ADVERTISEMENT

ದಸರಾ ಕ್ರೀಡಾಕೂಟ: ಮೊದಲ ದಿನ 8 ಕೂಟ ದಾಖಲೆ

‘ಸಿ.ಎಂ. ಕಪ್‌’ ರಾಜ್ಯ ಮಟ್ಟದ ದಸರಾ ಕ್ರೀಡಾಕೂಟ - ಬೆಂಗಳೂರು, ಮೈಸೂರು ವಿಭಾಗ ಪಾರಮ್ಯ

ಆರ್.ಜಿತೇಂದ್ರ
Published 24 ಸೆಪ್ಟೆಂಬರ್ 2025, 0:30 IST
Last Updated 24 ಸೆಪ್ಟೆಂಬರ್ 2025, 0:30 IST
ಮಹಿಳೆಯರ 100 ಮೀ. ಓಟದಲ್ಲಿ ಗುರಿಯತ್ತ ಮುನ್ನುಗ್ಗಿದ ಸ್ಪರ್ಧಿಗಳು – ಪ್ರಜಾವಾಣಿ ಚಿತ್ರ: ಅನೂಪ್‌ ರಾಘ.ಟಿ.
ಮಹಿಳೆಯರ 100 ಮೀ. ಓಟದಲ್ಲಿ ಗುರಿಯತ್ತ ಮುನ್ನುಗ್ಗಿದ ಸ್ಪರ್ಧಿಗಳು – ಪ್ರಜಾವಾಣಿ ಚಿತ್ರ: ಅನೂಪ್‌ ರಾಘ.ಟಿ.   

ಮೈಸೂರು: ಬೆಂಗಳೂರು ಹಾಗೂ ಮೈಸೂರು ವಿಭಾಗದ ಅಥ್ಲೀಟ್‌ಗಳು ಇಲ್ಲಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಮಂಗಳವಾರ ಆರಂಭಗೊಂಡ ‘ಸಿ.ಎಂ. ಕಪ್‌’ ರಾಜ್ಯ ಮಟ್ಟದ ದಸರಾ ಕ್ರೀಡಾಕೂಟದ ಅಥ್ಲೆಟಿಕ್ಸ್ ವಿಭಾಗದಲ್ಲಿ ಪಾರಮ್ಯ ಮೆರೆದರು.

ಮೊದಲನೇ ದಿನ ಅಥ್ಲೆಟಿಕ್ಸ್‌ನಲ್ಲಿ ಒಟ್ಟು 12 ಸ್ಪರ್ಧೆಗಳು ನಡೆದಿದ್ದು, 8 ಸ್ಪರ್ಧೆಗಳಲ್ಲಿ ಅಥ್ಲೀಟ್‌ಗಳು ಹಳೆಯ ಕೂಟ ದಾಖಲೆಗಳನ್ನು ಪುಡಿಗಟ್ಟಿದರು. ಪುರುಷರ 100 ಮೀ. ಓಟವನ್ನು ಶಿವಮೊಗ್ಗದ ಗೌತಮ್‌ 10.74 ಸೆಕೆಂಡುಗಳಲ್ಲಿ ಕ್ರಮಿಸಿ, ಕಳೆದ ವರ್ಷ ಗಗನ್ ಗೌಡ ಹೆಸರಿನಲ್ಲಿದ್ದ 10.85 ಸೆಕೆಂಡ್‌ಗಳ ದಾಖಲೆಯನ್ನು ಅಳಿಸಿದರು.

ಮಹಿಳೆಯರ 100 ಮೀ. ಓಟದಲ್ಲಿ ಬೆಂಗಳೂರಿನ ನಿಯೋಲ್‌ ಅನಾ ಕಾರ್ನೆಲಿಯೊ 12 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿ ಜ್ಯೋತಿಕಾ ಹೆಸರಿನಲ್ಲಿದ್ದ 12.24 ಸೆಕೆಂಡ್‌ಗಳ ದಾಖಲೆ ಸರಿಗಟ್ಟಿದರು.

ADVERTISEMENT

ಪುರುಷರ 400 ಮೀ. ಓಟದಲ್ಲಿ ಬೆಂಗಳೂರಿನ ಶ್ರೀನಾಥ್ ದಲಾವಿ, 1500 ಮೀ. ಓಟದಲ್ಲಿ ಶಿವಮೊಗ್ಗದ ಎಂ.ಎಸ್. ಆಶ್ರಿತ್‌, ಡಿಸ್ಕಸ್‌ ಥ್ರೋನಲ್ಲಿ ದಕ್ಷಿಣ ಕನ್ನಡದ ನಾಗೇಂದ್ರ ನಾಯಕ್‌, ಹೈಜಂಪ್‌ನಲ್ಲಿ ಶಿವಮೊಗ್ಗದ ಸುದೀಪ್‌ ಹೊಸ ದಾಖಲೆ ಬರೆದರು. ಮಹಿಳೆಯರ ಹೈಜಂಪ್‌ನಲ್ಲಿ ಉಡುಪಿಯ ಎಸ್‌.ಪಿ. ಸುಪ್ರಿಯಾ, ಜಾವೆಲಿನ್‌ ಥ್ರೋನಲ್ಲಿ ಉಡುಪಿಯ ಶ್ರಾವ್ಯಾ  ದಾಖಲೆ ತಮ್ಮದಾಗಿಸಿಕೊಂಡರು.

ಫಲಿತಾಂಶ:

ಅಥ್ಲೆಟಿಕ್ಸ್‌: ಪುರುಷರು:
100 ಮೀ. ಓಟ: ಗೌತಮ್‌ (ಶಿವಮೊಗ್ಗ. ಕಾಲ: 10.74 ಸೆಕೆಂಡ್)–1, ಡಿ.ಕೆ. ಧನುಷ್‌ (ಉಡುಪಿ)–2, ಎಂ.ಡಿ. ಪೈಗಂಬರ್‌ ಗೌಂಡಿ (ವಿಜಯಪುರ)–3; 400 ಮೀ. ಓಟ: ಶ್ರೀನಾಥ್‌ ದಲಾವಿ ( ಬೆಂಗಳೂರು. ಕಾಲ; 47.78 ಸೆಕೆಂಡ್‌)–1, ಎಂ. ನಿತಿನ್ ಗೌಡ ( ಬೆಂಗಳೂರು ಗ್ರಾಮಾಂತರ)–2, ಎಂ.ಡಿ. ದರ್ಶನ್ ( ಶಿವಮೊಗ್ಗ)–3; 1500 ಮೀ. ಓಟ: ಎಂ.ಎಸ್. ಆಶ್ರಿತ್‌ ( ಶಿವಮೊಗ್ಗ. ಕಾಲ: 3ನಿಮಿಷ, 57.93 ಸೆಕೆಂಡ್‌)–1, ಗುರುಪ್ರಸಾದ್ (ಬೆಂಗಳೂರು)–2, ವಿನಾಯಕ್‌ ರಾಥೋಡ್ ( ಧಾರವಾಡ)–3.

ಹೈಜಂಪ್‌: ಸುದೀಪ್‌ ( ಶಿವಮೊಗ್ಗ. ಎತ್ತರ: 2 ಮೀಟರ್‌)–1, ಅಭಿಜ್ಞಾನ್ ಅನಿಲ್‌ ಗೌಡ ( ಮೈಸೂರು)–2, ಭವಿತ್ ಕುಮಾರ್ ( ದಕ್ಷಿಣ ಕನ್ನಡ)–3; ಡಿಸ್ಕಸ್‌ ಥ್ರೋ: ನಾಗೇಂದ್ರ ನಾಯಕ್‌ ( ದಕ್ಷಿಣ ಕನ್ನಡ. ದೂರ: 52.78 ಮೀ)–1, ಹೇಮಂತ್‌ ( ಬೆಂಗಳೂರು)–2, ಮೋಹಿತ್‌ ರಾಜ್ ( ಬೆಂಗಳೂರು)–3; ಜಾವೆಲಿನ್ ಥ್ರೋ: ಶಾರುಖ್‌ ತಾರಿಹಾಳ ( ಬೆಂಗಳೂರು. ದೂರ: 64.61 ಮೀ.)–1, ಸಿದ್ದಪ್ಪ ದಂಡಿನ್‌ ( ಉಡುಪಿ)–2, ಯುವರಾಜ್ ಲಮಾಣಿ (ಬಾಗಲಕೋಟೆ)–3.

ಮಹಿಳೆಯರು:
100 ಮೀ. ಓಟ: ನಿಯೋಲ್‌ ಅನಾ ಕಾರ್ನೆಲಿಯೊ ( ಬೆಂಗಳೂರು. ಕಾಲ: 12 ಸೆಕೆಂಡ್‌)–1, ಮಮತಾ (ಮೈಸೂರು)–2, ವೈಭವಿ ( ಬೆಳಗಾವಿ)–3; 400 ಮೀ. ಓಟ: ಶ್ರಾವಣಿ ( ದಕ್ಷಿಣ ಕನ್ನಡ. ಕಾಲ: 55.81 ಸೆಕೆಂಡ್‌)–1, ರೇಖಾ ಪಿರೋಜಿ (ದಕ್ಷಿಣ ಕನ್ನಡ)–2, ಮೇಘಾ ಮನವಳ್ಳಿಮಠ (ಧಾರವಾಡ)–3; 1500 ಮೀ. ಓಟ: ಎಸ್‌.ಡಿ. ಶಾಹಿನ್‌ ( ಧಾರವಾಡ: ಕಾಲ: 4ನಿಮಿಷ, 50.24 ಸೆಕೆಂಡ್‌)–1, ಶಿಲ್ಪಾ ಹೊಸಮನಿ ( ಬೆಳಗಾವಿ)–2, ಎನ್. ಪ್ರಣಮ್ಯ (ಬೆಳಗಾವಿ)–3.

ಹೈಜಂಪ್‌: ಎಸ್‌.ಬಿ. ಸುಪ್ರಿಯಾ (ಉಡುಪಿ. ಎತ್ತರ: 1.71 ಮೀ.)–1, ಪಲ್ಲವಿ ಪಾಟೀಲ (ಉಡುಪಿ)–2, ಅಕ್ಷತಾ ದೊಡ್ಡಮನಿ ( ಬೀದರ್‌)–3; ಡಿಸ್ಕಸ್‌ ಥ್ರೋ: ಬಿ. ಸುಷ್ಮಾ ( ದಕ್ಷಿಣ ಕನ್ನಡ. ದೂರ: 41.89 ಮೀ.)–1, ಸಿ. ತೇಜಸ್ವಿನಿ ( ಬೆಂಗಳೂರು)–2, ಎಸ್.ಎಂ. ದೀಕ್ಷಿತಾ ( ಬೆಂಗಳೂರು)–3; ಜಾವೆಲಿನ್‌ ಥ್ರೋ: ಶ್ರಾವ್ಯಾ (ಉಡುಪಿ. ದೂರ: 45.53 ಮೀ)–1, ಶೆಹಜಹಾನಿ ( ಮೈಸೂರು)–2, ಪದ್ಮಾವತಿ (ಶಿವಮೊಗ್ಗ)–3.

ಪುರುಷರ 100 ಮೀ. ಓಟದಲ್ಲಿ ಕೂಟ ದಾಖಲೆ ಬರೆದ ಶಿವಮೊಗ್ಗದ ಗೌತಮ್‌
ಪುರುಷರ 1500 ಮೀ. ಓಟದಲ್ಲಿ ದಾಖಲೆ ಬರೆದ ಶಿವಮೊಗ್ಗ ಜಿಲ್ಲೆಯ ಎಂ.ಎಸ್. ಆಶ್ರಿತ್‌ –ಪ್ರಜಾವಾಣಿ ಚಿತ್ರ
ಮಹಿಳೆಯರ 100 ಮೀ. ಓಟದಲ್ಲಿ ದಾಖಲೆ ಬರೆದ ಬೆಂಗಳೂರಿನ ನಿಯೋಲ್‌ ಕಾರ್ನೆಲಿಯೊ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.