
ನಂಜನಗೂಡು: ನಗರದ ಕಪಿಲಾ ನದಿ ಸ್ನಾನ ಘಟ್ಟದಲ್ಲಿ ಬುಧವಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವ ಸೇನೆ ಸಂಘಟನೆಯಿಂದ ಮಹಿಳೆಯರು ಬಟ್ಟೆ ಬದಲಿಸಲು ತಾತ್ಕಾಲಿಕ ಕೊಠಡಿಯನ್ನು ಅಳವಡಿಸಲಾಯಿತು.
ಯುವ ಸೇನೆ ಅಧ್ಯಕ್ಷ ಶ್ರೀಕಂಠ ಮಾತನಾಡಿ, ‘ಪ್ರತಿದಿನ ಸಾವಿರಾರು ಮಹಿಳಾ ಭಕ್ತರು ಕಪಿಲಾ ನದಿಯಲ್ಲಿ ಪುಣ್ಯಸ್ನಾನ ಮಾಡುತ್ತಾರೆ. ಸ್ನಾನದ ನಂತರ ಬಟ್ಟೆ ಬದಲಿಸಲು ದೇವಲಾಯದ ಆಡಳಿತ ಮಂಡಳಿ ಸೌಲಭ್ಯ ಒದಗಿಸಿಲ್ಲ, ಈಚೆಗೆ ಯುವ ಬ್ರಿಗೇಡ್ ಸಂಘಟನೆ ತಾತ್ಕಾಲಿಕ ಕೊಠಡಿಯನ್ನು ಅಳವಡಿಸುವ ಮೂಲಕ ಪ್ರೇರಣೆ ನೀಡಿತು. ಅವರನ್ನು ಅನುಸರಿಸಿ ನಮ್ಮ ಸಂಘಟನೆಯಿಂದ ಕೊಠಡಿಯನ್ನು ಅಳವಡಿಸಿದ್ದೇವೆ. ಇನ್ನೂ ಹೆಚ್ಚಿನ ಬಟ್ಟೆ ಬದಲಿಸುವ ಕೊಠಡಿಗಳ ಅವಶ್ಯಕತೆಯಿದ್ದು, ಸ್ವಯಂ ಸೇವಾ ಸಂಸ್ಥೆಗಳು ಗಮನಹರಿಸಬೇಕು’ ಎಂದು ಮನವಿ ಮಾಡಿದರು.
ಯುವಸೇನೆಯ ಮನೋಜ್ ಕುಮಾರ್, ಜೈಚಂದ್ರ, ಕುಮಾರ್, ಮಾಧುರಾವ್, ಅನಿಲ್ ಬೋಗಶೆಟ್ಟಿ, ವಿನಯ್, ಯುವ ಬ್ರಿಗೆಡ್ ರಾಜ್ಯ ಸಂಚಾಲಕ ಚಂದ್ರಶೇಖರ್, ರವಿ, ಅರ್ಜುನ್ ಉಪಸ್ಥತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.