ಮೈಸೂರು: ಚಾಮರಾಜನಗರದಲ್ಲಿ ಈಚೆಗೆ ನಡೆದ ಆಮ್ಲಜನಕ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರಿನ ಈ ಹಿಂದಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ, ಚಾಮರಾಜನಗರದ ಮುಖಂಡ ಮಲ್ಲೇಶ್; ತನಿಖೆ ನಡೆಸುತ್ತಿರುವ ಬಿ.ಎ.ಪಾಟೀಲ ಆಯೋಗಕ್ಕೆ ಸೋಮವಾರ ನಗರದಲ್ಲಿ ದೂರು ಸಲ್ಲಿಸಿದರು.
ಅಫಿಡೆವಿಟ್ ಮಾಡಿಸಿದ ಮನವಿ ಪತ್ರದೊಂದಿಗೆ ಪೆನ್‌ಡ್ರೈವ್ ಒಂದನ್ನು ಆಯೋಗದ ಅಧಿಕಾರಿಗಳಿಗೆ ಮಲ್ಲೇಶ್ ನೀಡಿದರು.
ದೂರು ಸಲ್ಲಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘24 ಜನರ ಸಾವಿಗೆ ರೋಹಿಣಿ ಸಿಂಧೂರಿಯೇ ಕಾರಣ. ಅವರ ವಿರುದ್ಧ ಕೊಲೆ ಪ್ರಕರಣ ದಾಖಲಿಸಬೇಕು. ಆಸ್ತಿ ಮುಟ್ಟುಗೋಲು ಹಾಕಿಕೊಂಡು ಮೃತರ ಕುಟುಂಬಗಳಿಗೆ ಪರಿಹಾರ ಒದಗಿಸಬೇಕು ಎಂದು’ ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.