ಮೈಸೂರು: ಇಲ್ಲಿನ ರಂಗವಲ್ಲಿ ತಂಡವು ಅ.26 ಹಾಗೂ 27ರಂದು ಕಲಾಮಂದಿರ ಆವರಣದ ಕಿರುರಂಗಮಂದಿರದಲ್ಲಿ ಇದೇ ಮೊದಲ ಬಾರಿಗೆ ‘ಏಕವ್ಯಕ್ತಿ ಮಹಿಳಾ ನಾಟಕೋತ್ಸವ’ ಹಮ್ಮಿಕೊಂಡಿದೆ.
ಮೈಸೂರಿನ ‘ಅನುಭೂತಿ’ ಸಂಸ್ಥೆಯು ಪ್ರಸ್ತುತಪಡಿಸಲಿರುವ ಸುಧಾ ಆಡುಕಳ ರಚಿಸಿ, ಶ್ರೀಪಾದ ಭಟ್ ನಿರ್ದೇಶಿಸಿರುವ, ಮೈಸೂರಿನ ಮಹಿಳಾ ಉದ್ಯಮಿ ಶ್ರೀವಿದ್ಯಾ ಕಾಮತ್ ಅವರು ಅಭಿನಯಿಸಿರುವ ‘ದೀಪಧಾರಿಣಿ’ ಹಾಗೂ ಬೆಂಗಳೂರಿನ ‘ನುಡಿರಂಗ’ ಪ್ರಸ್ತುತಿಯ, ಹುಲುಗಪ್ಪ ಕಟ್ಟೀಮನಿ ನಿರ್ದೇಶನದ ‘ಸಕುಬಾಯಿ ಕಾಮ್‌ವಾಲಿ’ ನಾಟಕ ಸಂಜೆ 7ಕ್ಕೆ ಪ್ರದರ್ಶನಗೊಳ್ಳಲಿವೆ.
26ರಂದು ಸಂಜೆ 7ಕ್ಕೆ ಕಿರುತೆರೆ ಹಾಗೂ ರಂಗಭೂಮಿ ಕಲಾವಿದೆ ಸುಧಾ ನರಸಿಂಹರಾಜು ಮತ್ತು ಆಶಾರಾಣಿ ಚಾಲನೆ ನೀಡಲಿದ್ದಾರೆ. ಅನುಭೂತಿ ಸಂಸ್ಥೆಯ ಶ್ರೀವಿದ್ಯಾ ಕಾಮತ್, ನುಡಿರಂಗ ಸಂಸ್ಥೆಯ ನುಡಿ ಸುದರ್ಶನ್, ರಂಗವಲ್ಲಿ ತಂಡದ ಕಾರ್ಯದರ್ಶಿ ಬಿ. ರಾಜೇಶ್, ಖಜಾಂಚಿ ಮಂಜುನಾಥಶಾಸ್ತ್ರಿ ಪಾಲ್ಗೊಳ್ಳಲಿದ್ದಾರೆ. ಹೆಚ್ಚಿನ ಮಾಹಿತಿಗೆ ಮೊ.ಸಂ. 98446 44480 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.