ADVERTISEMENT

ಚಾಮುಂಡಿಬೆಟ್ಟದ ಅರಣ್ಯದಲ್ಲಿ ಬೆಂಕಿ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2020, 20:06 IST
Last Updated 28 ಡಿಸೆಂಬರ್ 2020, 20:06 IST
ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಸೋಮವಾರ ಬೆಂಕಿ ಕಾಣಿಸಿಕೊಂಡಿತು  ಪ್ರಜಾವಾಣಿ ಚಿತ್ರ/ಬಿ.ಆರ್.ಸವಿತಾ
ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಸೋಮವಾರ ಬೆಂಕಿ ಕಾಣಿಸಿಕೊಂಡಿತು  ಪ್ರಜಾವಾಣಿ ಚಿತ್ರ/ಬಿ.ಆರ್.ಸವಿತಾ   

ಮೈಸೂರು: ಚಾಮುಂಡಿಬೆಟ್ಟದ ಅರಣ್ಯದಲ್ಲಿ ಸೋಮವಾರ ಸಂಜೆ ಬೆಂಕಿ ಕಾಣಿಸಿಕೊಂಡು, ಸುಮಾರು ಅರ್ಧ ಎಕರೆಯಷ್ಟು ಪ್ರದೇಶದ ಹುಲ್ಲು ಭಸ್ಮಗೊಂಡಿದೆ.

ಉತ್ತನಹಳ್ಳಿ ಭಾಗದಲ್ಲಿ ಮೊದಲು ಕಾಣಿಸಿಕೊಂಡ ಬೆಂಕಿ ಕ್ರಮೇಣ ಬೆಟ್ಟಕ್ಕೆ ಹಬ್ಬಿತು.ಎರಡುಅಗ್ನಿಶಾಮಕ ವಾಹನಗಳ ಮೂಲಕಬೆಂಕಿಯನ್ನು ನಿಯಂತ್ರಿಸಲಾಯಿತು.

‘ಗಾಳಿಯ ಬೀಸುವಿಕೆ ಕಡಿಮೆ ಇತ್ತು. ಬೆಂಕಿ ನಂದಿಸಲು ಸುಲಭವಾಗಿ ತೆರಳಬಹುದಾದ ಮಾರ್ಗವೂ ಇತ್ತು. ಹೀಗಾಗಿ, ಬೆಂಕಿಯು ಸುಲಭದಲ್ಲಿ ನಿಯಂತ್ರಣಕ್ಕೆ ಬಂದಿದೆ’ ಎಂದು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ರಾಜು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.