ಬನ್ನೂರು: ಇಲ್ಲಿನ ಮಾದಗರೆ ಗ್ರಾಮದಲ್ಲಿ ಇತ್ತೀಚಿಗೆ ಸುರಿದ ಭಾರಿ ಮಳೆ, ಬಿರುಗಾಳಿಯಿಂದ ರೈತರ ಜಮೀನಿನಲ್ಲಿದ್ದ ಬಾಳೆ ಗಿಡಗಳು ನೆಲಕಚ್ಚಿವೆ.
ಈ ಭಾಗದ ರೈತರು ನೇಂದ್ರ ಬಾಳೆಯನ್ನು ಹೆಚ್ಚು ಬೆಳೆದು ಕೇರಳಕ್ಕೆ ಕಳುಹಿಸಿ ಲಾಭ ಕಾಣುತ್ತಿದ್ದರು. ಈ ಬಾರಿ ಬಿರುಗಾಳಿ ಮಳೆಯಿಂದ ನಷ್ಟಕ್ಕೆ ಒಳಗಾಗಿದ್ದಾರೆ.
ರೈತರಾದ ವೀರಯ್ಯ ಸಿದ್ದೇಗೌಡ, ಮಲ್ಲಣ್ಣ, ಮಲ್ಲದೇವರು, ಬಸವಣ್ಣ, ಮಾದಪ್ಪ, ರಾಜಪ್ಪ ಸೇರಿದಂತೆ ಹಲವು ರೈತರು ಸಂಕಷ್ಟಕ್ಕೊಳಗಾಗಿದ್ದಾರೆ. ಗ್ರಾಮ ಪಂಚಾಯಿತಿ ಅಧಿಕಾರಿಗಳು ಪರಿಹಾರಕ್ಕೆ ಅರ್ಜಿ ನೀಡುವಂತೆ ರೈತರಿಗೆ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.