ADVERTISEMENT

‘ಮಾನವೀಯ ಮೌಲ್ಯ ಮುಖ್ಯವಾಗಲಿ’

​ಪ್ರಜಾವಾಣಿ ವಾರ್ತೆ
Published 29 ಜನವರಿ 2023, 16:13 IST
Last Updated 29 ಜನವರಿ 2023, 16:13 IST
ಮೈಸೂರಿನಲ್ಲಿ ಅದಮ್ಯ ರಂಗಶಾಲೆಯಿಂದ ದೇವರಾಜ ಎಸಿಪಿ ಎಂ.ಎನ್. ಶಶಿಧರ್, ಕ್ರೆಡಿಟ್ ಐ ವ್ಯವಸ್ಥಾಪಕ ಟ್ರಸ್ಟಿ ಎಂ.ಪಿ. ವರ್ಷ ಹಾಗೂ ಜಿಲ್ಲಾ ಸರ್ಕಾರಿ ನೌಕರರ ಸಂಘದ ಮಾಜಿ ಉಪಾಧ್ಯಕ್ಷ ಎನ್.ಸಿ. ನಾಗೇಶ್ ಅವರಿಗೆ ‘ಗಾಂಧಿ ಸದ್ಭಾವನಾ ಪ್ರಶಸ್ತಿ’ಯನ್ನು ಭಾನುವಾರ ಪ್ರದಾನ ಮಾಡಲಾಯಿತು. ಡಾ.ಕೆ.ಚಿದಾನಂದ ಗೌಡ, ಮಡ್ಡೀಕೆರೆ ಗೋಪಾಲ್,  ಅಂಶಿ ಪ್ರಸನ್ನಕುಮಾರ್, ಟಿ. ಸತೀಶ್ ಜವರೇಗೌಡ, ಚಂದ್ರು ಮಂಡ್ಯ ಇದ್ದರು

ಮೈಸೂರು: ‘ಮಹಾತ್ಮ ಗಾಂಧೀಜಿ ಹೇಳಿದ ಮಾನವೀಯ ಮೌಲ್ಯಗಳು ನಮಗೆ ಹೆಚ್ಚು ಮುಖ್ಯವಾಗಬೇಕು’ ಎಂದು ನಿವೃತ್ತ ಕುಲಪತಿ ಡಾ.ಕೆ. ಚಿದಾನಂದಗೌಡ ಹೇಳಿದರು.

ನಗರದ ಜಯಲಕ್ಷ್ಮೀಪುರಂನ ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಭಾನುವಾರ ನಡೆದ ‘ಗಾಂಧಿ ಸದ್ಭಾವನಾ ಪ್ರಶಸ್ತಿ’ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಗಾಂಧೀಜಿಗೆ ವಿಶ್ವದಾದ್ಯಂತ ಮಾನ್ಯತೆ ಇದೆ. ಸಾಮಾನ್ಯವಾಗಿ ವಿಶ್ವಸಂಸ್ಥೆಯಲ್ಲಿರುವ ವಿವಿಧ ದೇಶಗಳ ಧ್ವಜಗಳನ್ನು ಆಯಾ ದೇಶದ ಅಧ್ಯಕ್ಷ ಅಥವಾ ರಾಷ್ಟ್ರಪತಿ ನಿಧನರಾದಾಗ ಅರ್ಧ ಮಟ್ಟಕ್ಕೆ ಇಳಿಸಲಾಗುತ್ತದೆ. ಆದರೆ, ಗಾಂಧೀಜಿ ನಿಧನರಾದಾಗ ಎಲ್ಲ ದೇಶಗಳ ಧ್ವಜಗಳನ್ನೂ ಅರ್ಧಮಟ್ಟಕ್ಕೆ ಇಳಿಸಲಾಗಿತ್ತು. ಇದು ಅವರ ಮಾನವೀಯ ಮೌಲ್ಯಗಳಿಗೆ ದೊರೆತ ಗೌರವವಾಗಿದೆ’ ಎಂದು ತಿಳಿಸಿದರು.

ADVERTISEMENT

ಅದ್ಯಮ ರಂಗಶಾಲೆಯ ಮಕ್ಕಳು ಅಭಿನಯಿಸಿದ ‘ಪಂಚತಂತ್ರ’ ನಾಟಕಕ್ಕೆ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಚಾಲನೆ ನೀಡಿ ಮಾತನಾಡಿ, ‘ಗಾಂಧಿ ವಿಚಾರಧಾರೆ ಎಲ್ಲ ಕಾಲಕ್ಕೂ ಪ್ರಸ್ತುತ’ ಎಂದರು.

ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಮಾತನಾಡಿದರು.

ಸ್ಪಂದನ ಸಾಂಸ್ಕೃತಿಕ ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷ ಟಿ.ಸತೀಶ್ ಜವರೇಗೌಡ ಅಭಿನಂದನಾ ಭಾಷಣ ಮಾಡಿದರು. ಅದಮ್ಯ ರಂಗಶಾಲೆಯ ಕಾರ್ಯದರ್ಶಿ ಚಂದ್ರು ಮಂಡ್ಯ, ಗಣೇಶ್, ಲೋಕೇಶ್ ಹುಣಸೂರು, ಸತೀಶ್‌ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.