ಸ್ವಚ್ಛತಾ ಕಾರ್ಯ ಮಾಡಿದರು.

 ದೀಪಾವಳಿ ದೀವಟಿಗೆ ಉತ್ಸವಕ್ಕೆ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಭಕ್ತರು ಬೆಟ್ಟದಲ್ಲಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಎಸೆದಿದ್ದುದರಿಂದ ಯುವ ಬ್ರಿಗೇಡ್ ತಂಡ ಮುಂದಾಳತ್ವದಲ್ಲಿ ಸ್ವಚ್ಛತಾ ಕಾರ್ಯ ನಡೆಯಿತು.

ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜಶೇಖರ್ ಮಾತನಾಡಿ, ಯುವ ಬ್ರಿಗೇಡ್ ತಂಡ ಸಾಮಾಜಿಕ ಸೇವೆ, ಪರಂಪರೆಯ ಸ್ಥಳಗಳ ಸಂರಕ್ಷಣೆ ಮತ್ತು ಸ್ವಚ್ಛತೆ ಬಗ್ಗೆ ಜನಜಾಗೃತಿ ಮೂಡಿಸುತ್ತಿದೆ. ಈ ಪುಣ್ಯಕ್ಷೇತ್ರದಲ್ಲಿಯೂ ಸ್ವಚ್ಛತೆಗೆ  ಆದ್ಯತೆ ನೀಡಿ ಬೆಟ್ಟ ಸೇರಿದಂತೆ ಗ್ರಾಮದ ದೇವಾಲಯದಲ್ಲೂ ಸ್ವಚ್ಛತೆಯನ್ನು ಮಾಡಿದ್ದಾರೆ. ಇವರಿಗೆ ಗ್ರಾಮಸ್ಥರು, ಭಕ್ತರ ಪರವಾಗಿ ಅಭಿನಂದನೆ ಸಲ್ಲಿಸುತ್ತೇವೆ ಎಂದರು.

ADVERTISEMENT

ಯುವ ಬ್ರಿಗೇಡ್ ತಾಲ್ಲೂಕು ಸಂಚಾಲಕ ಗೊರಳ್ಳಿ ಅಶ್ವತ್ಥ್‌ ಮಾತನಾಡಿ, ದೇವಸ್ಥಾನ, ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿರಿಸುವುದು  ಪ್ರತಿಯೊಬ್ಬ ಭಕ್ತನ ಧಾರ್ಮಿಕ ಮತ್ತು ನೈತಿಕ ಕರ್ತವ್ಯವಾಗಿದೆ . ಪ್ರತಿಯೊಬ್ಬರು ಅದನ್ನು ಪಾಲಿಸಬೇಕು ಎಂದು ಮನವಿ ಮಾಡಿದರು. ಎರಡು ಟ್ರ್ಯಾಕ್ಟರ್  ತ್ಯಾಜ್ಯವನ್ನು ಗ್ರಾಮ ಪಂಚಾಯಿತಿ ಕಸ ವಿಲೇವಾರಿ ಘಟಕಕ್ಕೆ ಕಳುಹಿಸಲಾಯಿತು.

 ಪಂಚಾಯಿತಿ ಸದಸ್ಯ ಗಿರಿಗೌಡ , ಯುವ ಬ್ರಿಗೇಡ್ ಸಂಚಾಲಕ ಚಂದ್ರಶೇಖರ್, ರಾಜ್ಯ ಸಹ ಸಂಚಾಲಕ ರಾಮನುಜಂ, ನಮೋ ಮಲ್ಲೇಶ್, ಪ್ರಶಾಂತ್,ರುದ್ರೇಶ್,ಚಂದನ್, ಸೂರಿ, ಪ್ರವೀಣ್, ಪ್ರಜ್ವಲ್, ಶಿವು, ಮದನ್, ಪವನ್, ಎನ್.ಐ.ಇ ಕಾಲೇಜು  ಪ್ರಾಧ್ಯಾಪಕ ಶರತ್ ಚಂದ್ರ ಹಾಗೂ ವಿದ್ಯಾಯಾರ್ಥಿಗಳಾದ ಕಿರಣ್, ಆಕಾಂಕ್ಷಾ, ಕಾರ್ತಿಕ್, ವಿಕಾಸ್ ಯಾದವ್, ರೋಹನ್ , ಯುವ ಬ್ರಿಗೇಡ್‌ನ 30 ಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.