ADVERTISEMENT

ಡಿಡಿಪಿಐ ಸೇರಿ 25ಕ್ಕೂ ಅಧಿಕ ಶಿಕ್ಷಕರಿಗೆ ಸೋಂಕು

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2020, 8:12 IST
Last Updated 1 ಅಕ್ಟೋಬರ್ 2020, 8:12 IST

ಮೈಸೂರು: ಜಿಲ್ಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರಿಗೆ ಕೋವಿಡ್–19‌ ಪರೀಕ್ಷೆ ನಡೆಸಲಾಗುತ್ತಿದ್ದು, ಡಿಡಿಪಿಐ ಸೇರಿದಂತೆ 25ಕ್ಕೂ ಅಧಿಕ ಶಿಕ್ಷಕರಿಗೆಸೋಂಕು ಇರುವುದು ಪತ್ತೆಯಾಗಿದೆ.

ಡಿಡಿಪಿಐ ಕಚೇರಿಯ ಕೆಲ ಸಿಬ್ಬಂದಿಗೂ ಸೋಂಕು ತಗುಲಿರುವುದು ಗೊತ್ತಾಗಿದೆ.ಶಿಕ್ಷಕರು, ಅವರು ಕುಟುಂಬದವರು ಹಾಗೂ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸಾರ್ವಜನಿಕ ಶಿಕ್ಷಣ ಇಲಾಖೆವತಿಯಿಂದ ಸೋಮವಾರದಿಂದಲೇ ಆಯಾಯ ಬಿಇಒ ಕಚೇರಿಗಳಲ್ಲಿ, ಶಿಕ್ಷಕರ ಭವನದಲ್ಲಿ ಪರೀಕ್ಷೆ ಮಾಡಿಸಲಾಗುತ್ತಿದೆ.

ಜಿಲ್ಲೆಯಲ್ಲಿ ಪ್ರಾಥಮಿಕ ಹಂತದಲ್ಲಿ 3 ಸಾವಿರ ಹಾಗೂ ಪ್ರೌಢಶಾಲಾ ಹಂತದಲ್ಲಿ 2 ಸಾವಿರ ಶಿಕ್ಷಕರು ಇದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.