ADVERTISEMENT

ಸರ್ವ ಧರ್ಮಕ್ಕೂ ಕಾಂಗ್ರೆಸ್ ನ್ಯಾಯ ಒದಗಿಸುತ್ತಿದೆ : ಅನಿಲ್ ಚಿಕ್ಕಮಾದು

​ಪ್ರಜಾವಾಣಿ ವಾರ್ತೆ
Published 18 ಜನವರಿ 2026, 4:19 IST
Last Updated 18 ಜನವರಿ 2026, 4:19 IST
<div class="paragraphs"><p>ಕಾಂಗ್ರೆಸ್ ಹಿರಿಯ ಮುಖಂಡರಿಗೆ ಸನ್ಮಾನ, ಅತಿ ಹೆಚ್ಚು ಸದಸ್ಯರ ಡಿಜಿಟಲ್ ನೋಂದಣಿ ಮಾಡಿದವರಿಗೆ ಪುರಸ್ಕಾರ ಸಮಾರಂಭದಲ್ಲಿ&nbsp;ಶಾಸಕ ಅನಿಲ್ ಚಿಕ್ಕಮಾದು ಪುರಸ್ಕಾರ ನೀಡಿದರು.</p></div>

ಕಾಂಗ್ರೆಸ್ ಹಿರಿಯ ಮುಖಂಡರಿಗೆ ಸನ್ಮಾನ, ಅತಿ ಹೆಚ್ಚು ಸದಸ್ಯರ ಡಿಜಿಟಲ್ ನೋಂದಣಿ ಮಾಡಿದವರಿಗೆ ಪುರಸ್ಕಾರ ಸಮಾರಂಭದಲ್ಲಿ ಶಾಸಕ ಅನಿಲ್ ಚಿಕ್ಕಮಾದು ಪುರಸ್ಕಾರ ನೀಡಿದರು.

   

ಎಚ್.ಡಿ. ಕೋಟೆ: ಕಾಂಗ್ರೆಸ್ ಪಕ್ಷವು ಸರ್ವ ಧರ್ಮಕ್ಕೂ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಎಂದು ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದರು.

ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ಸಮಿತಿ ಮತ್ತು ಎಚ್.ಡಿ. ಕೋಟೆ ಮತ್ತು ಸರಗೂರು ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಆಯೋಜಿಸಿದ್ದ ವಾಯ್ಸ್ ಆಫ್ ಒಬಿಸಿ ಕಾರ್ಯಕ್ರಮ, ದೀರ್ಘಾವಧಿ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ ಅವರಿಗೆ ಅಭಿನಂದನೆ, ಕಾಂಗ್ರೆಸ್ ಹಿರಿಯ ಮುಖಂಡರಿಗೆ ಸನ್ಮಾನ, ಅತಿ ಹೆಚ್ಚು ಡಿಜಿಟಲ್ ಸದಸ್ಯರ ನೋಂದಣಿ ಮಾಡಿದವರಿಗೆ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ADVERTISEMENT

ತಾಲ್ಲೂಕಿಗೆ ಶಾಸಕನಾಗಿ ಬಂದಾಗಿನಿಂದ ನನ್ನ ನೇತೃತ್ವದಲ್ಲಿ 5 ಚುನಾವಣೆಗಳು ತಾಲ್ಲೂಕಿನಲ್ಲಿ‌ ನಡೆದಿವೆ. ಈ ಎಲ್ಲಾ ಚುನಾವಣೆಗಳಲ್ಲಿ ನಮ್ಮ ಪಕ್ಷವೇ ಮುಂಚೋಣಿಯಲ್ಲಿದೆ ಎಂದರು.

ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ‌ ಚುನಾವಣೆ ನಡೆಯಲಿದ್ದು, ಚುನಾವಣೆ ಎದುರಿಸಲು ಪಕ್ಷವು ಸನ್ನದ್ಧವಾಗಿದ್ದು ಬೂತ್ ಮಟ್ಡದಿಂದ ಕೆಲಸಗಳು‌ ನಡೆಯುತ್ತಿವೆ. ಹಿಂದೆ ಚುನಾವಣೆಯಲ್ಲಿ ವಂಚಿತರಾದವರನ್ನು ಗುರುತಿಸಿ ಅವರಿಗೆ ಅವಕಾಶ ಕಲ್ಪಿಸಿಕೊಡಲಾಗುವುದು ಎಂದರು.

ಮಳವಳ್ಳಿಯಿಂದ ಮಾನಂದವಾಡಿಯವರೆಗೆ ₹1,600 ಕೋಟಿ ವೆಚ್ಚದ ಕಾಮಗಾರಿಗೆ ಯೋಜನೆ ರೂಪಿಸಲಾಗುತ್ತಿದೆ. ಹ್ಯಾಂಡ್ ಪೋಸ್ಟ್‌ನಿಂದ ಎಚ್.ಡಿ. ಕೋಟೆಯವರೆಗೆ ಜೋಡಿ ರಸ್ತೆಗೆ ₹9 ಕೋಟಿ ಅನುದಾನ ಮಂಜೂರು ಮಾಡುವಂತೆ ಪ್ರಸ್ತಾವ ಕಳುಹಿಸಲಾಗಿದೆ ಎಂದರು.

ಶಾಸಕ ದರ್ಶನ್ ಧ್ರುವನಾರಾಯಣ ಮಾತನಾಡಿ ‘ಹಿಂದುಳಿದ ವರ್ಗದವರನ್ನು ಸಮಾಜದ ಮುನ್ನಲೆಗೆ ತರುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಐದು ಗ್ಯಾರಂಟಿಗಳನ್ನು ಜಾರಿಗೆ ತಂದು ಯಶಸ್ವಿಯಾಗಿದೆ’ ಎಂದರು.

ಮಾಜಿ ಸಚಿವ ಎಂ.‌ಶಿವಣ್ಣ ಮಾತನಾಡಿ, ತಾಲ್ಲೂಕಿನಲ್ಲಿ ಕಾಂಗ್ರೆಸ್ ಪಕ್ಷ ಸುಭದ್ರವಾಗಿ ನೆಲೆ ನಿಂತಿದೆ. ಮುಂದಿನ ಹತ್ತು‌ ವರ್ಷಗಳ ಕಾಲ ನಮಗೆ ತಾಲ್ಲೂಕಿನಲ್ಲಿ ಯಾವುದೇ ಅಡತಡೆ ಇಲ್ಲದೇ ಪಕ್ಷ ಸಂಘಟನೆಗೊಂಡಿದೆ ಎಂದರು.

ಜಿಲ್ಲಾ ಕಾಂಗ್ರೆಸ್ ಅದ್ಯಕ್ಷ ಬಿ.ಜೆ.ವಿಜಯಕುಮಾರ್, ವಾಯ್ಸ್ ಆಫ್ ಓಬಿಸಿ ಜಿಲ್ಲಾ ಉಸ್ತುವಾರಿ ಎನ್.ಆರ್. ನಾಗೇಶ್, ಕುರುಬ ಸಮಾಜದ ತಾಲ್ಲೂಕು ಅಧ್ಯಕ್ಷ ಮಾಲೆಗೌಡ, ರಾಜ್ಯ ಉಪಾಧ್ಯಕ್ಷ ವಿನೋದ್ ರಾಜ್, ಕಾರ್ಯದರ್ಶಿ ಜಿತೀಶ್, ಕೋಟೆ, ಸರಗೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಏಜಾಜ್ ಪಾಷ, ಮಾದಪ್ಪ, ಕೋಟೆ, ಸರಗೂರು, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲ್ಲೂಕು ಅಧ್ಯಕ್ಷರಾದ ಚಾಮರಾಜು, ಚಲುವರಾಜು, ಕೋಟೆ, ಸರಗೂರು, ಒಬಿಸಿ ತಾಲ್ಲೂಕು ಅಧ್ಯಕ್ಷರಾದ ಭೈರೇಗೌಡ, ಚಿಕ್ಕಣ್ಣ, ಮುಖಂಡರಾದ ಸಾಮಾನ್ಯ ಗೌಡ, ಚಿಕ್ಕವೀರನಾಯ್ಕ, ಮರಿದೇವಯ್ಯ, ಚಿನ್ನಹಳ್ಳಿ ರಾಜನಾಯಕ, ಖ್ಯಾತನಹಳ್ಳಿ ನಾಗರಾಜು ನಾಗರಾಜು, ರವಿ, ಸೋಮೇಶ್, ಪರಶಿವಮೂರ್ತಿ, ಬಸವರಾಜು, ಕೃಷ್ಣೇಗೌಡ, ಅಶೋಕ್, ಚಿಕ್ಕಣ್ಣ, ಸೌಮ್ಮ, ಪ್ರಕಾಶ್, ಅಜರುದ್ದೀನ್, ಜಯಮಂಗಳ, ವಿನೋದ್, ನಿಕಿತ್, ಮಂಜು, ನಾಗರಾಜು, ಮಂಜು, ಸುರೇಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.