ADVERTISEMENT

ತಲಕಾಡನ್ನು ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 31 ಅಕ್ಟೋಬರ್ 2023, 13:20 IST
Last Updated 31 ಅಕ್ಟೋಬರ್ 2023, 13:20 IST
ತಲಕಾಡಿನಲ್ಲಿ ನಡೆದ ಕರ್ನಾಟಕ ರಾಜ್ಯೋತ್ಸವದ ಪೂರ್ವಭಾವಿ ಸಭೆಯಲ್ಲಿ ಪುಟ್ಟಸ್ವಾಮಿ ಮಾತನಾಡಿದರು
ತಲಕಾಡಿನಲ್ಲಿ ನಡೆದ ಕರ್ನಾಟಕ ರಾಜ್ಯೋತ್ಸವದ ಪೂರ್ವಭಾವಿ ಸಭೆಯಲ್ಲಿ ಪುಟ್ಟಸ್ವಾಮಿ ಮಾತನಾಡಿದರು   

ತಲಕಾಡು: ಕನ್ನಡ ಸಾಹಿತ್ಯ ಪರಿಷತ್‌ ಹೋಬಳಿ ಘಟಕದಿಂದ ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಮಂಗಳವಾರ ಪೂರ್ವಭಾವಿ ಸಭೆ ಇಲ್ಲಿನ ವಸತಿಗೃಹದಲ್ಲಿ ವಿನಾಯಕ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಸಭೆ ನಡೆಯಿತು.

ಕಸಾಪ ತಾಲ್ಲೂಕು ಅಧ್ಯಕ್ಷ ಕನ್ನಡ ಪುಟ್ಟಸ್ವಾಮಿ ಮಾತನಾಡಿ, ‘ಗಂಗರ ರಾಜಧಾನಿಯಾಗಿದ್ದ ತಲಕಾಡಿನಲ್ಲಿ ಅರ್ಥಪೂರ್ಣವಾಗಿ ಕರ್ನಾಟಕ ರಾಜ್ಯೋತ್ಸವ ಆಚರಣೆಗೆ ಮುಂದಾಗಿರುವುದು ಸಂತೋಷದ ವಿಷಯ. ಸಿದ್ದರಾಮಯ್ಯ ಸರ್ಕಾರವು ತಲಕಾಡನ್ನು ಪಾರಂಪರಿಕ ಪಟ್ಟಿಗೆ ಸೇರಿಸಿ ಮತ್ತಷ್ಟು ಅಭಿವೃದ್ಧಿಗೊಳಿಸಿ, ತಲಕಾಡಿನ ವೈಭವ ಮರುಕಳಿಸುವಂತೆ ಮಾಡಬೇಕು’ ಎಂದು ಮನವಿ ಮಾಡಿದರು.

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಿಂಗಾಪುರ್ ಶ್ರೀನಿವಾಸ್, ಪ್ರಾಂಶುಪಾಲರಾದ ವೆಂಕಟರಂಗಯ್ಯ, ನಾಗರತ್ನ, ವಸಂತ ರಾಜ್, ಮಲ್ಲೇಶ್, ಸುಬ್ಬಣ್ಣ ಶಾಲೆಯ ಸುಂದರಾ ನಾಯಕ್, ಕಾರ್ಯದರ್ಶಿ ರಾಜಶೇಖರ್, ನಾಗಯ್ಯ, ವನಜಾಕ್ಷಿ, ಕೃಷಿ ಪತ್ತಿನ ಸಹಕಾರ ಸಂಘದ ಸಿಇಒ ಕುಮಾರ್, ಗ್ರಾಮ ಲೆಕ್ಕಿಗರಾದ ನಯನ, ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಶ್ರೀನಿವಾಸರಾವ್, ನರಸೀಪುರ ಟೌನ್ ಅಧ್ಯಕ್ಷ ಕೃಷ್ಣಮೂರ್ತಿ, ಆನಂದ್ ದೀಕ್ಷಿತ್, ಪ್ರಶಾಂತ್, ಪಂಚಾಯಿತಿ ಘಟಕದ ಅಧ್ಯಕ್ಷ ಹಸ್ತಿಕೇರಿ ನಾಗರಾಜು, ಕಾರ್ಯಾಧ್ಯಕ್ಷರಾದ ಎಚ್.ರಾಜು, ಚಿಕ್ಕಣ್ಣ, ರಮೇಶ್ ಮಾದನಾಯ್ಕ, ಮಹಿಳಾ ಘಟಕದ ಅಧ್ಯಕ್ಷ ಪಾರ್ವತಿ, ಕಾರ್ಮಿಕ ಘಟಕದ ಅಧ್ಯಕ್ಷ ದೊಡ್ಡರಾಜು, ರೈತ ಘಟಕದ ಅಧ್ಯಕ್ಷ ಲೋಕೇಶ್ ಬೆಟ್ಟಳ್ಳಿ ಗಂಗಾಧರ್, ಕಾರ್ಯದರ್ಶಿ ವೆಂಕಟೇಶ್ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.