
ಎಚ್.ಡಿ.ಕೋಟೆ: ಪಟ್ಟಣದ ಆಡಳಿತ ಭವನದ ಮುಂಭಾಗದಲ್ಲಿ ದಸಂಸ ಮತ್ತು ವಿವಿಧ ಪ್ರಗತಿಪರ ಸಂಘಟನೆ ಮುಖಂಡರು ಮನುಸ್ಮೃತಿ ಸುಟ್ಟು ಹಾಕುವ ಮೂಲಕ ಪ್ರತಿಭಟನೆ ನಡೆಸಿದರು.
‘ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ರಕ್ಷಣೆ ಕಾರಣಕ್ಕಾಗಿ ಅಂಬೇಡ್ಕರ್ ಮನಸ್ಮೃತಿ ಸುಟ್ಟು ಹಾಕಿದ್ದರು. ಇದೀಗ ಪ್ರತಿಯೊಬ್ಬರು ಮನುಸ್ಮೃತಿ ಸುಟ್ಟು ಹಾಕುವ ಮೂಲಕ ಬಾಬಾ ಸಾಹೇಬ್ ಅಂಬೇಡ್ಕರ್ ಹೋರಾಟ ಸ್ಮರಿಸಿ ಮುಂದುವರಿಯಬೇಕಿದೆ’ ಎಂದು ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕರಾದ ಬೆಟ್ಟಯ್ಯ ಕೋಟೆ ತಿಳಿಸಿದರು.
ಶ್ರೇಣೀಕೃತ ಜಾತಿ ವ್ಯವಸ್ಥೆಗೆ ಮುನ್ನಡಿ ಬರೆದು ಭಾರತವನ್ನು ಅಂಧಕಾರಕ್ಕೆ ತಳ್ಳಿದ್ದ ಮನುಸ್ಮೃತಿಯನ್ನು ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಸುಟ್ಟು ಹಾಕಿ ಇಂದಿಗೆ 98 ವರ್ಷ ಕಳೆದಿದೆ. ಸ್ವಾತಂತ್ರ ಭಾರತಕ್ಕೆ ಸಂವಿಧಾನ ರೂಪಿಸುವ ಸಂದರ್ಭದಲ್ಲಿ ಸಮ ಸಮಾಜದ ನಿರ್ಮಾಣದ ಕನಸು ಹೊತ್ತು, ಸಮಾನತೆ, ಸಹೋದರತೆ, ಭ್ರಾತೃತ್ವದ ಆಶಯದೊಂದಿಗೆ ಸಂವಿಧಾನವನ್ನು ರೂಪಿಸಿಕೊಂಡೆವು. ಈ ಸಂವಿಧಾನ ರಚನೆಗೆ ಬಾಬಾ ಸಾಹೇಬರ ಕೊಡುಗೆ ಅಪಾರ ಎಂದರು.
‘ಸಮಾನತೆ ಸಾರಿದ ಬೌದ್ಧ ತತ್ವ ಪ್ರಣೀತ, ಪ್ರಜಾತಾಂತ್ರಿಕ ಸಂವಿಧಾನವನ್ನು ನಾವು ರೂಪಿಸಿಕೊಂಡಿದ್ದನ್ನು ಸಹಿಸಿಕೊಳ್ಳದ ಶಕ್ತಿ ಮತ್ತಷ್ಟು ಬಲಗೊಳ್ಳುತ್ತಿವೆ’ ಎಂದರು.
ಮಹೇಶ್ ಮಲಾರ, ರಾಜಶೇಖರ್, ಜೀವಿಕ ಬಸವರಾಜು, ಕೃಷ್ಣ, ಗೋಪಾಲ, ಮಹೇಶ, ಸುರೇಶ, ದಾಸಯ್ಯ, ಸಿದ್ದರಾಜು, ಅಂಕಯ್ಯ, ಹೆಗ್ಗನೂರು ನಿಂಗರಾಜು, ಹೈರಿಗೆ ಶಿವರಾಜು , ಹಿಟ್ನಾ ರಾಜಣ್ಣ, ಶಿವಶಂಕರ್, ಕಾಳಸ್ವಾಮಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.