ADVERTISEMENT

ಪುಸ್ತಕ ಖರೀದಿ ಕಡಿಮೆ: ಬೇಸರ

‘ಸುದ್ದಿ ಬರಹ ಮತ್ತು ವರದಿಗಾರಿಕೆ’ ಪುಸ್ತಕ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2020, 7:04 IST
Last Updated 27 ನವೆಂಬರ್ 2020, 7:04 IST
ಸಮಾರಂಭದಲ್ಲಿ ‘ಸುದ್ದಿ ಬರಹ ಮತ್ತು ವರದಿಗಾರಿಕೆ’ ಪುಸ್ತಕದ ಪ್ರತಿಯನ್ನು ನಿರಂಜನ ವಾನಳ್ಳಿ ಅವರು ಲೇಖಕ ಕೂಡ್ಲಿ ಗುರುರಾಜ ಅವರಿಗೆ ನೀಡಿದರು. ಎಸ್.ಟಿ.ರವಿಕುಮಾರ್, ಜಿ.ಟಿ.ದೇವೇಗೌಡ, ಡಿ.ಎನ್.ಲೋಕಪ್ಪ, ಎಂ.ಸುಬ್ರಹ್ಮಣ್ಯ ಇದ್ದಾರೆ
ಸಮಾರಂಭದಲ್ಲಿ ‘ಸುದ್ದಿ ಬರಹ ಮತ್ತು ವರದಿಗಾರಿಕೆ’ ಪುಸ್ತಕದ ಪ್ರತಿಯನ್ನು ನಿರಂಜನ ವಾನಳ್ಳಿ ಅವರು ಲೇಖಕ ಕೂಡ್ಲಿ ಗುರುರಾಜ ಅವರಿಗೆ ನೀಡಿದರು. ಎಸ್.ಟಿ.ರವಿಕುಮಾರ್, ಜಿ.ಟಿ.ದೇವೇಗೌಡ, ಡಿ.ಎನ್.ಲೋಕಪ್ಪ, ಎಂ.ಸುಬ್ರಹ್ಮಣ್ಯ ಇದ್ದಾರೆ   

ಮೈಸೂರು: ಪುಸ್ತಕ ಖರೀದಿಸುವವರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಮೈಸೂರು ವಿ.ವಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಪ್ರಾಧ್ಯಾಪ‍ಕ ನಿರಂಜನ ವಾನಳ್ಳಿ ಬೇಸರ ವ್ಯಕ್ತಪಡಿಸಿದರು.

ಜಿಲ್ಲಾ ಪತ್ರಕರ್ತರ ಸಂಘ ಹಾಗೂ ಅನನ್ಯ ಪುಸ್ತಕಗಳ ಪ್ರಕಾಶನ ಸಂಸ್ಥೆ ವತಿಯಿಂದ ಸಂಘದ ರಾಜಶೇಖರ ಕೋಟಿ ಸಭಾಂಗಣದಲ್ಲಿ ಗುರುವಾರ ನಡೆದ ಪತ್ರಕರ್ತ ಕೂಡ್ಲಿ ಗುರುರಾಜ ಅವರ ‘ಸುದ್ದಿ ಬರಹ ಮತ್ತು ವರದಿಗಾರಿಕೆ’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.

ಪತ್ರಿಕೋದ್ಯಮಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಖರೀದಿಸುವವರ ಸಂಖ್ಯೆ ಕಡಿಮೆ. ಜೆರಾಕ್ಸ್ ಸಂಸ್ಕೃತಿಗೆ ವಿದ್ಯಾರ್ಥಿಗಳು ಮಾರು ಹೋಗಿದ್ದಾರೆ. ಅತಿ ಹೆಚ್ಚಿನ ಒತ್ತಡದಲ್ಲಿ ಪತ್ರಕರ್ತರು ಸಿಲುಕಿದ್ದು, ಇವರಿಗೆ ಓದಲು ಬಿಡುವಿಲ್ಲ. ಹೀಗಾಗಿ, ಪತ್ರಿಕೋದ್ಯಮ ಕ್ಷೇತ್ರದಲ್ಲಿ ಹೆಚ್ಚಿನ ಪುಸ್ತಕಗಳು ಬಿಡುಗಡೆ ಯಾಗುತ್ತಿಲ್ಲ ಎಂದರು.

ADVERTISEMENT

‘ನಾನು ಬರೆದ ವರದಿಯಲ್ಲಿ ನಾನಿರಬಾರದು. ಅದರಲ್ಲಿ ಸುದ್ದಿ ಯಷ್ಟೇ ಇರಬೇಕು’ ಎನ್ನುವ ತತ್ವ ಪಾಲನೆ ಯಾಗುತ್ತಿಲ್ಲ ಎಂದು ಅವರು ಹೇಳಿದರು.

ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಶಾಸಕ ಜಿ.ಟಿ.ದೇವೇಗೌಡ, ‘ಹಿಂದೆ ಹಿರಿಯ ಪತ್ರಕರ್ತರು ರಾಜಕಾರಣಿಗಳಿಗೆ ಮಾರ್ಗದರ್ಶಕರಾಗಿದ್ದರು. ಕೊರೊನಾ ಬಂದ ನಂತರ ದಶಕಗಳಷ್ಟು ಕಾಲ ಸೇವೆ ಸಲ್ಲಿಸಿದ ಪತ್ರಕರ್ತರು ಬೀದಿ ಪಾಲಾಗುತ್ತಿದ್ದಾರೆ’ ಎಂದು ಕಳವಳ ವ್ಯಕ್ತಪಡಿಸಿದರು.

ಕಠಿಣ ಪರಿಸ್ಥಿತಿಯಲ್ಲೂ ಎದೆಗುಂದದೇ ತಮ್ಮ ತನವನ್ನು ಬಿಡದ ಕೂಡ್ಲಿ ಗುರುರಾಜ ಅವರು ನಿಜಕ್ಕೂ ಆದರ್ಶವಾಗಿದ್ದಾರೆ ಎಂದು ಶ್ಲಾಘಿಸಿದರು.

ಪ್ರಕಾಶಕ ಡಿ.ಎನ್.ಲೋಕಪ್ಪ, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಟಿ.ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಎಂ.ಸುಬ್ರಹ್ಮಣ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.