ಮೈಸೂರು: ‘ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಎಫ್‌ಐಆರ್ ದಾಖಲಿಸಿರುವುದು, ತಾಲಿಬಾನಿ ಸರ್ಕಾರ ಸ್ಥಾಪಿಸಲು ಇಟ್ಟಿರುವ ಹೆಜ್ಜೆಯಾಗಿದೆ’ ಎಂದು ಮಾಜಿ ಸಂಸದ ಪ್ರತಾಪ ಸಿಂಹ ಆರೋಪಿಸಿದರು.
ನಗರದಲ್ಲಿ ಸೋಮವಾರ ಪತ್ರಕರ್ತರೊಂದಿಗೆ ಮಾತನಾಡಿ, ‘ದಕ್ಷಿಣ ಕನ್ನಡದಲ್ಲಿ ಹಿಂದೂಗಳಲ್ಲಿ ಅಭದ್ರತೆ, ಆತಂಕವಿದೆ. ಪ್ರವೀಣ್ ನೆಟ್ಟಾರ್ ಹತ್ಯೆಯಾಗದಿದ್ದರೆ ಈ ಸರಣಿ ಹತ್ಯೆ ನಡೆಯುತ್ತಿದ್ವಾ? ಪ್ರವೀಣ್ ಕೊಂದವರಿಗೆ ಸರಿಯಾದ ಪಾಠ ಕಲಿಸಿದ್ದರೆ ಹತ್ಯೆಗಳು ಆಗುತ್ತಿರಲಿಲ್ಲ’ ಎಂದು ಪ್ರತಿಪಾದಿಸಿದರು.
‘ಪಿಎಫ್‌ಐ, ಕೆಎಫ್‌ಡಿಯನ್ನು ಮಟ್ಟ ಹಾಕುವುದು ಬಿಟ್ಟು, ಹಿಂದೂ ನಾಯಕರ ವಿರುದ್ಧ ಕ್ರಮ ಕೈಗೊಳ್ಳುವುದು, ನೋಟಿಸ್ ನೀಡುವುದು ಹಿಂದೂಗಳ ಧ್ವನಿ ಅಡಗಿಸಲು ಮಾಡುತ್ತಿರುವ ಕೆಲಸ’ ಎಂದು ದೂರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.