ADVERTISEMENT

ಹುಲಿಯ ಮೃತದೇಹ ಪತ್ತೆ: ಮರಣೋತ್ತರ ಪರೀಕ್ಷೆ ಪೂರ್ಣ

​ಪ್ರಜಾವಾಣಿ ವಾರ್ತೆ
Published 24 ಜೂನ್ 2019, 8:00 IST
Last Updated 24 ಜೂನ್ 2019, 8:00 IST
ಹೆಬ್ಬಳ್ಳ ಜಲಾಶಯದ ಹಿನ್ನೀರಿನ ಬದಿಯಲ್ಲಿ ಪತ್ತೆಯಾಗಿರುವ ಹುಲಿಯ ಮೃತ ದೇಹ.
ಹೆಬ್ಬಳ್ಳ ಜಲಾಶಯದ ಹಿನ್ನೀರಿನ ಬದಿಯಲ್ಲಿ ಪತ್ತೆಯಾಗಿರುವ ಹುಲಿಯ ಮೃತ ದೇಹ.   

ಎಚ್.ಡಿ.ಕೋಟೆ: ತಾಲ್ಲೂಕಿನ ಟೈಗರ್ ಬ್ಲಾಕ್ ಬಳಿಯ ಹೆಬ್ಬಳ್ಳ ಜಲಾಶಯದ ಹಿನ್ನೀರಿನ ಬದಿಯಲ್ಲಿ ಹುಲಿಯ ಮೃತದೇಹವು ಪತ್ತೆಯಾಗಿದೆ.

10 ವರ್ಷದ ಹೆಣ್ಣು ಹುಲಿ ಸ್ವಾಭಾವಿಕವಾಗಿ ಮೃತಪಟ್ಟಿರಬಹುದು ಎಂದು ಪಶುವೈದ್ಯ ಡಾ. ನಾಗರಾಜ್ ತಿಳಿಸಿದ್ದಾರೆ.

ಹುಲಿಯ ಅಂಗಾಂಗಗಳನ್ನುಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳಿಸಲುತೆಗೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

ADVERTISEMENT

ಹುಲಿಯ ದೇಹದಲ್ಲಿ ಹೊಡೆದಾಟದಿಂದ ಸಾಕಷ್ಟು ಕಡೆ ಗಾಯಗಳಾಗಿದ್ದು ಹುಲಿಯ ಕೆಲವು ಹಲ್ಲುಗಳು ಮುರಿದುಹೋಗಿವೆ. ಇದರಿಂದಾಗಿ ಅದು ಬೇಟೆಯಾಡುವ ಶಕ್ತಿಯನ್ನು ಕಳೆದುಕೊಂಡಿತ್ತು ಎಂದು ಪ್ರತಿಕ್ರಿಯಿಸಿದ್ದಾರೆ.

ಹುಲಿಯ ಮರಣೋತ್ತರ ಪರೀಕ್ಷೆ ನಡೆಸಲಾಯಿತು.

ಸ್ಥಳಕ್ಕೆಅರಣ್ಯ ಇಲಾಖೆಯ ಡಿಸಿಎಫ್ ಪ್ರಶಾಂತ್ ಕುಮಾರ್, ಎಸಿಎಫ್ ಪರಮೇಶ್ವರಪ್ಪ, ವನ್ಯಜೀವಿ ವಾರ್ಡನ್ ಕೃತಿಕಾ, ಎಎಸ್ಐ ನಾರಾಯಣಸ್ವಾಮಿ, ಸಾಮಾಜಿಕ ವಲಯ ಅರಣ್ಯಾಧಿಕಾರಿ ಮಧುಇದ್ದರು.

ಈ ಮೊದಲು ಹುಲಿಗೆ ವಿಷ ಹಾಕಲಾಗಿದೆ ಎಂಬ ಶಂಕೆ ವ್ಯಕ್ತವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.