ಮೈಸೂರು: ಎಡಗೈ ಸ್ಪಿನ್ನರ್ ಶುಭಂ ಮಿಶ್ರಾ ಅವರ ಅಮೋಘ ಬೌಲಿಂಗ್ ನೆರವಿನಿಂದ (37ಕ್ಕೆ 7) ಉತ್ತರ ಪ್ರದೇಶ ತಂಡವು ಕೂಚ್ ಬಿಹಾರ್ ಟ್ರೋಫಿ 19 ವರ್ಷದೊಳಗಿನವರ ಕ್ರಿಕೆಟ್ ಟೂರ್ನಿಯ ಲೀಗ್ ಪಂದ್ಯದಲ್ಲಿ ಸೋಮವಾರ ಕರ್ನಾಟಕ ತಂಡದ ವಿರುದ್ಧ 92 ರನ್‌ಗಳ ಭರ್ಜರಿ ಜಯ ದಾಖಲಿಸಿತು.
ಮಾನಸಗಂಗೋತ್ರಿಯ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಆತಿಥೇಯರನ್ನು ಶುಭಂ ಮಿಶ್ರಾ ಕಾಡಿದರು. ಮೂರನೇ ದಿನದ ಕೊನೆಗೆ 35 ರನ್‌ಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಕರ್ನಾಟಕಕ್ಕೆ ಅಂತಿಮ ದಿನ ಸಮಿತ್ ದ್ರಾವಿಡ್ (28 ರನ್) ಹಾಗೂ ಧ್ರುವ್ ಪ್ರಭಾಕರ್ (21) ಕೆಲಕಾಲ ಆಸರೆಯಾದರು. ಡ್ರಾದತ್ತ ಚಿತ್ತ ಹರಿಸಿದ ಈ ಜೋಡಿ 38 ರನ್ ಜೊತೆಯಾಟವಾಡಿತು. ಈ ವೇಳೆ ಸಮಿತ್, ಆರುಷ್ ಗೋಯೆಲ್ ಎಸೆತದಲ್ಲಿ ಯಶು ಪ್ರಧಾನ್‌ಗೆ ಕ್ಯಾಚ್ ನೀಡಿದ ನಂತರ ತಂಡ ಸೋಲಿನತ್ತ ಮುಖಮಾಡಿತು.
ಕೆಳ ಕ್ರಮಾಂಕದ ಆಟಗಾರರು ಒಂದಂಕಿಯನ್ನೂ ದಾಟಲಿಲ್ಲ. ಕರ್ನಾಟಕ 35.5 ಓವರ್‌ಗಳಲ್ಲಿ 90 ರನ್‌ಗೆ ಆಲೌಟ್ ಆಯಿತು.
ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಉತ್ತರ ಪ್ರದೇಶ: 239. ಕರ್ನಾಟಕ: 234. ಎರಡನೇ ಇನಿಂಗ್ಸ್: ಉತ್ತರ ಪ್ರದೇಶ 177, ಕರ್ನಾಟಕ: 35.5 ಓವರ್‌ಗಳಲ್ಲಿ 90 (ಸಮಿತ್ ದ್ರಾವಿಡ್ 28, ಶುಭಂ ಮಿಶ್ರಾ 37ಕ್ಕೆ 7).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.