
ಮೈಸೂರು: ಇಲ್ಲಿನ ಅವಧೂತ ದತ್ತ ಪೀಠದ ನಾದಮಂಟಪದಲ್ಲಿ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ 82ನೇ ವರ್ಧಂತಿ ಪ್ರಯುಕ್ತ ವಿಶೇಷ ವ್ಯಕ್ತಿಗಳಿಗೆ ಅಗತ್ಯ ಉಪಕರಣಗಳನ್ನು ವಿತರಿಸಲಾಯಿತು.
ಈ ವೇಳೆ ಮಾತನಾಡಿದ ಸ್ವಾಮೀಜಿ, ‘ವಿಶೇಷ ಮಕ್ಕಳನ್ನು ನೋಡಿಕೊಳ್ಳುವುದು ಪುಣ್ಯದ ಕೆಲಸ’ ಎಂದರು.
40 ಗಾಲಿಕುರ್ಚಿಗಳು, 8 ವಾಕರ್‌ಗಳು, 10 ಕ್ರಚರ್ಸ್, 5 ಸ್ಟಿಕ್‌ಗಳನ್ನು ನೀಡಲಾಯಿತು.
ನಾದಮಂಟಪದ 26ನೇ ವಾರ್ಷಿಕೋತ್ಸವ ನಿಮಿತ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಸ್ವಾಮೀಜಿಯಿಂದ ಚಕ್ರಪೂಜೆ ಮತ್ತು ಹೋಮ ನೆರವೇರಿತು. ರಾಜರಾಜೇಶ್ವರಿ ದೇವಿ ಸೇರಿದಂತೆ ಎಲ್ಲ ದೇವರಿಗೂ ಪೂಜೆ ಸಲ್ಲಿಸಲಾಯಿತು. ಶ್ರೀಹರಿ ಸನ್ನಿಧಿಯಲ್ಲಿ ಹೋಮದಲ್ಲಿ ಪಾಲ್ಗೊಂಡರು.
ನಾದಮಂಟಪದಲ್ಲಿ ಲೋಕ ಕಲ್ಯಾರ್ಥವಾಗಿ ದತ್ತ ವೆಂಕಟೇಶ್ವರ ಸ್ವಾಮಿಯ ಶಾಂತಿ ಕಲ್ಯಾಣ ನೆರವೇರಿತು.
ದತ್ತ ವಿಜಯಾನಂದ ತೀರ್ಥ ಶ್ರೀ ಸಮ್ಮುಖ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.