ADVERTISEMENT

ಮೈಸೂರು | ₹99.65 ಲಕ್ಷ ವಂಚನೆ: ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2025, 2:41 IST
Last Updated 16 ಅಕ್ಟೋಬರ್ 2025, 2:41 IST
<div class="paragraphs"><p>ಪೊಲೀಸ್</p></div>

ಪೊಲೀಸ್

   

ಸಾಂದರ್ಭಿಕ ಚಿತ್ರ

ಮೈಸೂರು: ಹೂಟಗಳ್ಳಿಯಲ್ಲಿರುವ ಟ್ರೀ ಟ್ರೆಂಡ್ಸ್ ಅಂಗಡಿಗೆ ಶ್ರೀಮಂತರ ಸೋಗಿನಲ್ಲಿ ಪೀಠೋಪಕರಣ ಅಂಗಡಿಗೆ ಬಂದ ಕೇರಳ ಮೂಲದ ಕುಟುಂಬವು ₹ 99.65 ಲಕ್ಷ ವಂಚಿಸಿದ ಆರೋಪದಲ್ಲಿ ಮಾಲೀಕ ಎ.ಸಿ.ರಾಯ್ ವಿಜಯನಗರ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ADVERTISEMENT

ಕೇರಳ ರಾಜ್ಯದ ಕ್ಯಾಲಿಕಟ್‌ನ ಹಕ್ಕಿನ್, ಹಫ್ತಾತ್ ಬೀವಿ, ಮೊಹಮದ್ ಖಾಲೀಸ್, ಮೊಹಮದ್ ವಾಸೀಲ್, ಫರ್ವೀಜ್ ವಿರುದ್ದ ಪ್ರಕರಣ ದಾಖಲಾಗಿದೆ.

‘ಐಷಾರಾಮಿ ಕಾರಿನಲ್ಲಿ ಪೀಠೋಪಕರಣ ಅಂಗಡಿಗೆ ಬಂದ ಹಕ್ಕಿನ್ ಹಾಗೂ ಕುಟುಂಬ ಕೇರಳದಲ್ಲಿ ಎರಡು ಮನೆ ಖರೀದಿಸಿದ್ದು ಫರ್ನಿಚರ್‌ಗಳು ಬೇಕೆಂದು ನಂಬಿಸಿದೆ. ವಾಟ್ಸಪ್ ವೀಡಿಯೋ ಕಾಲ್‌ನಲ್ಲಿ ಮನೆ ತೋರಿಸಿ ಎಂಜಿನಿಯರ್ ಜೊತೆ ಮಾತನಾಡಿಸಿದ್ದಾರೆ. ಹೆಚ್ಚು ಬೆಲೆ ಬಾಳುವ ಪೀಠೋಪಕರಣಗಳನ್ನ ಖರೀದಿಸಿ, ₹40 ಮೌಲ್ಯದ ಪೀಠೋಪಕರಣ ಖರೀದಿಸಿ ಪ್ಯಾಕ್ ಮಾಡುವಂತೆ ತಿಳಿಸಿ ಖಾಲಿ ಚೆಕ್‌ನೀಡಿದ್ದಾರೆ’ ಎಂದು ದೂರಿನಲ್ಲಿ ತಿಳಿಸಿದ್ದಾರೆ.

‘ಆದರೆ, ಚೆಕ್ ಹಣವಿಲ್ಲದೆ ಬೌನ್ಸ್ ಆಗಿದೆ. ಈ ವಿಚಾರ ತಿಳಿಸಿದಾಗ ಅಂಗಡಿಗೆ ಬಂದ ಹಕ್ಕಿನ್ ತನ್ನ ಖಾತೆಯಲ್ಲಿ ₹124 ಕೋಟಿ ಹಣವಿದೆ. ಐಟಿ ಅಧಿಕಾರಿಗಳು ಖಾತೆಯನ್ನು ಫ್ರೀಜ್ ಮಾಡಿದ್ದಾರೆ. ಇದರಿಂದ ಚೆಕ್ ಬೌನ್ಸ್ ಆಗಿದೆ ಎಂದು ಹೇಳಿ ಹಲವಾರು ದಾಖಲೆಗಳನ್ನ ತೋರಿಸಿ ನಂಬಿಸಿದ್ದಾನೆ. ಅಕೌಂಟ್‌ ಅನ್‌ಫ್ರೀಜ್‌ ಮಾಡುವ ನೆಪದಲ್ಲಿ ಮಾಲಿಕರಿಂದ ₹99,65,500 ಪಡೆದಿದ್ದು, ಲಕ್ಷಾಂತರ ಹಣ ಬಂದ ನಂತರ ಹಕ್ಕಿನ್ ಈ ಸಮಸ್ಯೆಗೆ ಇಲ್ಲಿ ಪರಿಹಾರ ಸಿಗುವುದಿಲ್ಲ ದೆಹಲಿಯಿಂದಲೇ ಬಗೆಹರಿಸಬೇಕೆಂದು ಮತ್ತಷ್ಟು ಹಣದ ಸಹಾಯ ಕೇಳಿದ್ದಾನೆ. ಮೋಸ ಹೋಗಿರುವುದು ಅರಿವಾಗುತ್ತಿದ್ದಂತೆ ದೂರು ನೀಡಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಫೊಟೊ ಬಳಕೆ: ಪ್ರಕರಣ ದಾಖಲು

ಮೈಸೂರು: ಸಾಮಾಜಿಕ ಜಾಲತಾಣದಲ್ಲಿ ಕುಟುಂಬಸ್ಥರ ಫೊಟೊ ಹಾಕಿರುವ ದಂಡಂ ದಶಗುಣಂ ಎಂಬ ಹೆಸರಿನ ಫೇಸ್‌ಬುಕ್ ಖಾತೆ ವಿರುದ್ಧ ಕ್ರಮವಹಿಸಬೇಕು ಎಂದು ಕಾಂಗ್ರೆಸ್‌ ವಕ್ತಾರ ಎಂ.ಲಕ್ಷ್ಮಣ್‌ ಸೆನ್‌ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

‘ಫೇಸ್‌ಬುಕ್ ನನ್ನ ಹಾಗೂ ಪತ್ನಿ ಮತ್ತು ಮಗಳ ವೈಯುಕ್ತಿಕ ಫೋಟೋ ಹಾಕಿ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮವಹಿಸಬೇಕು’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಪೊಲೀಸ್‌ ಕಾರ್ಯಾಚರಣೆ: 227 ಮಂದಿ ವಶಕ್ಕೆ

ಮೈಸೂರು: ಪೊಲೀಸ್ ರೌಡಿ ಪ್ರತಿಬಂಧಕ‌ ದಳವು ಮಂಗಳವಾರ ಕಾರ್ಯಾಚರಣೆ ನಡೆಸಿ ಶಂಕಿತ ರೌಡಿಗಳು ಮತ್ತು ಸಾರ್ವಜನಿಕರಿಗೆ ತೊಂದರೆ ನೀಡುವ ವ್ಯಕ್ತಿಗಳನ್ನು ಗುರುತಿಸಿ ಪ್ರಕರಣ ದಾಖಲಿಸಿದೆ.

227 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ. ಕೋಟ್ಪಾ ಕಾಯ್ದೆಯಡಿ 164, 383 ಮಂದಿ ವಿರುದ್ಧ ಪೆಟ್ಟಿ ಕೇಸ್ ಹಾಗೂ ಕೆಪಿ ಕಾಯ್ದೆಯಡಿ ಪ್ರಕರಣಗಳು ದಾಖಲಿಸಲಾಗಿದೆ. ಸೆಕ್ಷನ್ 126 ಮತ್ತು 129 ಬಿಎನ್ಎಸ್ಎಸ್ ಕಾಯ್ದೆಯಡಿ 10 ಪ್ರಕರಣ ದಾಖಲಾಗಿದೆ. ಇಬ್ಬರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

41 ತ್ರಿಬಲ್ ರೈಡಿಂಗ್, 172 ಹೆಲ್ಮೆಟ್ ಇಲ್ಲದೆ ಪ್ರಯಾಣ, ದೋಷಯುಕ್ತ ನಂಬರ್‌ ಪ್ಲೇಟ್, ವೀಲಿಂಗ್ ಪ್ರಕರಣ ದಾಖಲಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತೆ ಸೀಮಾ ಲಾಟ್ಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.