
ಮೈಸೂರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಗ್ರಾಮ್ (ಗ್ರಾಸ್‌ರೂಟ್ಸ್ ರಿಸರ್ಚ್ ಅಂಡ್ ಅಡ್ವೊಕೆಸಿ ಮೂವ್‌ಮೆಂಟ್) ಸಹಯೋಗದಲ್ಲಿ ಕೈಗೊಂಡಿರುವ ‘ಸ್ವಾಸ್ಥ್ಯ ಸ್ವರಾಜ್’ಗಾಗಿ ಯೋಜನೆಯಡಿ ಆರೋಗ್ಯ ಕ್ರಿಯಾಯೋಜನೆ ತಯಾರಿ ಆರಂಭಿಸಲಾಗಿದೆ.
ಯೋಜನೆಯಡಿ ಹುಣಸೂರಿನ ಗ್ರಾಮ ಆರೋಗ್ಯ ನೈರ್ಮಲ್ಯ ಮತ್ತು ಪೌಷ್ಟಿಕ ಸಮಿತಿಗಳ ಮುಂದಾಳತ್ವದಲ್ಲಿ ಗ್ರಾಮ ಆರೋಗ್ಯ ಕ್ರಿಯಾ ಯೋಜನೆ ಸಿದ್ಧಪಡಿಸಲಾಗುತ್ತಿದೆ.
ಇದರ ಭಾಗವಾಗಿ ‘ಗ್ರಾಮ್’ ಹೊರತಂದಿರುವ ‘ಆರೋಗ್ಯ ಕ್ರಿಯಾ ಯೋಜನಾ ಮಾರ್ಗದರ್ಶಿ’ ಪ್ಲಿಪ್‌ಚಾರ್ಟ್ ಹಾಗೂ ಜಾಗೃತಿ ಪೋಸ್ಟರ್‌ಗಳನ್ನು ಜಿಲ್ಲಾ ಪಂಚಾಯಿತಿ ಸಿಇಒ ಎಸ್.ಯುಕೇಶ್‌ಕುಮಾರ್ ಶುಕ್ರವಾರ ಮೈಸೂರಿನ ತಮ್ಮ ಕಚೇರಿಯಲ್ಲಿ ಬಿಡುಗಡೆ ಮಾಡಿದರು.
‘ಆರೋಗ್ಯವಂತ ಹಳ್ಳಿಗಳ ನಿರ್ಮಾಣದ ದಿಕ್ಕಿನಲ್ಲಿ ಯೋಜನೆಯು ಮಹತ್ವದ ಹೆಜ್ಜೆಯಾಗಿದೆ. ಸುಸ್ಥಿರ ಹಾಗೂ ಸ್ವಾವಲಂಬಿ ಆರೋಗ್ಯ ವ್ಯವಸ್ಥೆ ನಿರ್ಮಾಣದ ಪ್ರಯತ್ನದ ಭಾಗವಾಗಿದೆ’ ಎಂದು ‘ಗ್ರಾಮ್’ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಬಸವರಾಜ್ ಆರ್. ಶ್ರೇಷ್ಠ ತಿಳಿಸಿದ್ದಾರೆ.
‘ಸ್ವಾಸ್ಥ್ಯ ಸ್ವರಾಜ್’ ಯೋಜನೆಯ ಸಂಯೋಜಕ ರವಿ ಸಿ.ಎಸ್. ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.