ADVERTISEMENT

ಮೈಸೂರು | ಕ್ಲೋರಿನ್‌ ಅನಿಲ ಸೋರಿಕೆ: 17 ಮಂದಿ ಅಸ್ವಸ್ಥ

​ಪ್ರಜಾವಾಣಿ ವಾರ್ತೆ
Published 7 ಜೂನ್ 2024, 16:12 IST
Last Updated 7 ಜೂನ್ 2024, 16:12 IST
ಮೈಸೂರಿನ ಹಳೆ ಕೆಸರೆಯಲ್ಲಿ ಕ್ಲೋರಿನ್ ಅನಿಲ ಸೋರಿಕೆಯಿಂದ ಅಸ್ವಸ್ಥರಾಗಿ ಶುಕ್ರವಾರ ಪ್ರಜ್ವಲ್‌ ಆಸ್ಪತ್ರೆಗೆ ದಾಖಲಾದ ನಾಗರಿಕರ ಆರೋಗ್ಯವನ್ನು ಜಿಲ್ಲಾ ಆರೋಗ್ಯಾಧಿಕಾರಿ ಪಿ.ಸಿ.ಕುಮಾರಸ್ವಾಮಿ ವಿಚಾರಿಸಿದರು –ಪ್ರಜಾವಾಣಿ ಚಿತ್ರ
ಮೈಸೂರಿನ ಹಳೆ ಕೆಸರೆಯಲ್ಲಿ ಕ್ಲೋರಿನ್ ಅನಿಲ ಸೋರಿಕೆಯಿಂದ ಅಸ್ವಸ್ಥರಾಗಿ ಶುಕ್ರವಾರ ಪ್ರಜ್ವಲ್‌ ಆಸ್ಪತ್ರೆಗೆ ದಾಖಲಾದ ನಾಗರಿಕರ ಆರೋಗ್ಯವನ್ನು ಜಿಲ್ಲಾ ಆರೋಗ್ಯಾಧಿಕಾರಿ ಪಿ.ಸಿ.ಕುಮಾರಸ್ವಾಮಿ ವಿಚಾರಿಸಿದರು –ಪ್ರಜಾವಾಣಿ ಚಿತ್ರ   

ಮೈಸೂರು: ನಗರದ ಹೊರವಲಯದ ಹಳೆ ಕೆಸರೆಯ ಗುಜರಿ ಅಂಗಡಿಯಲ್ಲಿ ಶುಕ್ರವಾರ ಕ್ಲೋರಿನ್‌ ಸಿಲಿಂಡರ್ ಸೋರಿಕೆಯಿಂದ 17 ಮಂದಿ ಅಸ್ವಸ್ಥರಾಗಿದ್ದು, ಉಸಿರಾಟದ ತೊಂದರೆಗೆ ಒಳಗಾಗಿದ್ದಾರೆ.

ವರುಣ ಕಾಲುವೆ ಬಳಿ ಇರುವ ‘ರಿದಾ ಸ್ಟೀಲ್‌ ಟ್ರೇಡರ್ಸ್’ ಗುಜರಿ ಅಂಗಡಿಯಲ್ಲಿದ್ದ ಹಳೆ ಸಿಲಿಂಡರ್‌ಗಳನ್ನು ತುಂಡು ಮಾಡುವಾಗ ಒಂದರಲ್ಲಿ ಕ್ಲೋರಿನ್ ಅನಿಲವಿದ್ದರಿಂದ ಸೋರಿಕೆ ಉಂಟಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ದಾವಣಗೆರೆಯಿಂದ ಈ ಗುಜರಿ ಸಾಮಗ್ರಿಗಳನ್ನು ಮೂರು ತಿಂಗಳ ಹಿಂದೆ ಅಂಗಡಿ ಮಾಲೀಕರು ಖರೀದಿಸಿದ್ದರು. ಸಂಜೆ ಸಿಲಿಂಡರ್‌ ತುಂಡು ಮಾಡುವಾಗ ಅನಿಲ ಹೊರಬಂದಿದೆ. ಸುತ್ತಮುತ್ತಲಿನ ವಾಸದ ಮನೆಗಳಿಗೆ ಹರಡಿದೆ ಎಂದು ಹೇಳಿದ್ದಾರೆ.

ADVERTISEMENT

‘ಅಸ್ವಸ್ಥರಾದವರನ್ನು ಕೆ.ಆರ್‌.ಆಸ್ಪತ್ರೆ, ರಿಂಗ್‌ ರಸ್ತೆಯ ಪ್ರಜ್ವಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗಿದೆ. ಎಲ್ಲರೂ ಚೇತರಿಸಿಕೊಳ್ಳುತ್ತಿದ್ದು, ಯಾವುದೇ ಅಪಾಯವಿಲ್ಲ. 12 ವೈದ್ಯರನ್ನು ನಿಯೋಜಿಸಲಾಗಿದೆ’ ಎಂದು ಡಿಎಚ್‌ಒ ಪಿ.ಸಿ.ಕುಮಾರಸ್ವಾಮಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಸ್ಥಳಕ್ಕೆ ನರಸಿಂಹರಾಜ ಠಾಣೆ ಪೊಲೀಸರು ತೆರಳಿ ಪರಿಶೀಲನೆ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.