ADVERTISEMENT

ಹಕ್ಕು, ಅಧಿಕಾರಕ್ಕಾಗಿ ಹೋರಾಟಕ್ಕೆ ಸಜ್ಜಾಗಿ: ಗೃಹ ಸಚಿವ ಪರಮೇಶ್ವರ ಕರೆ

ಗೃಹ ಸಚಿವ ಪರಮೇಶ್ವರ ಕರೆ * ‘ಪರಮೋತ್ಸವ’ದಲ್ಲಿ ಅಭಿಮಾನಿಗಳಿಂದ ‘ದಲಿತ ಸಿ.ಎಂ’ ಕೂಗು

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2025, 17:51 IST
Last Updated 25 ಆಗಸ್ಟ್ 2025, 17:51 IST
<div class="paragraphs"><p>ಮೈಸೂರಿನಲ್ಲಿ ‘ಡಾ.ಜಿ.ಪರಮೇಶ್ವರ ಅಭಿಮಾನಿಗಳ ಬಳಗ’ವು ತಮ್ಮ 74ನೇ ಹುಟ್ಟುಹಬ್ಬದ ಪ್ರಯುಕ್ತ ಸೋಮವಾರ ಆಯೋಜಿಸಿದ್ದ ‘ಪರಮೋತ್ಸವ’ದಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ ಸನ್ಮಾನ ಸ್ವೀಕರಿಸಿದರು. ಮಂಜುನಾಥ್‌, ಕಿರಣ್, </p></div>

ಮೈಸೂರಿನಲ್ಲಿ ‘ಡಾ.ಜಿ.ಪರಮೇಶ್ವರ ಅಭಿಮಾನಿಗಳ ಬಳಗ’ವು ತಮ್ಮ 74ನೇ ಹುಟ್ಟುಹಬ್ಬದ ಪ್ರಯುಕ್ತ ಸೋಮವಾರ ಆಯೋಜಿಸಿದ್ದ ‘ಪರಮೋತ್ಸವ’ದಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ ಸನ್ಮಾನ ಸ್ವೀಕರಿಸಿದರು. ಮಂಜುನಾಥ್‌, ಕಿರಣ್,

   

ಮೈಸೂರು: ‘ಹಕ್ಕು ಮತ್ತು ಅಧಿಕಾರ ಪಡೆಯಲು ಮುಂದಿನ ದಿನಗಳಲ್ಲಿ ಹೋರಾಟಕ್ಕೆ ಸಜ್ಜಾಗಬೇಕು’ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ಸೋಮವಾರ ಇಲ್ಲಿ ತಮ್ಮ ಬೆಂಬಲಿಗರಿಗೆ ಹೇಳಿದರು.

ನಗರದ ಕಲಾಮಂದಿರದಲ್ಲಿ ‘ಡಾ.ಜಿ.ಪರಮೇಶ್ವರ ಅಭಿಮಾನಿಗಳ ಬಳಗ’ವು ತಮ್ಮ 74ನೇ ಹುಟ್ಟುಹಬ್ಬದ ಪ್ರಯುಕ್ತ ಆಯೋಜಿಸಿದ್ದ ‘ಪರಮೋತ್ಸವ’ದಲ್ಲಿ ಅವರು ಮಾತನಾಡಿದರು.

ADVERTISEMENT

‘ನೀವು ಮುಖ್ಯಮಂತ್ರಿಯಾಗಬೇಕು’ ಎಂಬ ಅಭಿಮಾನಿಗಳ ಕೂಗಿಗೆ, ‘ಎಲ್ಲರಿಗೂ ಹೃದಯ ವೈಶಾಲ್ಯ ಇರಬೇಕು. ಆದರೆ ಅದು ಆಗುತ್ತಿಲ್ಲ. ಹೋರಾಟಕ್ಕೆ ಸಜ್ಜಾಗದಿದ್ದರೆ ಬಾಬಾಸಾಹೇಬರಿಗೆ ಮಾಡುವ ಅಪಮಾನ’ ಎಂದರು. 

‘ಒಂದು ಸಮುದಾಯವು ನಿಮ್ಮ ಜೊತೆಗೆ ಯಾವಾಗಲೂ ನಿಂತಿದೆ. ಅವರಿಗೆ ಮೋಸ ಮಾಡಿದರೆ ಅದು ಬುದ್ದಿ ಕಲಿಸುತ್ತದೆ ಎಂದು ಜ್ಞಾನಪ್ರಕಾಶ ಸ್ವಾಮೀಜಿ ಹೇಳಿದ್ದಾರೆ. ಅದು ನಿಜ. ಹೃದಯ ಶ್ರೀಮಂತಿಕೆ ನಿಮಗೆ ಬರಬಾರದೇ’ ಎಂದು ಪ್ರಶ್ನಿಸಿದರು. 

‘ದಲಿತ ಸಮುದಾಯವು ಸಮಾನತೆ ಮತ್ತು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಇನ್ನೆಷ್ಟು ವರ್ಷ ಕಾಯ ಬೇಕು? ದೇಶ 3ನೇ ದೊಡ್ಡ ಆರ್ಥಿಕತೆಯಾಗಿದೆ. ಚಂದ್ರಯಾನ ಮಾಡಿದೆ. ಬಲಿಷ್ಠ ಸೇನೆಯಿದೆ. ಆದರೂ, ಜಾತಿ ಸಂಘಗಳು ರಚನೆಯಾಗುತ್ತಿವೆ. ಶಾಶ್ವತ ಸಮಾನತೆ ಬರುವವರೆಗೂ ಮೀಸಲಾತಿ ಇರಲೇಬೇಕು’ ಎಂದರು.

‘ಪ್ರತಿನಿಧಿಸಿದ ಜನರಿಗಾಗಿ ಹೋರಾಡಿದ್ದೇನೆ. ಬಡ್ತಿ ಮೀಸಲಾತಿ ಜಾರಿಗೊಳಿಸದಿದ್ದರೆ ಡಿಸಿಎಂ ಹುದ್ದೆಯಲ್ಲಿ ಒಂದು ಕ್ಷಣ ಇರುವುದಿಲ್ಲ ಎಂದು ಆಗಿನ ಸಿ.ಎಂ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಹೇಳಿದ ಮೇಲೆ ಜಾರಿಯಾಯಿತು. ಶೋಷಿತರ ಪರ ಕೆಲಸ ಮಾಡದೇ ಇದ್ದರೆ, ಸ್ಥಾನದಲ್ಲಿದ್ದೂ ಪ್ರಯೋಜನವಿಲ್ಲ’ ಎಂದರು.   

ಮುಖ್ಯಮಂತ್ರಿ ಮಾಡಿ: ‘ಜನಸಂಖ್ಯೆಯಲ್ಲಿ 1ನೇ ಸ್ಥಾನದಲ್ಲಿರುವ ದಲಿತ ಸಮುದಾಯದಿಂದ ಯಾರೊಬ್ಬರೂ ಸಿ.ಎಂ ಆಗಿಲ್ಲ. ರಾಷ್ಟ್ರೀಯ ಪಕ್ಷ ಇಲ್ಲಿಯವರೆಗೆ ಮಾಡಿರುವ ತಪ್ಪನ್ನು ಪರಮೇಶ್ವರ ಅವರಿಗೆ ಸಿ.ಎಂ ಸ್ಥಾನ ನೀಡಿ ಸರಿಪಡಿಸಿಕೊಳ್ಳಬೇಕು’ ಎಂದು ಉರಿಲಿಂಗಪೆದ್ದಿಮಠದ ಜ್ಞಾನ ಪ್ರಕಾಶ ಸ್ವಾಮೀಜಿ ಒತ್ತಾಯಿಸಿದರು. 

‘ಒಂದು ಸಮುದಾಯಕ್ಕೆ 9 ಸಲ, ಮತ್ತೊಂದಕ್ಕೆ 7 ಬಾರಿ ಅವಕಾಶ ಸಿಕ್ಕಿದೆ. ಅಧಿಕಾರವು ಸಣ್ಣ ಪುಟ್ಟ  ಸಮುದಾಯದವರಿಗೂ ಸಿಕ್ಕಿದೆ. ನೂರಕ್ಕೆ ನೂರರಷ್ಟು ಬೆಂಬಲಿಸಿರುವ ದಲಿತ ಸಮುದಾಯವನ್ನು ಕಡೆಗಣಿಸಿದರೆ ರಾಜ್ಯದಲ್ಲಿ ಕಾಂಗ್ರೆಸ್ ಅಸ್ತಿತ್ವ ಕಳೆದುಕೊಳ್ಳಬೇಕಾಗುತ್ತದೆ’ ಎಂದು ಎಚ್ಚರಿಸಿದರು.  

‘ಪರಮ ಪಯಣ’ ಕೃತಿ ಬಿಡುಗಡೆ ಮಾಡಿದ ಶಾಸಕ ತನ್ವೀರ್ ಸೇಠ್‌, ‘ಪರಮೇಶ್ವರ ಅವರನ್ನು ಎತ್ತರದ ಸ್ಥಾನದಲ್ಲಿ ನೋಡಬೇಕೆಂಬುದು ಆಸೆಯಾಗಿಯೇ ಉಳಿದಿದೆ. ಅವರೊಂದಿಗೆ ಹೆಜ್ಜೆ ಹಾಕುತ್ತೇವೆ’ ಎಂದರು. 

ಶಾಸಕರಾದ ದರ್ಶನ್‌ ಧ್ರುವನಾರಾಯಣ, ಕೆ.ಹರೀಶ್‌ಗೌಡ ಪಾಲ್ಗೊಂಡಿದ್ದರು.

ಸಮಾಜವು ಬದಲಾಗದಿದ್ದರೆ ನಾವೇ ಬದಲಾಯಿಸಬೇಕು. ಅಂಬೇಡ್ಕರ್‌ ಅವರು ನಮಗೆ ಮತದಾನದ ಅಸ್ತ್ರ ಕೊಟ್ಟಿದ್ದಾರೆ. ತೀರ್ಮಾನಿಸಬೇಕು
ಡಾ.ಜಿ.ಪರಮೇಶ್ವರ ಗೃಹ ಸಚಿವ

‘ಕಾರ್ಯಕ್ರಮಕ್ಕೆ ಅನೇಕ ವಿಘ್ನ’

‘ನನ್ನ ವ್ಯಕ್ತಿತ್ವವಲ್ಲದೇ ಅನೇಕ ವಿಚಾರಗಳು ಬೇರೆ ಬೇರೆ ಆಯಾಮಗಳಲ್ಲಿ ರಾಜ್ಯಕ್ಕೆ ತಲುಪಬಹುದೆಂಬ ಕಾರಣಕ್ಕೆ ಅನೇಕ ಜನರಿಗೆ ಈ ಕಾರ್ಯಕ್ರಮ ಆಗುವುದು ಬೇಕಿರಲಿಲ್ಲ. ಅನೇಕ ವಿಘ್ನಗಳು ಎದುರಾಗಿವೆ’ ಎಂದು ಸಚಿವ ಪರಮೇಶ್ವರ ಹೇಳಿದರು.  ‘ನೀನೊಬ್ಬನೇ ಕುಳಿತು ಕೋ ನಾನು ಕಾರ್ಯಕ್ರಮಕ್ಕೆ ಬರುತ್ತೇನೆಂದು ಸಂಘಟಕ ಬಿಳಿಕೆರೆ ರಾಜು ಅವರಿಗೆ ಹೇಳಿದ್ದೆ’ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.