ಬೆಟ್ಟದಪುರ: ಸಮೀಪದ ಕಣಗಾಲು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಎಂ.ಟಿ ಹನುಮಂತು ಹಾಗೂ ಉಪಾಧ್ಯಕ್ಷರಾಗಿ ನರಸಯ್ಯ ಅವರು ಸೋಮವಾರ ಅವಿರೋಧ ಆಯ್ಕೆಯಾದರು.
ಸಂಘದ ಕಚೇರಿಯಲ್ಲಿ ತೆರವಾಗಿದ್ದ ಸ್ಥಾನಗಳಿಗೆ ಚುನಾವಣೆ ನಡೆಯಿತು. ಒಂದೊಂದೇ ನಾಮಪತ್ರ ಸಲ್ಲಿಕೆ ಆದ ಹಿನ್ನೆಲೆಯಲ್ಲಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು ಎಂದು ಚುನಾವಣಾಧಿಕಾರಿ ಹಿತೇಂದ್ರ ಘೋಷಣೆ ಮಾಡಿದರು.
ಜೆಡಿಎಸ್ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
ನೂತನ ಅಧ್ಯಕ್ಷ ಎಂ.ಟಿ.ಹನುಮಂತು ಮಾತನಾಡಿ, ‘ಸಂಘದ ಅಭಿವೃದ್ಧಿ ಮತ್ತು ರೈತರ ಪರವಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ಎಲ್ಲಾ ನಿರ್ದೇಶಕರು ಮತ್ತು ಸದಸ್ಯರು ಸಹಕಾರ ನೀಡಬೇಕು. ರೈತರಿಗೆ ಸಿಗುವಂತ ಎಲ್ಲಾ ಸೌಲಭ್ಯಗಳನ್ನು ಸಕಾಲದಲ್ಲಿ ಸಿಗುವಂತೆ ಮಾಡಲಾಗುವುದು’ ಎಂದರು.
ಸಂಘದ ನಿರ್ದೇಶಕ ಪುಟ್ಟರಾಜೇಗೌಡ, ಅಣ್ಣೆಗೌಡ, ಬಲರಾಮೇಗೌಡ, ಪುಟ್ಟರಾಜೇಗೌಡ, ಗೌರಮ್ಮ, ಪಾರ್ವತಮ್ಮ, ವೆಂಕಟನಾಯಕ, ಮಾಜಿ ಅಧ್ಯಕ್ಷ ಮಂಜುನಾಥ್, ರಾಜಶೇಖರ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಮಹದೇವ್, ಮುಖಂಡರಾದ ನಾಗಯ್ಯ, ಪುಟ್ಟರಾಜು, ಶ್ರೀನಿವಾಸ್, ವೆಂಕಟೇಶ್, ವೈರಮುಡಿಶೆಟ್ಟಿ, ಪ್ರತಾಪ್, ಪುಟ್ಟಸ್ವಾಮಿ, ಜಗದೀಶ್, ಮನುಗನಹಳ್ಳಿ ಪ್ರಕಾಶ್, ಸಂಘದ ಸಿಇಒ ಇರ್ಫಾನ್ ಅಹಮದ್, ಸಿಬ್ಬಂದಿ ಪ್ರಸನ್ನ, ಪಲ್ಲವಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.