
ಬೆಟ್ಟದಪುರ: ಗ್ರಾಮದ ಕೆನರಾ ಬ್ಯಾಂಕ್ ಶಾಖೆಯ ವಿರುದ್ಧ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಮುಖಂಡರು ಗುರುವಾರ ಪ್ರತಿಭಟನೆ ಮಾಡಿದರು.
ಇಲ್ಲಿನ ಕೆನರಾ ಬ್ಯಾಂಕಿನ ಸಿಬ್ಬಂದಿ ರೈತರು ಹಾಗೂ ಗ್ರಾಹಕರೊಂದಿಗೆ ಸರಿಯಾದ ರೀತಿಯಲ್ಲಿ ಸ್ಪಂದಿಸುತ್ತಿಲ್ಲ, ಹಣ ತೆಗೆದುಕೊಳ್ಳಲು ಬಂದರೆ ಶಾಖೆಯಲ್ಲಿ ಹಣವಿಲ್ಲ ಎಂದು ಹೇಳುತ್ತಾರೆ. ಈ ಭಾಗದಲ್ಲಿ ತಂಬಾಕು ಬೆಳೆದ ರೈತರು ಮಾರುಕಟ್ಟೆಗೆ ಮಾರಾಟ ಮಾಡಿ ಬಂದಂತ ಹಣವನ್ನು ಪಡೆದುಕೊಳ್ಳಲು ಹರಸಾಹಸ ಮಾಡಬೇಕಾದಂತ ಸ್ಥಿತಿ ಎದುರಾಗಿದೆ. ಈ ವಿಚಾರವನ್ನು ಸಂಬಂಧಪಟ್ಟ ಬ್ಯಾಂಕಿನ ಮೇಲಾಧಿಕಾರಿಗಳು ಗಮನ ಹರಿಸಿ, ಗಂಭೀರವಾಗಿ ತೆಗೆದುಕೊಂಡು ಇನ್ನುಮುಂದೆ ಯಾರಿಗೂ ನಗದು ಸಮಸ್ಯೆ ಆಗದಂತೆ ಮುಂಜಾಗ್ರತಾ ಕ್ರಮ ವಹಿಸಬೇಕೆಂದು ರೈತ ಸಂಘದ ಮುಖಂಡರು ಒತ್ತಾಯಿಸಿದರು.
ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ಬೆಟ್ಟದಪುರ ಪೊಲೀಸ್ ಠಾಣೆಯ ಪಿಎಸ್ಐ ಅಜಯ್ ಕುಮಾರ್ ಚರ್ಚೆ ನಡೆಸಿದರು. ಬ್ಯಾಂಕಿನ ಮೇಲಧಿಕಾರಿಗಳು ದೂರವಾಣಿ ಮುಖಾಂತರ ಮುಖಂಡರೊಂದಿಗೆ ಮಾತನಾಡಿ, ಇನ್ನು ಮುಂದೆ ನಗದು ಸೇರಿದಂತೆ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳುತ್ತೇವೆ ಎಂದು ತಿಳಿಸಿದ ಬಳಿಕ ಪ್ರತಿಭಟನೆಯನ್ನು ಹಿಂಪಡೆದರು. ಸಂಘದ ಮುಖಂಡರಾದ ಪ್ರಕಾಶ್ ರಾಜೇ ಅರಸ್, ದೇವರಾಜು, ಕೊಣಸೂರು ಆನಂದ್, ಗುರುರಾಜ, ದಶರಥ, ರಘುಪತಿ, ಮಹದೇವ್, ಕರೀಗೌಡ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.