ADVERTISEMENT

ದಸರಾಗೆ ಮುನ್ನವೇ ಮುಖ್ಯಮಂತ್ರಿ ಬದಲಾವಣೆ: ಆರ್. ಅಶೋಕ್ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 28 ಜೂನ್ 2025, 11:01 IST
Last Updated 28 ಜೂನ್ 2025, 11:01 IST
<div class="paragraphs"><p>ಆರ್. ಆಶೋಕ, ಸಿದ್ದರಾಮಯ್ಯ</p></div>

ಆರ್. ಆಶೋಕ, ಸಿದ್ದರಾಮಯ್ಯ

   

ಪ್ರಜಾವಾಣಿ ಚಿತ್ರ

ಮೈಸೂರು: ಈ ಬಾರಿಯ ದಸರಾವನ್ನು ಹೊಸ ಮುಖ್ಯಮಂತ್ರಿ ಮಾಡುತ್ತಾರೆ. ದಸರಾಗೆ ಮುನ್ನವೇ ಸಿದ್ದರಾಮಯ್ಯ ಬದಲಾವಣೆ ನಿಶ್ಚಿತ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಹೇಳಿದರು.

ADVERTISEMENT

ಮೈಸೂರಿ‌‌ನಲ್ಲಿ ಶನಿವಾರ ಪತ್ರಕರ್ತರ ಜೊತೆ ಮಾತನಾಡಿದ ಅವರು ' ಅಧಿಕಾರ ಹಸ್ತಾಂತರ ಮೊದಲೇ ನಿಶ್ಚಯ ಆಗಿದೆ. ಆದರೆ ಸಿದ್ದರಾಮಯ್ಯ ಏನೂ ಆಗಿಲ್ಲ ಎಂಬಂತೆ ಮಾತನಾಡುತ್ತಿದ್ದಾರೆ' ಎಂದರು.

' ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರು, ವಿಪಕ್ಷ‌ ನಾಯಕರ ಬದಲಾವಣೆ ಸದ್ಯಕ್ಕಿಲ್ಲ. ನಾನು ವಿಪಕ್ಷ ನಾಯಕನಾಗಿ ಪ್ರತಿ ಮೂರು ತಿಂಗಳಿಗೆ ಒಮ್ಮೆ ದೆಹಲಿಗೆ ತೆರಳಿ ಪಕ್ಷದ ಹೈಕಮಾಂಡ್ ಗೆ ವರದಿ ಕೊಟ್ಟು ಬಂದಿದ್ದೇನೆ. ಮುಂದಿನ ಮೂರು ತಿಂಗಳ ನಂತರವೂ ಹೋಗುತ್ತೇನೆ. ಹೈಕಮಾಂಡ್ ಸೂಚನೆಯೂ ಅದೇ ರೀತಿ ಇದೆ. ಇಂತಹದ್ದರಲ್ಲಿ ಬದಲಾವಣೆ ಎಲ್ಲಿ ಬಂತು' ಎಂದು ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.