ಮೈಸೂರು: ದಸರಾದಲ್ಲಿ ಭಾಗಿಯಾಗಲು ಸಾಂಸ್ಕೃತಿಕ ನಗರಿಗೆ ಬಂದಿರುವ ಪ್ರವಾಸಿಗರು ಮತ್ತು ಸ್ಥಳೀಯರು ಪ್ಯಾರಮೋಟರಿಂಗ್ ಮತ್ತು ಹಾಟ್ ಬಲೂನ್ ಪ್ರದರ್ಶನವನ್ನು ಕಣ್ತುಂಬಿಕೊಂಡರು.
ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಆಯೋಜಿಸಿರುವ ಈ ಸಾಹಸ ಪ್ರದರ್ಶನಕ್ಕೆ ಭಾನುವಾರ ಚಾಲನೆ ನೀಡಲಾಯಿತು. ಬೆಳಿಗ್ಗೆ ಹಾಗೂ ಸಂಜೆ ಪ್ಯಾರಮೋಟರಿಂಗ್ ತಂಡದ ಸದಸ್ಯರು ಗಗನದಲ್ಲಿ ಸಾಹಸ ಪ್ರದರ್ಶಿಸಿದರು. ಸೋಮವಾರ ಬೆಳಿಗ್ಗೆ ಮತ್ತು ಸಂಜೆಯ ವೇಳೆ ಪ್ರದರ್ಶನ ನಡೆಯಲಿದೆ.
ಹೈದರಾಬಾದ್‌ನ ‘ವರ್ಟಿಕಲ್ ವರ್ಲ್ಡ್ ಏರೋಸ್ಪೋರ್ಟ್ಸ್ ಅಂಡ್ ಅಡ್ವೆಂಚರ್ಸ್’ ಕಂಪನಿ ವತಿಯಿಂದ ಈ ಸಾಹಸ ಪ್ರದರ್ಶನ ಆಯೋಜಿಸಲಾಗಿದೆ.
ಪುಟ್ಟ ಎಂಜಿನ್ ಹಾಗೂ ಸಣ್ಣ ಗಾತ್ರದ ಪ್ಯಾರಚೂಟ್‌ಅನ್ನು ಬೆನ್ನಿಗೆ ಕಟ್ಟಿಕೊಂಡು ಗಗನಕ್ಕೆ ನೆಗೆಯುವ ಪೈಲಟ್‌ಗಳು ಬಳಿಕ ಬಾನಂಗಳದಲ್ಲಿ ರೋಮಾಂಚಕ ಪ್ರದರ್ಶನ ನೀಡುತ್ತಾರೆ. ಚಾಮುಂಡಿ ವಿಹಾರ ಕ್ರೀಡಾಂಗಣದಿಂದ ಟೇಕಾಫ್ ಆಗುವ ಪ್ಯಾರಮೋಟರ್ ನಿಧಾನವಾಗಿ ಮೇಲಕ್ಕೇರುತ್ತವೆ. ಆ ಬಳಿಕ ಪೈಲಟ್‌ಗಳು ಆಗಸದಲ್ಲಿ ಮೈನವಿರೇಳಿಸುವ ಕಸರತ್ತು ತೋರುವರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.