ಹಂಪಾಪುರ: ‘ ಕ್ಷೇತ್ರದ ಅಭಿವೃದ್ಧಿಗಾಗಿ ಹಗಲಿರುಳು ದುಡಿಯುತ್ತಿರುವ ವ್ಯಕ್ತಿಗೆ ಜನರು ಪ್ರಾಧಾನ್ಯ ನೀಡಬೇಕಿದೆ’ ಎಂದು ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದರು.
ಹಳ್ಳದಮನುಗನಹಳ್ಳಿ ಗ್ರಾಮದಲ್ಲಿ ಚರಂಡಿ ಮತ್ತು ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಈಚೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಸರ್ಕಾರದಿಂದ ಮುಖ್ಯಮಂತ್ರಿಯ ವಿಶೇಷ ಅನುದಾನ ಯೋಜನೆಯಡಿ ₹ 50 ಲಕ್ಷ ಅನುದಾನ ಪಡೆದು ಗ್ರಾಮದಲ್ಲಿ ಚರಂಡಿ ಮತ್ತು ಕಾಂಕ್ರೀಟ್ ರಸ್ತೆ ವಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದ್ದೇನೆ, ಉಳಿದ ರಸ್ತೆಗಳನ್ನು ಕಾಂಕ್ರೀಟ್ ರಸ್ತೆಗಳನ್ನಾಗಿ ಪೂರ್ಣಗೊಳಿಸುತ್ತೇನೆ. ಗ್ರಾಮಸ್ಥರ ಬೇಡಿಕೆಯಾದ ಗದ್ದಿಗೆ ಮುಖ್ಯ ರಸ್ತೆಯಿಂದ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯನ್ನು ಶೀಘ್ರದಲ್ಲೇ ಡಾಂಬರೀಕರಣ ಮಾಡಿಸುತ್ತೇನೆ ’ ಎಂದು ಭರವಸೆ ನೀಡಿದರು.
ಗ್ರಾಮಸ್ಥರ ಮನವಿಗಳನ್ನು ಸ್ವೀಕರಿಸಿ ಕೆಲವು ಸಮಸ್ಯೆಗಳಿಗೆಕ್ರಮ ಕೈಗೊಳ್ಳುವಂತೆ ಸ್ಥಳದಲ್ಲೇ ಅಧಿಕಾರಿಗಳಿಗೆ ಸೂಚಿಸಿದರು. ಮತ್ತು ಮೈಸೂರು ಜಿಲ್ಲೆಯ ಕೆ.ಎಸ್.ಆರ್.ಟಿ.ಸಿ ಡಿಸಿ ಅವರಿಗೆ ಕರೆ ಮಾಡಿ ಗ್ರಾಮದಲ್ಲಿನ ಬಸ್ ಸಂಚಾರದ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ತುರ್ತು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಮೈಸೂರು ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯ ಕ್ಯಾತನಹಳ್ಳಿ ನಾಗರಾಜ್, ಕೆಪಿಸಿಸಿ ಹಿಂದುಳಿದ ವರ್ಗಗಳ ವಿಭಾಗದ ಪ್ರಧಾನ ಕಾರ್ಯದರ್ಶಿ ಬೈಪಾಸ್ ಮಂಜುನಾಥ್, ಮುಖಂಡರಾದ ಜಿ.ಬಿ.ಸರಗೂರು ನಟರಾಜು, ಖಂಡೇಗೌಡನಪುರ ಮರಿಸ್ವಾಮಿ, ಶಿಂಡೇನಹಳ್ಳಿ ಗಿರೀಶ್, ಕ್ಯಾತನಹಳ್ಳಿ ಮಂಜುನಾಥ್, ಹಳ್ಳದಮನಗನಹಳ್ಳಿ ಆನಂದ್, ಗುತ್ತಿಗೆದಾರರ ಲೋಕೇಶ್, ವಕೀಲರಾದ ಪುಟ್ಟಸ್ವಾಮಿ, ಕೃಷ್ಣೇಗೌಡ, ಜಗದೀಶ್, ಸಣ್ಣನಿಂಗೇಗೌಡ, ಅನುರಾಜು, ಕೃಷ್ಣ, ಪುರುಷೋತ್ತಮ, ಇಂಜಿನಿಯರ್ ಕೀರ್ತಿ ಪ್ರಭು, ಪಿಡಿಓ ಅಶ್ವಿನಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.