ADVERTISEMENT

ದಸರಾ ಆಚರಣೆ: ‘ಎಚ್ಚರ ತಪ್ಪಿದರೆ ಜಂಬೂ ಸವಾರಿ ಹೋಗಿ ಬಂಬೂ ಸವಾರಿ’

ದಸರಾ ಮಾಡುತ್ತೀರಾ, ಕೋವಿಡ್‌ ನಿಯಂತ್ರಿಸುತ್ತೀರಾ: ವಿಶ್ವನಾಥ್‌ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2020, 11:21 IST
Last Updated 5 ಅಕ್ಟೋಬರ್ 2020, 11:21 IST
ವಿಧಾನ ಪರಿಷತ್‌ ಸದಸ್ಯ ಎಚ್. ವಿಶ್ವನಾಥ್
ವಿಧಾನ ಪರಿಷತ್‌ ಸದಸ್ಯ ಎಚ್. ವಿಶ್ವನಾಥ್   

ಮೈಸೂರು: ‘ಮೈಸೂರು ಜಿಲ್ಲೆಯಲ್ಲಿ ಕೋವಿಡ್‌ ಪ್ರಕರಣ ದಿನೇ ದಿನೆ ಹೆಚ್ಚುತ್ತಿವೆ. ಇಂಥ ಸಮಯದಲ್ಲಿ ಇವರು ದಸರಾ ಮಾಡಲು ಹೊರಟಿದ್ದಾರೆ. ತುಸು ಎಚ್ಚರ ತಪ್ಪಿದರೂ ಜಂಬೂ ಸವಾರಿ ಹೋಗಿ ಬಂಬೂ ಸವಾರಿ ಆದೀತು’ ಎಂದು ವಿಧಾನ ಪರಿಷತ್‌ ಸದಸ್ಯ ಎಚ್. ವಿಶ್ವನಾಥ್‌ ಸೋಮವಾರ ಇಲ್ಲಿ ಎಚ್ಚರಿಕೆ ನೀಡಿದರು.

ದಸರಾ ಆಚರಿಸುತ್ತೀರಾ? ಕೋವಿಡ್‌ ನಿಯಂತ್ರಿಸುತ್ತೀರಾ ಎಂದು ಪ್ರಶ್ನಿಸಿದ ಅವರು, ‘ಸಾಂಕೇತಿಕವಾಗಿ ಜಂಬೂಸವಾರಿಗೆ ಪುಷ್ಪಾರ್ಚನೆ ಮಾಡಿದರೆ ಸಾಕು. ಯಾವುದೇ ಕಾರ್ಯಕ್ರಮ ಬೇಡ. ಎರಡು ಸಾವಿರ ಜನರ ಸೇರಿಸಲು ನಿರ್ಧರಿಸಿದರೆ ನಾವು ರಾಜಕೀಯದವರು, ಅಧಿಕಾರಿಗಳು, ಅವರ ಹೆಂಡತಿ, ಇವರ ಹೆಂಡತಿ, ಕುಟುಂದವರು ಸೇರಿ ಅಂದು 10 ಸಾವಿರ ಆಗುತ್ತಾರೆ. ಅದಕ್ಕಾಗಿ ಈಗಲೇ ಆಸ್ಪತ್ರೆ ಸಿದ್ಧಪಡಿಸಬೇಕಾಗುತ್ತದೆ. ಈಗಲೇ ಹಾಸಿಗೆಗಳು ಇಲ್ಲ. ಹೀಗಾಗಿ, ಹುಷಾರ್‌ ಆಗಿ ಆಚರಿಸಿ’ ಎಂದರು.

‘ಸಾಂಸ್ಕೃತಿಕ ಕಾರ್ಯಕ್ರಮ ಸೇರಿದಂತೆ ಯಾವುದೇ ಕಾರ್ಯಕ್ರಮ ಬೇಡ. ಈಗ ಕೋತಿ ಕುಣಿದರೂ ಸಾವಿರಾರು ಜನ ಸೇರುತ್ತಾರೆ. ಅಂಥದ್ದರಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿದರೆ ಹೆಚ್ಚು ಜನ ಸೇರುವುದಿಲ್ಲವೇ? ಏನಾದರೂ ಸಮಸ್ಯೆಯಾದರೆ ಯಾರು ಹೊಣೆ?’ ಎಂದು ಕೇಳಿದರು.

ADVERTISEMENT

‘ಮೈಸೂರು ಜಿಲ್ಲಾಡಳಿತ ಹಾಗೂ ಉಸ್ತುವಾರಿ ಸಚಿವರಿಗೆ ಗಾಂಭೀರ್ಯವೇ ಅರ್ಥವಾಗುತ್ತಿಲ್ಲ. ಜಿಲ್ಲೆಯ ಹಿರಿಯರೂ ಅದನ್ನು ಅರ್ಥ ಮಾಡಿಸುತ್ತಿಲ್ಲ. ಸಚಿವ ಎಸ್‌.ಟಿ. ಸೋಮಶೇಖರ್‌ ಅವರಿಗೆ ಜಿ.ಟಿ. ದೇವೇಗೌಡ, ಎಸ್‌.ಎ. ರಾಮದಾಸ್‌, ಸಾ.ರಾ. ಮಹೇಶ್‌ ಸಲಹೆ ನೀಡಬೇಕು’ ಎಂದು ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.