ಹುಣಸೂರು: ಬೇಸಿಗೆ ಝಳದಿಂದ ತತ್ತರಿಸಿದ ನಾಗರಹೊಳೆ ಅಭಯಾರಣ್ಯಕ್ಕೆ ಎರಡು ದಿನ ಮಳೆಯಾಗಿ ಪ್ರಾಣಿಗಳ ನೀರಿನ ದಾಹ ನೀಗಿಸಿದೆ.
‘ನಾಗರಹೊಳೆಯ 8 ವಲಯದಲ್ಲೂ ಮಾರ್ಚ್ 16 ಮತ್ತು 17ರ ರಾತ್ರಿ ಭಾರಿ ಮಳೆಯಾಗಿದ್ದು ಅರಣ್ಯದಲ್ಲಿ ಅಲ್ಲಲ್ಲಿ ನೀರು ನಿಂತು ವನ್ಯಪ್ರಾಣಿಗಳಿಗೆ ಪೂರಕವಾಗಿದೆ’ ಎಂದು ನಾಗರಹೊಳೆ ಎಸಿಎಫ್ ಲಕ್ಷ್ಮಿಕಾಂತ್ ತಿಳಿಸಿದ್ದಾರೆ.
ಬೇಸಿಗೆ ಬಿಸಿಲು ಆರಂಭವಾಗುತ್ತಿದ್ದಂತೆ ಅರಣ್ಯದ ಹಳ್ಳಗಳಲ್ಲಿ ನೀರು ಬತ್ತಿದ್ದು, ಈ ಮಳೆಯಿಂದಾಗಿ ಸಸ್ಯ ಪ್ರಾಣಿಗಳಿಗೆ ಮೇವು ಸಿಗಲಿದೆ. ಬೇಸಿಗೆ ಬಿಸಿಲಿಗೆ ಅರಣ್ಯ ಒಣಗಿದ್ದು ಬೆಂಕಿ ಆತಂಕ ಇತ್ತು, ಈಗ ಅದು ಅಲ್ಪ ಪ್ರಮಾಣದಲ್ಲಿ ತಪ್ಪಿದೆ ಎಂದು ಹೇಳಿದರು.
‘ಮುಂದಿನ ದಿನಗಳಲ್ಲಿ ಮುಂಗಾರು ಮುಂದುವರಿದಲ್ಲಿ ವನ್ಯಪ್ರಾಣಿಗಳು ನೀರಿನ ಕೊರತೆಯಿಂದ ಮುಕ್ತವಾಗಲಿದೆ. ಅರಣ್ಯದಲ್ಲಿನ ಸೋಲಾರ್ ಪಂಪ್ ದಿನದ 24 ಗಂಟೆ ಕೆಲಸ ನಿರ್ವಹಿಸುತ್ತಿದ್ದು ಕೆಲವೊಂದು ಕೆರೆಗಳಿಗೆ ನೀರು ಸೇರಿಸುವ ಕೆಲಸ ನಿರಂತರವಾಗಿದೆ’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.