ADVERTISEMENT

ಕನ್ನಡ ಬೇಡ ಎನ್ನುವವರು ಭಾಷಾ ದ್ರೋಹಿಗಳು: ಮೈಸೂರು ಕೃಷ್ಣಮೂರ್ತಿ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2025, 6:13 IST
Last Updated 16 ಡಿಸೆಂಬರ್ 2025, 6:13 IST
ಕರ್ನಾಟಕ ಮುಕ್ತಕ ಸಾಹಿತ್ಯ ಅಕಾಡೆಮಿ ಟ್ರಸ್ಟ್‌ ವತಿಯಿಂದ ಸೋಮವಾರ ಸಾಧಕರನ್ನು ಸನ್ಮಾನಿಸಲಾಯಿತು 
ಕರ್ನಾಟಕ ಮುಕ್ತಕ ಸಾಹಿತ್ಯ ಅಕಾಡೆಮಿ ಟ್ರಸ್ಟ್‌ ವತಿಯಿಂದ ಸೋಮವಾರ ಸಾಧಕರನ್ನು ಸನ್ಮಾನಿಸಲಾಯಿತು    

ಮೈಸೂರು: ‘ಕನ್ನಡ ಬೇಡ ಎನ್ನುವವರು ಭಾಷಾ ದ್ರೋಹಿಗಳು’ ಎಂದು ನಿವೃತ್ತ ಪ್ರಾಧ್ಯಾಪಕ ಮೈಸೂರು ಕೃಷ್ಣಮೂರ್ತಿ ಹೇಳಿದರು. 

ಕರ್ನಾಟಕ ಮುಕ್ತಕ ಸಾಹಿತ್ಯ ಅಕಾಡೆಮಿ ಟ್ರಸ್ಟ್‌ ಸೋಮವಾರ ನಗರದ ಎಂಜಿನಿಯರ್‌ಗಳ ಸಂಸ್ಥೆ ಸಭಾಂಗಣದಲ್ಲಿ ಏರ್ಪಡಿಸಿದ್ದ 70ನೇ ಕನ್ನಡ ರಾಜ್ಯೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಕನ್ನಡವು ರಾಜ್ಯ, ದೇಶ ಹಾಗೂ ವಿಶ್ವಕ್ಕೆ ಬೇಕಾದುದು. ಏಕೆಂದರೆ, ಕನ್ನಡಿಗರು ಎಲ್ಲೆಡೆ ಸೇವೆ ಸಲ್ಲಿಸುತ್ತಿದ್ದಾರೆ. ಪರಿಸ್ಥಿತಿ ಹೀಗಿದ್ದರೂ ಕನ್ನಡ ಕಲಿತರೆ ಕೆಲಸ ಸಿಗುವುದಿಲ್ಲ ಎಂದು ಕೆಲವರು ಹೇಳುತ್ತಿರುವುದು ಸರಿಯಲ್ಲ’ ಎಂದರು.

ADVERTISEMENT

ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಅಂಶಿ ಪ್ರಸನ್ನಕುಮಾರ್‌ ಹಾಗೂ ಪ್ರೊ.ಕೆ. ರಾಮಮೂರ್ತಿ ರಾವ್‌, ಜೆಎಸ್ಎಸ್‌ ಸಂಗೀತಸಭಾ ಟ್ರಸ್ಟ್‌ನ್‌ ಸಂಗೀತ ಸೇವಾನಿಧಿ ಪ್ರಶಸ್ತಿ ಪುರಸ್ಕೃತ ಕರ್ನಾಟಕ ಮುಕ್ತಕ ಸಾಹಿತ್ಯ ಅಕಾಡೆಮಿ ಟ್ರಸ್ಟ್‌ ಸಂಸ್ಥಾಪಕ ಎಸ್‌. ರಾಮಪ್ರಸಾದ್‌ ಅವರನ್ನು ಸನ್ಮಾನಿಸಲಾಯಿತು.

ಸಂಸ್ಕೃತ ವಿದ್ವಾಂಸ ಎಚ್‌.ವಿ. ನಾಗರಾಜರಾವ್‌ ಅಧ್ಯಕ್ಷತೆ ವಹಿಸಿದ್ದರು. ರಂಗನಾಥ್‌ ಮೈಸೂರು, ಸುಕನ್ಯಾ ಪ್ರಭಾಕರ್‌, ಮಂಜಪ್ಪಶೆಟ್ಟಿ ಮಸಗಲಿ, ಎಂ. ಚಂದ್ರಶೇಖರ್‌, ಎಚ್.ಆರ್‌. ಸುಂದರೇಶನ್‌, ಕೃಷ್ಣ, ಕೆ. ಲೀಲಾ ಪ್ರಕಾಶ್‌, ಸೌಗಂಧಿಕಾ ಜೋಯಿಸ್‌, ಕೃ.ಪಾ. ಮಂಜುನಾಥ್‌, ಕೆ.ಟಿ. ಶ್ರೀಮತಿ, ಪ್ರೊ.ಆರ್‌.ಎ. ಕುಮಾರ್‌, ಕಾರ್ಯದರ್ಶಿ ಕಿರಣ್‌ ಸಿಡ್ಲೇಹಳ್ಳಿ ಪಾಲ್ಗೊಂಡಿದ್ದರು.