ADVERTISEMENT

ಐಎಂಎ: ಮೈಸೂರಿನಲ್ಲಿ ಸಾವಿರಕ್ಕೂ ಅಧಿಕ ದೂರು

​ಪ್ರಜಾವಾಣಿ ವಾರ್ತೆ
Published 13 ಜೂನ್ 2019, 18:39 IST
Last Updated 13 ಜೂನ್ 2019, 18:39 IST
‘ಐ ಮಾನಿಟರಿ ಅಡ್ವೈಸರಿ (ಐಎಂಎ) ಜುವೆಲ್ಸ್ ಕಂಪನಿ’ಯಲ್ಲಿ ಹಣ ತೊಡಗಿಸಿ, ಮೋಸ ಹೋದವರು ಮೈಸೂರಿನ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಗುರುವಾರ ದೂರು ದಾಖಲಿಸಿದರು
‘ಐ ಮಾನಿಟರಿ ಅಡ್ವೈಸರಿ (ಐಎಂಎ) ಜುವೆಲ್ಸ್ ಕಂಪನಿ’ಯಲ್ಲಿ ಹಣ ತೊಡಗಿಸಿ, ಮೋಸ ಹೋದವರು ಮೈಸೂರಿನ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಗುರುವಾರ ದೂರು ದಾಖಲಿಸಿದರು   

ಮೈಸೂರು: ‘ಐ ಮಾನಿಟರಿ ಅಡ್ವೈಸರಿ (ಐಎಂಎ) ಜುವೆಲ್ಸ್ ಕಂಪನಿ’ಯಲ್ಲಿ ಹಣ ತೊಡಗಿಸಿ ಮೋಸ ಹೋಗಿರುವ, 1,053 ಮಂದಿ ಗುರುವಾರ ನಗರದ ವಿವಿಧ ಠಾಣೆಗಳಲ್ಲಿ ದೂರು ದಾಖಲಿಸಿದ್ದಾರೆ. ಉದಯಗಿರಿ ಠಾಣೆಯೊಂದರಲ್ಲೇ 900 ದೂರುಗಳು ದಾಖಲಾಗಿವೆ.

‘ಗುರುವಾರ ಸಂಜೆ 6 ಗಂಟೆಯವರೆಗೆ 1,053 ದೂರುಗಳು ಬಂದಿವೆ. ವ್ಯಕ್ತಿಯೊಬ್ಬರು ₹ 25 ಲಕ್ಷ ಹೂಡಿಕೆ ಮಾಡಿದ್ದಾಗಿ ದೂರು ನೀಡಿದ್ದಾರೆ. ಈ ಎಲ್ಲ ದೂರುಗಳನ್ನು ಒಂದೇ ಎಫ್‌ಐಆರ್‌ ಆಗಿ ದಾಖಲಿಸಲಾಗುವುದು’ ಎಂದು ಡಿಸಿಪಿ ಮುತ್ತುರಾಜ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT