ADVERTISEMENT

ಕೋವಿಡ್‌ ಹಗರಣ | ಸರ್ಕಾರಕ್ಕೆ ಕೆಲಸವಿಲ್ಲ ತನಿಖೆ ಮಾಡಿಸುತ್ತಿದೆ: ಯಡಿಯೂರಪ್ಪ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2024, 6:03 IST
Last Updated 8 ಡಿಸೆಂಬರ್ 2024, 6:03 IST
ಬಿ.ಎಸ್‌. ಯಡಿಯೂರಪ್ಪ
ಬಿ.ಎಸ್‌. ಯಡಿಯೂರಪ್ಪ    

ಮೈಸೂರು: 'ರಾಜ್ಯ ಸರ್ಕಾರಕ್ಕೆ ಮಾಡಲು ಕೆಲಸವಿಲ್ಲ. ಹೀಗಾಗಿ ತನಿಖೆಗಳನ್ನು ಮಾಡಿಸುತ್ತಾ ಕುಳಿತಿದೆ' ಎಂದು ಬಿಜೆಪಿ ಸಂಸದೀಯ ‌ಮಂಡಳಿ‌ ಸದಸ್ಯ ಬಿ.ಎಸ್.ಯಡಿಯೂರಪ್ಪ ಟೀಕಿಸಿದರು.

ಇಲ್ಲಿ ಖಾಸಗಿ ಕಾರ್ಯಕ್ರಮಕ್ಕೆ ಭಾನುವಾರ ಬಂದಿದ್ದ ಅವರು ಪತ್ರಕರ್ತರೊಂದಿಗೆ ಮಾತನಾಡಿದರು.

'ಕೋವಿಡ್ ನಾಲ್ಕು ವರ್ಷಗಳ ಹಿಂದೆ ಆಗಿರುವ ವಿಚಾರ‌. ಸರ್ಕಾರದವರು ಈಗ ತನಿಖೆ ಮಾಡಿಸುತ್ತೇವೆ ಎನ್ನುತ್ತಿದ್ದಾರೆ. ಮಾಡಿಸಲಿ ಬಿಡಿ' ಎಂದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.