ADVERTISEMENT

ಇಶಾ ಪ್ರತಿಷ್ಠಾನಕ್ಕೆ ಸೈಕಲ್ ರ‍್ಯಾಲಿ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2023, 15:38 IST
Last Updated 4 ಫೆಬ್ರುವರಿ 2023, 15:38 IST
ಸುತ್ತೂರು ಶಾಖಾ ಮಠದಿಂದ ಕೊಯಮತ್ತೂರಿನ ಇಶಾ ಪ್ರತಿಷ್ಠಾನದವರೆಗೆ ಮೈಸೂರು ಸೈಕ್ಲಿಂಗ್ ತಂಡ ಕೈಗೊಂಡಿದ್ದ ಸೈಕಲ್ ರ‍್ಯಾಲಿಗೆ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಶನಿವಾರ ಚಾಲನೆ ನೀಡಿದರು
ಸುತ್ತೂರು ಶಾಖಾ ಮಠದಿಂದ ಕೊಯಮತ್ತೂರಿನ ಇಶಾ ಪ್ರತಿಷ್ಠಾನದವರೆಗೆ ಮೈಸೂರು ಸೈಕ್ಲಿಂಗ್ ತಂಡ ಕೈಗೊಂಡಿದ್ದ ಸೈಕಲ್ ರ‍್ಯಾಲಿಗೆ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಶನಿವಾರ ಚಾಲನೆ ನೀಡಿದರು   

ಮೈಸೂರು: ಇಲ್ಲಿನ ಸುತ್ತೂರು ಶಾಖಾ ಮಠದಿಂದ ಕೊಯಮತ್ತೂರಿನ ಇಶಾ ಪ್ರತಿಷ್ಠಾನದವರೆಗೆ ಮೈಸೂರು ಸೈಕ್ಲಿಂಗ್ ತಂಡದವರು ಕೈಗೊಂಡಿದ್ದ ಸೈಕಲ್ ರ‍್ಯಾಲಿಗೆ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಶನಿವಾರ ಚಾಲನೆ ನೀಡಿದರು.

‘ನದಿಗಳು ಹಾಗೂ ಮಣ್ಣು ಉಳಿಸಿ’ ಅಭಿಯಾನಕ್ಕೆ ಬೆಂಬಲ ಸೂಚಿಸಿ ಸುತ್ತೂರಿನಿಂದ ಹೊರಟ ರ‍್ಯಾಲಿಯಲ್ಲಿ ಸರ್ಕಾರಿ ಅಧಿಕಾರಿಗಳು, ವಿವಿಧ ಕ್ಷೇತ್ರದವರು ಪಾಲ್ಗೊಂಡಿದ್ದರು. ರ‍್ಯಾಲಿಯು ಸಂಜೆ ಇಶಾ ಪ್ರತಿಷ್ಠಾನ ತಲುಪಿತು. ತಂಡವು 226 ಕಿ.ಮೀ. ಕ್ರಮಿಸಿತು.

ವಾಣಿಜ್ಯ ತೆರಿಗೆ ಡಿಸಿ ರಮೇಶ್ ನರಸಯ್ಯ, ಜೆಎಸ್‌ಎಸ್ ದಂತ ಕಾಲೇಜಿನ ಡಾ.ಸುಜೀತ್ ಶೆಟ್ಟಿಘಿ, ಸಾರ್ವಜನಿಕರ ಗ್ರಂಥಾಲಯ ಇಲಾಖೆ ಉಪ ನಿರ್ದೇಶಕ ಬಿ.ಮಂಜುನಾಥ್, ಮನು ಗೌಡ, ಅನಿತಾ ಬಾರ್ಕಿ, ಹರೀಶ್ ರಮಣ್, ಡಾ.ರಾಣಿ ಎಂ., ವೀಣಾ ಅಶೋಕ್, ಅಂಕುರ್ ಘೋಷ್, ಪೂಜಾ ಹರೀಶ್, ರಾಘವ ಬಿ.ವಿ., ಶ್ರೀಕಾಂತ್ ಎಸ್., ಪೂಣಚ್ಚ, ಗುರುರಾಜ್ ಪಾಟೀಲ್, ನರೇಶ್ ಎ. ಕೇಸರ್‌ಕಾರ್, ಅಶೋಕ್ ಬಿ.ಬಿ., ವೆಂಕಟೇಶ್ ಎಂ.ವಿ. ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.