ಮೈಸೂರು: ಪಿರಿಯಾಪಟ್ಟಣ ಶಾಸಕ ಕೆ.ಮಹದೇವ್ ಅವರಿಗೆ ಶುಕ್ರವಾರ ಕೋವಿಡ್–19 ತಗುಲಿರುವುದು ದೃಢಪಟ್ಟಿದೆ.
ವಿಧಾನ ಮಂಡಲದ ಅಧಿವೇಶನ ಸೆ.21ರಿಂದ ಆರಂಭಗೊಳ್ಳಲಿದ್ದು, ಶಾಸಕರು ಕೋವಿಡ್ ತಪಾಸಣೆಗೊಳಪಟ್ಟಿದ್ದರು.
‘ಕೋವಿಡ್‌ನ ಯಾವೊಂದು ಲಕ್ಷಣ ಗೋಚರಿಸಿಲ್ಲ. ಹೋಂ ಐಸೋಲೇಷನ್ ಆಗಿದ್ದಾರೆ. ಕುಟುಂಬದ ಯಾರೊಬ್ಬರಲ್ಲೂ ಸೋಂಕು ಪತ್ತೆಯಾಗಿಲ್ಲ. ಎಲ್ಲರ ವರದಿಯೂ ನೆಗೆಟಿವ್ ಬಂದಿದೆ’ ಎಂದು ಶಾಸಕರ ಆಪ್ತ ಸಹಾಯಕ ಜಿ.ಸಿ.ಮಹದೇವ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.