ADVERTISEMENT

ಮೈಸೂರು ದಸರಾ: ಕುಶಾಲತೋಪು ತಾಲೀಮು, ಬೆದರಿದ 3 ಆನೆಗಳು

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2021, 9:08 IST
Last Updated 30 ಸೆಪ್ಟೆಂಬರ್ 2021, 9:08 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮೈಸೂರು: ದಸರಾ ಮಹೋತ್ಸವದ ಜಂಬೂಸವಾರಿಯಲ್ಲಿ ಕುಶಾಲತೋಪು ಸಿಡಿಸುವ ತಾಲೀಮು ಗುರುವಾರ ಅರಮನೆ ಆವರಣದ ಮಾರಮ್ಮನ ದೇಗುಲದ ಸಮೀಪ ನಡೆಯಿತು.

ನಗರ ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿ 7 ಫಿರಂಗಿ ಗಾಡಿಗಳಿಂದ ಒಟ್ಟು 21 ಬಾರಿ ಕುಶಾಲತೋಪುಗಳನ್ನು ಸಿಡಿಸಿದರು.
ಲಕ್ಷ್ಮಿ ಹಾಗೂ ಗೋಪಾಲಸ್ವಾಮಿ ಆನೆಗಳು ತುಸು ಹೆಚ್ಚಾಗಿಯೇ ಬೆದರಿದವು. ಅಶ್ವತ್ಥಾಮ ಆನೆ ಹಾಗೂ ಕೆಲ ಆಶ್ವಗಳು ಕೊಂಚ ಬೆದರಿದವು.

ಮತ್ತೆ ಎರಡು ಬಾರಿ ಇದೇ ಬಗೆಯ ತಾಲೀಮು ನಡೆಯಲಿದೆ‌. ಮೊದಲ ತಾಲೀಮಿಗೆ ಆನೆಗಳು ಸ್ಪಂದಿಸಿದ ರೀತಿ ತೃಪ್ತಿಕರವಾಗಿದೆ ಎಂದು ಡಿಸಿಎಫ್ ಕರಿಕಾಳನ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.