
ಹುಣಸೂರು (ಮೈಸೂರು ಜಿಲ್ಲೆ): ‘ನಗರದ ರಾಷ್ಟ್ರೀಯ ಹೆದ್ದಾರಿ–275ರಲ್ಲಿನ ‘ಸ್ಕೈ ಗೋಲ್ಡ್ ಅಂಡ್ ಡೈಮಂಡ್ಸ್’ನಲ್ಲಿ ದರೋಡೆಯಾದ ಚಿನ್ನಾಭರಣಗಳ ಮೌಲ್ಯ ಒಟ್ಟು₹ 10 ಕೋಟಿ ಮೌಲ್ಯದ್ದಾಗಿದೆ. 450 ಆಭರಣಗಳನ್ನು ದರೋಡೆ ಮಾಡಲಾಗಿದೆ’ ಎಂದು ಅಂಗಡಿ ಮಾಲೀಕ ಕೇರಳದ ವಯನಾಡು ನಿವಾಸಿ ಜಂಷಿದ್ ಪಿ.ಎ. ದೂರಿನಲ್ಲಿ ತಿಳಿಸಿದ್ದಾರೆ.
ಡಿ.28ರ ಮಧ್ಯಾಹ್ನ ದರೋಡೆ ನಡೆದಿದ್ದು, ಐವರು ದ್ವಿಚಕ್ರವಾಹನದಲ್ಲಿ ಬಂದೂಕಿನೊಂದಿಗೆ ಬಂದು ದಾಳಿ ನಡೆಸಿದ್ದರು. ಕೇವಲ 5 ನಿಮಿಷದಲ್ಲಿ ದರೋಡೆ ಮಾಡಿದ್ದಾರೆ. ಆ ಸಮಯದಲ್ಲಿ ಅಂಗಡಿಯ ವ್ಯವಸ್ಥಾಪಕ ಊಟಕ್ಕೆ ತೆರಳಿದ್ದರು. ಮುಸುಕುಧಾರಿಗಳು ಬಂದೂಕು ತೋರಿಸಿ ಅಂಗಡಿಯಲ್ಲಿದ್ದ 12 ಲಾಕೆಟ್, 8 ಬ್ರೇಸ್‌ಲೆಟ್, 64 ಬಳೆ, 150 ನೆಕ್ಲೆಸ್, 65 ಚೈನು, 12 ಕಾಲು ಚೈನ್, 70 ಉಂಗುರ, 19 ಕರಿಮಣಿ ಸರ, 17 ಕಿವಿ ಡ್ರಾಪ್ಸ್, 13 ಡೈಮಂಡ್ಸ್ ರಿಂಗ್ ದರೋಡೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಮಾಹಿತಿ ಇಲ್ಲ: ದರೋಡೆ ನಡೆಸಿದ ಆರೋಪಿಗಳ ಸುಳಿವು ನಾಲ್ಕು ದಿನ ಕಳೆದರೂ ಪೊಲೀಸರಿಗೆ ಸುಳಿವು ಸಿಕ್ಕಿಲ್ಲ. ಈ ಪ್ರಕರಣವನ್ನು ಭೇದಿಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್, ಡಿವೈಎಸ್‌ಪಿ ರವಿ ಸೇರಿದಂತೆ 100 ಪೊಲೀಸರನ್ನು ಒಳಗೊಂಡ 5 ತಂಡ ರಚಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.